11:01 AM Wednesday30 - October 2024
ಬ್ರೇಕಿಂಗ್ ನ್ಯೂಸ್
ಮಾಜಿ ಸಂಸದ ದ್ರುವನಾರಾಯಣ್ ಸ್ಮರಣಾರ್ಥ ಆಶ್ರಯ ಚಾರಿಟೀಸ್ ವತಿಯಿಂದ ಬಡಬಗ್ಗರಿಗೆ ವಿವಿಧ ಸವಲತ್ತು… ಅಧ್ಯಯನ ಪ್ರವಾಸ: ದಕ್ಷಿಣ ಕೊರಿಯಾಕ್ಕೆ ಸ್ಪೀಕರ್ ಖಾದರ್ ಭೇಟಿ; ಶಿಕ್ಷಣ, ಆರೋಗ್ಯ, ವ್ಯಾಪಾರ… ರಾಜ್ಯ ಸರಕಾರಿ ನೌಕರರ ಸಂಘದ ನಂಜನಗೂಡು ಶಾಖೆ ಚುನಾವಣೆಗೆ ಕೋರ್ಟ್ ತಡೆಯಾಜ್ಞೆ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿಯ ಕೊಲೆ ಪ್ರಕರಣ: ಉಪ್ಪಾರ ಸಮಾಜದಿಂದ ವಿಶೇಷ ಸಭೆ;… ಯುವತಿ ಆತ್ಮಹತ್ಯೆ ಯತ್ನಕ್ಕೆ ಪೊಲೀಸ್ ಇಲಾಖೆ ವೈಫಲ್ಯ ಕಾರಣ: ಶಾಸಕ ಡಾ. ಭರತ್… ಬೆಳಗಾವಿಯಲ್ಲಿ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಆಚರಿಸಲು ಅವಕಾಶ ಬೇಡ: ಕರವೇ ಕಿತ್ತೂರಿನ‌ ಇತಿಹಾಸ ರಾಷ್ಟ್ರಮಟ್ಟಕ್ಕೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿ: ಸಚಿವ ಸತೀಶ್ ಜಾರಕಿಹೊಳಿ ಬೇಲೆಕೇರಿ ಬಂದರಿನಿಂದ 11,312 ಮೆಟ್ರಿಕ್ ಟನ್ ಅದಿರು ನಾಪತ್ತೆ ಪ್ರಕರಣ: ಸಿಬಿಐನಿಂದ ಕಾಂಗ್ರೆಸ್… ಬರೋಬ್ಬರಿ 16 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು… ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ‘ಉಡುಗೊರೆ’: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಇತ್ತೀಚಿನ ಸುದ್ದಿ

ಜನ್ಮಾಷ್ಟಮಿಗೆ ಕೃಷ್ಣನಗರಿ ಉಡುಪಿ ಸೇರಿದಂತೆ ನಾಡಿನಾದ್ಯಂತ ಕ್ಷಣಗಣನೆ ಆರಂಭ: ಮನೆ ಮನೆಗಳಲ್ಲಿ ತೊಟ್ಟಿಲು ಶೃಂಗಾರ

29/08/2021, 14:31

ಮಂಗಳೂರು(reporterkarnataka.com):

ನಾಡಿನಾದ್ಯಂತ ನಾಳೆ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದ್ದು, ಕ್ಷಣಗಣನೆ ಆರಂಭವಾಗಿದೆ. ಕೃಷ್ಣನಗರಿ ಎಂದೇ ಕರೆಯಲ್ಪಡುವ ಉಡುಪಿಯಲ್ಲಿ ಕೊರೊನಾದ ಕರಿನೆರಳಿನ ಮಧ್ಯೆ ಸರಳ ಆಚರಣೆ ಸಿದ್ದತೆ ನಡೆದಿದೆ. ಇಲ್ಲಿನ ಅಷ್ಟಮಠಗಳಲ್ಲಿ ನಿತ್ಯ ಪೂಜೆಯ ಜತೆಗೆ ವಿಶೇಷ ಆರಾಧನೆ ನಡೆಯಲಿದೆ.

ಸಾಮಾನ್ಯವಾಗಿ ಭಾದ್ರಪದ ಮಾಸದ ಕೃಷ್ಣ ಅಷ್ಟಮಿಯ ದಿನವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ರೂಪದಲ್ಲಿ ಆಚರಿಸಲಾಗುತ್ತದೆ. ಈ ದಿನ ಮಧ್ಯರಾತ್ರಿ ಶ್ರೀ ಕೃಷ್ಣ ಜನಿಸಿದ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಇದರ ಅನುಸಾರ ಜನ್ಮಾಷ್ಟಮಿ ಆಚರಿಸಲಾಗುತ್ತದೆ.

