ಇತ್ತೀಚಿನ ಸುದ್ದಿ
ಜಯಪುರ: 20ಕ್ಕೂ ಹೆಚ್ಚು ಮಂದಿಯನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ; 13 ಮಂದಿ ಆಸ್ಪತ್ರೆಗೆ
10/02/2025, 13:09
![](https://reporterkarnataka.com/wp-content/uploads/2025/02/IMG-20250210-WA0010.jpg)
ಶಶಿ ಬೆತ್ತದಕೊಳಲು ಕೊಪ್ಪ ಚಿಕ್ಕಮಗಳೂರು
info.reporterkarnataka@gmail.com
ಜಯಪುರ ಸಮೀಪದ ಗುಡ್ಡೆತೋಟ ಗ್ರಾಮ ಪಂಚಾಯತಿ ವ್ಯಾಪ್ತಿಯ ತೀರ್ಥಕೆರೆ ಬಳಿ ಸಾತುಕುಡಿಗೆ ಎಸ್ಟೇಟಿಗೆ ಸೇರಿದ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, ಸುಮಾರು 13 ಮಂದಿ ಗಾಯಗೊಂಡಿದ್ದಾರೆ.
ಟ್ರ್ಯಾಕ್ಟರ್ ನಲ್ಲಿ ಜಯಪುರದಿಂದ ಸಾತುಕುಡಿಗೆ ಎಸ್ಟೇಟ್ ಗೆ ಜನರನ್ನು ಕರೆದುಕೊಂಡು ಬರುವಾಗ ಈ ಘಟನೆ ನಡೆದಿದೆ. ಸುಮಾರು ಹದಿಮೂರು ಜನರಿಗೆ ಗಾಯಗಳಾಗಿದ್ದು ಜಯಪುರದ ಆಸ್ಪತ್ರೆಗೆ ಸೇರಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪ ಹಾಗೂ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂಬ ಮಾಹಿತಿಯಿದೆ.
ಟ್ರ್ಯಾಕ್ಟರ್ ನಲ್ಲಿ 20ಕ್ಕೂ ಹೆಚ್ಚು ಜನರಿದ್ದರು ಎನ್ನಲಾಗಿದೆ.
ಜಯಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.