8:17 PM Friday13 - February 2026
ಬ್ರೇಕಿಂಗ್ ನ್ಯೂಸ್
ಒಟಿಪಿ ಸೋರಿಕೆ: ವಂಚನೆ ತಡೆಗಟ್ಟಲು ಏರ್‌ ಟೆಲ್‌ ನಿಂದ ಹೊಸ ಎಐ ಚಾಲಿತ… ಮಾಜಿ ಪ್ರಧಾನಿ ಎಚ್ಡಿಡಿ ಮಧ್ಯಪ್ರವೇಶ: ಕಾಫಿ ತೋಟಗಳ ಆನ್-ಲೈನ್ ಹರಾಜು ತಕ್ಷಣವೇ ಸ್ಥತಿತಗೊಳಿಸುವಂತೆ… ಕಾಲವೇ ಉತ್ತರ ಕೊಡುತ್ತೆ: ಸೋನಿಯಾ, ರಾಹುಲ್, ಪ್ರಿಯಾಂಕ ಭೇಟಿ ಬಳಿಕ ಡಿಸಿಎಂ ಡಿಕೆಶಿ… ಶಿವಣ್ಣನ ಶಿವಭಕ್ತಿ: ಶಿವರಾತ್ರಿಯ ಅಂಗವಾಗಿ 37 ವರ್ಷಗಳಿಂದ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ! ದಕ್ಷಿಣ ಕೊಡಗಿನಲ್ಲಿ ಆತಂಕದ ಸೃಷ್ಟಿಸಿದ್ದ ವ್ಯಾಘ್ರ ಕೊನೆಗೂ ಸೆರೆ: ಬಲೆಗೆ ಬಿದ್ದ ಗಂಡು… ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ: ಪ್ರತಾಪ್‌ ಸಿಂಹ ಕಿಡಿ ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ…

ಇತ್ತೀಚಿನ ಸುದ್ದಿ

ಜೀತ ಇನ್ನೂ ಜೀವಂತ!: ಸುಳ್ಯದ ಕರಿಕಳಂನಲ್ಲಿ ಬಾಲ ಕಾರ್ಮಿಕ ಪದ್ಧತಿ ಬೆಳಕಿಗೆ; ಜಮೀನ್ದಾರನ ಮನೆಯಲ್ಲಿ 8-10 ಮಕ್ಕಳು ಪತ್ತೆ !!

10/07/2021, 20:50

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com

ಬುದ್ಧಿವಂತರ ನಾಡು ಎಂದು ಕರೆಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲರು ತಲೆ ತಗ್ಗಿಸುವಂತಹ ಘಟನೆ ಬೆಳಕಿಗೆ ಬಂದಿದೆ. ಬಚ್ ಪನ್ ಬಚಾವೋ ಸಂಸ್ಥೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಸೇರಿದಂತೆ ವಿವಿಧ ಇಲಾಖೆಗಳು ನಡೆಸಿದ ದಾಳಿಯಿಂದ ಇಲ್ಲಿನ ಸುಳ್ಯ ತಾಲೂಕಿನ ಪಂಜ ಗ್ರಾಮದ ಕರಿಕಳಂ ಎಂಬಲ್ಲಿ ಜೀತ ಬಾಲ ಕಾರ್ಮಿಕ ಪದ್ದತಿ ಬೆಳಕಿಗೆ ಬಂದಿದೆ.

4ರ ಹರೆಯದ ಮಕ್ಕಳಿಂದ ಆರಂಭಗೊಂಡು ಸುಮಾರು 10-12 ವರ್ಷದೊಳಗಿನ 8 -10 ಮಕ್ಕಳು ಕರಿಕಳಂನ ಜಮೀನುದಾರ ವಿಶ್ವನಾಥ ಭಟ್ ಅವರ ಮನೆಯಲ್ಲಿ ಪತ್ತೆಯಾಗಿದ್ದಾರೆ. ಮಕ್ಕಳನ್ನು ಇಟ್ಟುಕೊಂಡ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಕೂಡ ಇವರ ಬಳಿ ಇಲ್ಲದಿರುವುದರಿಂದ ಪ್ರಕರಣ ದಾಖಲಿಸಲಾಗಿದೆ.

ವಿವಿಧ ಇಲಾಖೆಗಳು ನಡೆಸಿದ ಸಂಯುಕ್ತ ಕಾರ್ಯಾಚರಣೆ ವೇಳೆ ವಿಶ್ವನಾಥ ಭಟ್ ದಂಪತಿ ಕಾನೂನುಬಾಹಿರವಾಗಿ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ದುಡಿಸುವುದು ಬೆಳಕಿಗೆ ಬಂತು. ಈ ಮಕ್ಕಳ ತಂಡದಲ್ಲಿ 4ರ ಹರೆಯದ ಮಗು ಕೂಡ ಇದೆ ಎಂದರೆ ಯಾರು ಕೂಡ ಒಂದು ಕ್ಷಣ ಬೆಚ್ಚಿಬೀಳಬಹುದು.