ಈ ಅವಧಿಯಲ್ಲಿ ಶ್ರೀ ಕೃಷ್ಣನ ದೇವಸ್ಥಾನಗಳನ್ನು ಸಿಂಗರಿಸಲಾಗುತ್ತದೆ ಮತ್ತು ಮನೆಗಳಲ್ಲಿಯೂ 

ಕೂಡ ಕೃಷ್ಣನ ವಿಗ್ರಹವಿಟ್ಟು ತೊಟ್ಟಿಲನ್ನು ಸಿಂಗರಿಸಲಾಗುತ್ತದೆ. ಪಂಚ್ಯಖಾದ್ಯ ನೈವೇದ್ಯ ತಯಾರಿಸಿ ಶ್ರೀಕೃಷ್ಣನಿಗೆ ಅರ್ಪಿಸಿ ಪೂಜೆ ಸಲ್ಲಿಸಲಾಗುತ್ತದೆ. ದಕ್ಷಿಣ ಭಾರತ ಮಾತ್ರವಲ್ಲದೆ

ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿ ಜನ್ಮಾಷ್ಟಮಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಜನ್ಮಾಷ್ಟಮಿಯನ್ನು

ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನವನ್ನು ಸ್ಮಾರ್ಥ ಸಂಪದಕ್ಕಾಗಿ ಮತ್ತು ಎರಡನೆಯ ದಿನವನ್ನು ವೈಷ್ಣವ ಸಂಪ್ರದಾಯಕ್ಕಾಗಿ ಆಚರಿಸಲಾಗುತ್ತದೆ. ಈ ಬಾರಿ 29 ಆಗಸ್ಟ್ 2021ರಂದು ರಾತ್ರಿ 11.25 ರಿಂದ ಆಗಸ್ಟ್ 30, 2021 ರ ರಾತ್ರಿ 1.59 ಗಂಟೆಯವರೆಗೆ ಅಷ್ಟಮಿ ತಿಥಿ ಇರಲಿದೆ. ಜನ್ಮಾಷ್ಟಮಿಯ ಶುಭ ಮುಹೂರ್ತ ಆಗಸ್ಟ್ 30, 2021 ರಾತ್ರಿ 12.44 ರಿಂದ ತಡರಾತ್ರಿ 12.44ರವರೆಗೆ ಇರಲಿದೆ. ಈ ಅವಧಿಯಲ್ಲಿ ಶ್ರೀ ಕೃಷ್ಣನಿಗೆ ಹೊಸ ವಸ್ತ್ರವನ್ನು ತೊಡಿಸಿ, ಸಿಂಗರಿಸಿ ತೊಟ್ಟಿಲಲ್ಲಿ ತೂಗಲಾಗುತ್ತದೆ.

ಒಂದು ಶುಚಿಗೊಳಿಸಿದ ಚೌರಂಗದ ಮೇಲೆ ಕೆಂಪು ಬಣ್ಣದ ಬಟ್ಟೆಯನ್ನು ಹಾಸಿ, ಒಂದು ತಟ್ಟೆಯಲ್ಲಿ ಶ್ರೀಕೃಷ್ಣನ ಮೂರ್ತಿಯನ್ನಿಡಬೇಕು. ದೇವರ ಮುಂದೆ ಧೂಪ-ದೀಪ ಬೆಳಗಿ ಹಾಗೂ ಪ್ರಾರ್ಥನೆ ಸಲ್ಲಿಸಿ. ಬಳಿಕ ಪಂಚಾಮೃತದಿಂದ ದೇವರಿಗೆ ಅಭಿಷೇಕ ಮಾಡಿ. ನಂತರ ಗಂಗಾ ಜಲದಿಂದ ಸ್ನಾನ ಮಾಡಿಸಿ. ಶ್ರೀ ಕೃಷ್ಣನಿಗೆ ಹೊಸ ಬಟ್ಟೆಯನ್ನು ತೊಡಿಸಿ ಸಿಂಗರಿಸಿ, ಧೂಪ ದೀಪ ಮತ್ತೊಮ್ಮೆ ಬೆಳಗಿ ಆರತಿ ಮಾಡಿ. ಅಷ್ಟಗಂಧ, ಚಂದನ ಹಾಗೂ ಅಕ್ಷತೆಯ ತಿಲಕವನ್ನಿಡಿ. ದೇವರಿಗೆ ಬೆಣ್ಣೆ, ಕಲ್ಲು ಸಕ್ಕರೆ ಹಾಗೂ ಪಂಚಖಾದ್ಯ ನೈವೇದ್ಯ ಅರ್ಪಿಸಲಾಗುತ್ತದೆ.

 ಈ ಸಮಯದಲ್ಲಿ ಶ್ರೀಕೃಷ್ಣನಿಗೆ ತುಳಸಿ ಹಾಗೂ ಗಂಗಾಜಲ ಅರ್ಪಿಸಲಾಗುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು