11:27 PM Saturday5 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ…

ಇತ್ತೀಚಿನ ಸುದ್ದಿ

ಜೇಸಿ ಬಿ.ಸಿ.ರೋಡ್ ಪವರ್ ಸ್ಟಾರ್ ಘಟಕ ಪದಗ್ರಹ: ಸುಬ್ರಹ್ಮಣ್ಯ ಕೆ. ನೂತನ ಅಧ್ಯಕ್ಷ

03/02/2022, 09:08

ಬಂಟ್ವಾಳ(reporterkarnataka.com): ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಜೇಸಿ ಬಿ.ಸಿ.ರೋಡ್ ಪವರ್ ಸ್ಟಾರ್ ಘಟಕದ ಪದಗ್ರಹಣ ಸಮಾರಂಭ ನಡೆಯಿತು. 

ಜೇಸಿ ಮಂಗಳೂರು ಇಂಪ್ಯಾಕ್ಟ್‌ ಪ್ರವರ್ತಿತ ಜೆಸಿಐ ಬಿ.ಸಿ. ರೋಡ್ ಪವರ್ ಸ್ಟಾರ್ ಗೆ ಸುಬ್ರಹ್ಮಣ್ಯ ಕೆ. ನೂತನ ಅಧ್ಯಕ್ಷರಾಗಿ, ಸುಧೀರ್ ಕುಮಾರ್ ಶೆಟ್ಟಿ ಕಾರ್ಯದರ್ಶಿಯಾಗಿ, ಮರೀಟಾ ಕ್ರಿಸ್ಟೀನ್ ಡಿ. ಜತೆ ಕಾರ್ಯದರ್ಶಿಯಾಗಿ,  ಸುಭಾಶ್  ರೈ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು.

ಉಪಾಧ್ಯಕ್ಷರಾಗಿ ಮಹೇಶ್ ಶೆಟ್ಟಿ, ಅಶ್ರಫ್ ಎಂ.ಬಿ, ಸತೀಶ್ ಸಂಪಾಜೆ, ಸುನಿಲ್ ಮುಡ್ಡಾಜೆ ರಾಯಿ, ಸುರೇಶ್ ಮರೋಳಿ, ಪ್ರಥಮ ಮಹಿಳೆಯಾಗಿ ಪುನೀತಾ ಎಸ್., ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ ಕನಿಷ್ಕ್ ಎಸ್. ರೈ, ನಿರ್ದೇಶಕರು ಮತ್ತು ಘಟಕದ ವಿವಿಧ ಜವಾಬ್ದಾರಿಗಳನ್ನು ಅರ್ಜುನ್ ಆಳ್ವ, ಅನುಪಮಾ ಎಸ್. ಕಡಬ, ರವಿರಾಜ್ ಶೆಟ್ಟಿ ಪಾಲ್ತಾಜೆ, ಸುಹಾಸ್ ಕೆ. ಕಲ್ಲಡ್ಕ, ದೀಪಕ್ ರೈ ದೇರಳಕಟ್ಟೆ, ರೋಹಿತ್ ರಾಯಿ, ನಾಗರಾಜ್ ಶೆಟ್ಟಿ ಮೊಡಂಕಾಪು, ಶರತ್ ಕಲ್ಲಡ್ಕ, ವಿದ್ಯಾ ಎಸ್. ರೈ, ಭವ್ಯಾ ಸುಧೀರ್ ಶೆಟ್ಟಿ, ಬೇಬಿ ಸತೀಶ್ ಅವರಿಗೆ ನಿಯೋಜಿಸಲಾಯಿತು.

ಬಿ.ಸಿ.ರೋಡ್‌ನ ವಕೀಲ ಕಾರ್ತಿಕ್ ಎಂ . ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೈದ್ಯರಾದ ಡಾ.ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಪೂರ್ವ ವಲಯಾಧ್ಯಕ್ಷರಾದ ರಾಕೇಶ್ ಕುಂಜೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಲಯ ಉಪಾಧ್ಯಕ್ಷ ದೀಪಕ್ ಗಂಗೂಲಿ ಗೌರವ ಅತಿಥಿಗಳಾಗಿದ್ದರು. ಜೆಸಿಐ ಮಂಗಳೂರು ಇಂಪ್ಯಾಕ್ಟ್ ಅಧ್ಯಕ್ಷರಾದ ಅನೀಶಾ ಗಂಗೂಲಿ, ಪ್ರಾಜೆಕ್ಟ್ ಡೈರೆಕ್ಟರ್ ಬಿ.ಡಿ.ದತ್ತಾತ್ತೇಯ, ಜೆಸಿಐ ಮಂಗಳೂರು ಇಂಪ್ಯಾಕ್ಟ್ ನಿಕಟಪೂರ್ವ ಅಧ್ಯಕ್ಷರಾದ ರವಿರಾಜ್ ಎ.ಪಿ. ಮತ್ತಿತರರು ಉಪಸ್ಥಿತರಿದ್ದರು. ರಾಷ್ಟ್ರೀಯ ತರಬೇತುದಾರ ಚೇತನಾ ದತ್ತಾತ್ರೇಯ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು