8:15 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಫೇಸ್ಬುಕ್, ವಾಟ್ಸಾಪ್ ಬೆನ್ನಲ್ಲೇ ದೇಶದ ಹಲವೆಡೆ ಜಿಯೋ ಮೊಬೈಲ್ ನೆಟ್ ವರ್ಕ್ ಡೌನ್: ಗ್ರಾಹಕರಲ್ಲಿ ಕ್ಷಮೆಯಾಚಿಸಿದ ಕಂಪನಿ!

06/10/2021, 20:11

ಹೊಸದಿಲ್ಲಿ(reporterkarnataka.com);

ಮೊನ್ನೆಯಷ್ಟೆ ಫೇಸ್‌ಬುಕ್‌, ವಾಟ್ಸಾಪ್, ಇನ್ಟಾಗ್ರಾಂ ಸರ್ವರ್ ಡೌನ್ ಆಗಿದ್ದು, ಇಂದು ದೇಶದ ಹಲವೆಡೆ ಜಿಯೋ ಮೊಬೈಲ್ ನೆಟ್  ವರ್ಕ್ ಡೌನ್ ಆಗಿದೆ. ಈ ಕುರಿತು ಹಲವಾರು ಮಂದಿ ಜಿಯೋ ಬಳಕೆದಾರರು ಟ್ವಿಟರ್ ನಲ್ಲಿ ನೆಟ್ ವರ್ಕ್  ಡೌನ್ ಆಗಿದೆ ಎಂದು ದೂರುಗಳನ್ನು ನೀಡಿದ್ದಾರೆ. #jioddown ಎಂಬುದು ಟ್ವಿಟರ್ ಟ್ರೆಂಡಿಂಗ್ ಕೂಡಾ ಆಗಿದೆ.

ಡೌನ್ ಡಿಟೆಕ್ಟರ್  (Downdetector)ನಲ್ಲಿ ಸುಮಾರು 4000 ಮಂದಿ ಬೆಳಗ್ಗೆಯಿಂದ ಜಿಯೋ ನೆಟ್ ವರ್ಕ್ ಸಮಸ್ಯೆ ಇದೆ ಎಂದು ದೂರು ನೀಡಿದ್ದಾರೆ.

ರಿಲಯನ್ಸ್ ಜಿಯೋದ ಅಧಿಕೃತ ಗ್ರಾಹಕ ಸೇವಾ ಟ್ವಿಟರ್ ಖಾತೆಯಾದ @JioCare ಖಾತೆಗೆ ಸಾಕಷ್ಟು ಮಂದಿ ದೂರುಗಳನ್ನು ನೀಡಿದ್ದಾರೆ. ದೇಶದ ವಿವಿಧ ಕಡೆಗಳಿಂದ ಈ ದೂರುಗಳು ಬಂದಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಿಯೋ ನಿಮಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಎಂದಿದೆ.

ಇದರ ಜೊತೆಗೆ ಇಂಟರ್ನೆಟ್ ಸೇವೆಗಳನ್ನು ಬಳಸುವಾಗ ಮತ್ತು ಕರೆ/ಎಸ್‌ಎಂಎಸ್ ಮಾಡುವಾಗ ಇಂತಹ ಸಮಸ್ಯೆ ಎದುರಾಗಬಹುದು. ಈ ಸಮಸ್ಯೆ ತಾತ್ಕಾಲಿಕವಾಗಿದ್ದು, ಆದಷ್ಟು ಬೇಗ ಸಮಸ್ಯೆ ಪರಿಹರಿಸಲಾಗುತ್ತದೆ ಎಂದು ಜಿಯೋ ಹೇಳಿದೆ.

ಇತ್ತೀಚಿನ ಸುದ್ದಿ

ಜಾಹೀರಾತು