ಮಕ್ಕಳನ್ನು ಜೀತ ಕಾರ್ಮಿಕತೆಗೆ ಒಳಪಡಿಸಿದ ಕುರಿತು ಸಾಮಾಜಿಕ ಸಂಘಟನೆಯಾದ ನೀತಿ ತಂಡ ಬಚ್ ಪನ್ ಬಚಾವೋ ಸಂಸ್ಥೆಗೆ ದೂರು ನೀಡಿತ್ತು. ಬಚ್ ಪನ್ ಬಚಾವೋ ಸಂಸ್ಥೆಯು ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕಿ ಪಲ್ಲವಿ ಆಕುರಾತಿ ಅವರಿಗೆ ದೂರು ನೀಡಿತ್ತು. ನಿರ್ದೇಶನಾಲಯದಿಂದ ದ.ಕ. ಜಿಲ್ಲಾಧಿಕಾರಿಗೆ ಈ ಕುರಿತು ಮಾಹಿತಿ ನೀಡಲಾಯಿತು. ನಂತರ ಬಚ್ ಪನ್  ಬಚಾವೋ ಆಂದೋಲನದ ಸಮನ್ವಯ ಅಧಿಕಾರಿ ವಿನು ವರ್ಗಿಸ್, ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ, ಬಾಲ ಕಾರ್ಮಿಕ ರಕ್ಷಣಾ ಅಧಿಕಾರಿಗಳು, ಕಾರ್ಮಿಕ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಸುಬ್ರಹ್ಮಣ್ಯ ಪೊಲೀಸರು ಹಾಗೂ ಪಂಜ ಗ್ರಾಮ ಪಂಚಾಯಿತಿ ಅಧಿಕಾರಿಗಳ ತಂಡ ವಿಶ್ವನಾಥ್ ಭಟ್ ಅವರ ನಿವಾಸಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ಯಾವುದೇ ದಾಖಲೆಗಳಿಲ್ಲದೆ ಕಾನೂನು ಬಾಹಿರವಾಗಿ ಮಕ್ಕಳನ್ನು ಹಾಗೂ ಹೆಂಗಸರನ್ನು ಕೆಲಸಕ್ಕೆ ಇಟ್ಟುಕೊಂಡ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳನ್ನು 48 ತಾಸಿನೊಳಗೆ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲು ಸೂಚಿಸಲಾಗಿದೆ.

ಈ ನಡುವೆ ಪುಟ್ಟ ಪುಟ್ಟ ಮಕ್ಕಳು ದನ ಮೇಯಿಸುವ ವೀಡಿಯೊವೊಂದು ಇತ್ತೀಚೆಗೆ  ವೈರಲ್ ಆಗಿತ್ತು. ಆ ಮೂಲಕ ಮಕ್ಕಳನ್ನು ದುಡಿಸುವ ಕೆಟ್ಟ ಸಂಪ್ರದಾಯ ಇನ್ನೂ ಮುಂದುವರಿದಿದೆ ಎಂಬ ಸಂದೇಶವನ್ನು ಅದು ಹೊರ ಜಗತ್ತಿಗೆ ಬಿತ್ತರಿಸಿತ್ತು.

ಕರಿಕಳಂ ಪ್ರದೇಶದಲ್ಲಿ ವಿಶ್ವನಾಥ್ ಭಟ್ ಅವರು ಪಾಳೆಗಾರಿಗೆ ನಡೆಸುತ್ತಿದ್ದಾರೆ. ಅವರು ಆಡಿದ್ದೇ ಆಟ ಎನ್ನುವ ಅಂಶ ಸ್ಥಳೀಯರಿಂದ ರಿಪೋರ್ಟರ್ ಕರ್ನಾಟಕಕ್ಕೆ ಲಭ್ಯವಾಗಿದೆ.

ಬಡ, ಪಾಪದ ಮಕ್ಕಳಿಗೆ ಶಿಕ್ಷಣ ಕೊಡಿಸುವುದಾಗಿ ನಂಬಿಸಿ, ಹುಷಾರಿಲ್ಲದ ಹೆಂಗಸರಿಗೆ ಔಷಧೋಪಚಾರ ಮಾಡಿಸುವುದಾಗಿ ಸುಳ್ಳು ಹೇಳಿ ವಿಶ್ವನಾಥ್ ಭಟ್ ಅವರು ಮಕ್ಕಳು -ಹೆಂಗಸರನ್ನು ದುಡಿಸುತ್ತಾರೆ. ನಂತರ ಅವರಿಗೆ ಸಂಬಳ ಕೂಡ ಕೊಡುವುದಿಲ್ಲ. ಸುತ್ತಮುತ್ತಲಿನ ಸರಕಾರಿ ಜಾಗವನ್ನು ಕೂಡ ಕಬಳಿಸಿದ್ದಾರೆ. ಯಾವ ಜಾಗದ ಹತ್ತಿರ ಹೋದರೂ ಇದು ನನ್ನ ಜಾಗ ಎಂದು ಬೆದರಿಸುತ್ತಾರೆ ಎಂದು ಸ್ಥಳೀಯ ನಿವಾಸಿ ಮೋನಪ್ಪ ಅವರು ಅಳಲು ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು