8:38 PM Thursday27 - November 2025
ಬ್ರೇಕಿಂಗ್ ನ್ಯೂಸ್
ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ… ಶಾಲೆಯಂಗಳದಲ್ಲಿ ತಾರಾಲಯ: ಗ್ರಾಮೀಣ ಮಕ್ಕಳಲ್ಲಿ ಖಗೋಳ ವಿಜ್ಞಾನ ಕೌತುಕ ಬಿತ್ತುವ ಗುರಿ; ಮುಖ್ಯಮಂತ್ರಿ… Bhadravathi | ಪತಿಯ ಕಿರುಕುಳ: ಡೆತ್ ನೋಟ್ ಬರೆದು ನಾಲೆಗೆ ಹಾರಿ ನವ… ವಿದ್ಯುತ್ ಲಿಂಕ್ ಲೈನ್‌ ಸ್ಥಾಪಿಸಿ, ಸಮರ್ಪಕ ವಿದ್ಯುತ್ ಪೂರೈಕೆಗೆ ಆದ್ಯತೆ: ಸಚಿವ ಕೆ.ಜೆ.ಜಾರ್ಜ್ ಹೂವುಗಳ ಹರಾಜು ಪ್ರಕ್ರಿಯೆ ಮಾದರಿಯಲ್ಲಿ ಔಷಧೀಯ ಗಿಡಮೂಲಿಕೆಗಳ ಹರಾಜು ಅವಶ್ಯಕ: ಮುಖ್ಯ ಕಾರ್ಯದರ್ಶಿ… ಟೈಯರ್ ಸ್ಫೋಟ: ನಿಯಂತ್ರಣ ಕಳೆದುಕೊಂಡು ಪಿಕ್ ಅಪ್ ಪಲ್ಟಿ; ಚಾಲಕನಿಗೆ ತೀವ್ರ ಗಾಯ ಛಲವಾದಿ ಹಾಗೂ ಆರ್. ಅಶೋಕ್ ಗೆ ರಾಜಕೀಯ ವಿವೇಕ ಇಲ್ಲ: ಸಚಿವ ಎನ್.… ಸಂತಾನ ಹರಣ ಚಿಕಿತ್ಸೆ ಬಳಿಕವೂ ಗರ್ಭಿಣಿಯಾದ ಪತ್ನಿ: ಪತಿಯಿಂದ ವೈದ್ಯರಿಗೆ ಬೆದರಿಕೆ ಆರೋಪ:… ರಾಜ್ಯದ ಕ್ರಿಕೆಟ್ ಪಟುಗಳಿಗೆ ತಲಾ 10 ಲಕ್ಷ ನಗದು ಬಹುಮಾನ ಜತೆಗೆ ಸರ್ಕಾರಿ… ಹೈವಿಷನ್ ಇಂಡಿಯಾ ಜತೆ ಕೊರಿಯನ್ ಸಂಸ್ಥೆ ಜಿಟಿಟಿಸಿ ಒಪ್ಪಂದಕ್ಕೆ ಸಹಿ |ರಾಜ್ಯದ ಪ್ರವಾಸಿ…

ಇತ್ತೀಚಿನ ಸುದ್ದಿ

ಜಂಗಮರೆಂದರೆ ಯಾರು?

08/10/2023, 20:32

ಜಂಗಮರೆಂದರೆ ಯಾರು? ಯಾರು??
ಯಾರು? ಯಾರು?? ಜಂಗಮರೆಂದರೆ!! ಪ!!
ಎಲ್ಲವನ ಕೊಟ್ಟು ಇಹದೆಲ್ಲವನ ಬಿಟ್ಟು
ಬಲ್ಲಿದನ ಜೋಳಿಗೆಯ ಕರದಲಿ ಪಿಡಿದು
ಕಲ್ಲು ಮನಸುಗಳ ಹೂವಾಗಿಸುವದೆಡೆಗೆ
ಮಲ್ಲಿನಾಥನ ಮಗನಾಗಿ ಯೋಗಿಯಾದವರೆ!! ಜಂಗಮ!!

ಬಣ್ಣ ಬಣ್ಣಗಳ ಕನಸುಗಳನೆಲ್ಲ ತೊರೆದು
ಬಿನ್ನಹದಿಂದಲೆ ಜೀವನದ ಸಾರವ ಸಾರೊ
ಕಣ್ಣು ಕಣ್ಣುಗಳ ತೆರೆಸೊ ಜ್ಞಾನ ಭಂಡಾರವು
ಹುಣ್ಣುಮೆಯ ತಂಪನೇ ಚೆಲ್ಲೊ ಕಾಂತಿಯೆ!! ಜಂಗಮ!!

ಬದುಕಿನ ತಿರುಳನ್ನು ವಚನದಲಿ ಸಾರುತ್ತ
ಹೃದಯಗಳಲಿ ಅಮೃತವನೆ ಧಾರೆಯೆರೆವ
ಹದಿಬದೆಯ ಧರ್ಮದ ತಿರುಳನೆ ಬಿತ್ತುವ
ವಿಧಿತದಲಿ ಸರ್ವರಾ ಬಾಳನೆ ಬೆಳಗುವವರೆ!! ಜಂಗಮ!!

ಕಾಮ ಕ್ರೋಧ ಲೋಭ ಮೋಹ ಮತ್ಸರವ
ಯಾಮದಿಂದಲೆ ತೊರೆದು ಸಾಧುವಾಗಿಹ
ಸೋಮ ಸೂರ್ಯರಂತೆಯೆ ಜಗ ಕಾಯುವ
ನಾಮ ನಿರ್ದೇಶಿತ ಕಾವಿಯ ಕಾರ್ಮಿಕರೆ!! ಜಂಗಮ!!

– ಅನಿತಾ ಸಾಲಿಮಠ ಅಂತರಗಂಗೆ
(ವಿದ್ಯಾ ಚೇತನ ಪದವಿ ಪೂರ್ವ ಕಾಲೇಜು ಲಿಂಗಸೂರ್)

ಇತ್ತೀಚಿನ ಸುದ್ದಿ

ಜಾಹೀರಾತು