8:27 AM Tuesday22 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಜನರಿಗೊಂದು ಕಾನೂನು, ಅಧಿಕಾರಸ್ಥರಿಗೆ ಮತ್ತೊಂದು ಕಾನೂನು: ನೂತನ ಸಚಿವ ಸುನಿಲ್  ಸ್ವಾಗತಿಸಲು ಜನಜಾತ್ರೆ: ಜಿಲ್ಲಾಧಿಕಾರಿ ಸಾಹೇಬ್ರೇ ಏನ್ ಹೇಳ್ತೀರಿ? !!

06/08/2021, 22:15

ಉಡುಪಿ/ ಕಾರ್ಕಳ(reporterkarnataka.com): ನಮ್ಮ ದೇಶದ ಪ್ರಜಾಪ್ರಭುತ್ವದ ದೊಡ್ಡ ಅಣಕವೆಂದರೆ ಜನಸಾಮಾನ್ಯರಿಗೆ ಒಂದು ಕಾನೂನು ಅನ್ವಯಿಸಿದರೆ, ಅಧಿಕಾರಸ್ಥರಿಗೆ ಇನ್ನೊಂದು ಕಾನೂನು. ಜನಸಾಮಾನ್ಯ ಕಾನೂನು ಉಲ್ಲಂಘಿಸಿದರೆ ದಂಡ, ಕಾನೂನು ಕ್ರಮ. ಆದರೆ ಅಧಿಕಾರಸ್ಥರು ಕಾನೂನು ಉಲ್ಲಂಘಿಸಿದರೆ ಏನಿಲ್ಲ ಕ್ರಮ. ಇಂತಹ ಘಟನೆ ಉಡುಪಿ ಜಿಲ್ಲೆಯ ಹೆಜಮಾಡಿ, ಉಡುಪಿ ನಗರ, ಕಾರ್ಕಳ, ಹಿರಿಯಡ್ಕ ಇಂದು ಸಾಕ್ಷಿಯಾಯಿತು.

<

ಸಚಿವರಾದ ಬಳಿಕ ಸುನಿಲ್ ಕುಮಾರ್ ಅವರು ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಆಗಮಿಸಿದ್ದರು. ಸಚಿವರು ಬಂದ ಕಡೆಗಳೆಲ್ಲ ಜನಜಾತ್ರೆಯೇ ಸೇರಿತ್ತು. ಉಡುಪಿ ಜಿಲ್ಲೆಯ ಗಡಿಭಾಗ ಹೆಜಮಾಡಿಯಲ್ಲಿ ಸಚಿವರನ್ನು ಬರ ಮಾಡಿಕೊಳ್ಳಲಾಯಿತು.ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಸಚಿವರಿಗೆ

ಭವ್ಯ ಸ್ವಾಗತ ಕೋರಿದರು. ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯೆಯರು ಆರತಿ ಎತ್ತಿ ನೂತನ ಸಚಿವರಿಗೆ ಶುಭ ಹಾರೈಸಿದರು.

ಇಲ್ಲಿಂದ ನೂತನ ಸಚಿವರ ವಿಜಯ ಯಾತ್ರೆ ಆರಂಭವಾಯಿತು.ನಂತರ ಉಡುಪಿ, ಕಾರ್ಕಳ, ಹಿರಿಯಡ್ಕದಲ್ಲಿ ಇಂತಹದ್ಸೇ ಸನ್ನಿವೇಶ ನಿರ್ಮಾಣವಾಗಿತ್ತು. ಹೆಜಮಾಡಿಯಲ್ಲಿ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಪಕ್ಷದ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ್ ಶೆಟ್ಟಿ ಗುರ್ಮೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಮೀನುಗಾರ ಮುಖಂಡ ಯಶ್ ಪಾಲ್ ಸುವರ್ಣ, ಕುತ್ಯಾರ್ ನವೀನ್ ಶೆಟ್ಟಿ, ದಿನಕರ ಬಾಬು, ಶಿಲ್ಪಾ ಜಿ.ಶೆಟ್ಟಿ, ಪ್ರವೀಣ್ ಕುಮಾರ್ ಗುರ್ಮೆ, ಉದಯ ಶೆಟ್ಟಿ ಇನ್ನಾವ ಮುಂತಾದವರು ಉಪಸ್ಥಿತರಿದ್ದರು.

ಸಚಿವರಾದ ಸುನಿಲ್ ಅವರು ವಿಧಾಸಭೆಯಲ್ಲಿ ಲಾ ಮೇಕರ್. ಯಾಕೆಂದರೆ ಎಲ್ಲ ಶಾಸಕರು ಸೇರಿ ಕಾನೂನು ರೂಪಿಸುವುದು. ಆದರೆ ಇವತ್ತಿನ ಮಟ್ಟಿಗೆ ಸಚಿವ ಸುನಿಲ್ ಕುಮಾರ್ ಅವರು ಲಾ ಬ್ರೇಕರ್ ಕೂಡ ಹೌದು. ಉಡುಪಿ ಜಿಲ್ಲೆಯಲ್ಲಿ ಕೊರೊನಾ ಮಾರ್ಗಸೂಚಿ ಜಾರಿಯಲ್ಲಿದೆ. ಸಭೆ, ಸಮಾರಂಭ, ಮೆರವಣಿಗೆ, ರ್ಯಾಲಿ ಯಾವುದೂ ಮಾಡಲು ನಿರ್ಬಂಧವಿದೆ. ಸಾರ್ವಜನಿಕವಾಗಿ ಓಡಾಡುವಾಗ ಮಾಸ್ಕ್ ಕಡ್ಡಾಯ. ಸಾಮಾಜಿಕ ಅಂತರ ಕೂಡ ಕಡ್ಡಾಯ. ಆದರೆ ನೂತನ ಸಚಿವರನ್ನು ಸ್ವಾಗತಿಸುವ ಸಂಭ್ರಮದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಇದನ್ನೆಲ್ಲ ಗಾಳಿಗೆ ತೂರಿದೆ. ಸುನಿಲ್ ಅವರಿಗೆ ಅಭಿನಂದಿಸುವ, ಸನ್ಮಾನಿಸುವ ಎಲ್ಲ ಕಡೆಗಳಲ್ಲಿ ಜನಜಾತ್ರೆಯೇ ಸೇರಿತ್ತು. ಪೆಂಡಾಲ್ ಹಾಕಲಾಗಿತ್ತು. ಬಾವುಟ ಕಟ್ಟಲಾಗಿತ್ತು. ಮಂಗಳ ವಾದ್ಯ ಮೊಳಗುತ್ತಿತ್ತು. ಸಾಮಾಜಿಕ ಅಂತರ ಕನಸಿನ ಮಾತಾಗಿತ್ತು. ಕೆಲವರ ಬಾಯಿಯಲ್ಲಿ ಮಾಸ್ಕ್ ಕೂಡ ಇರಲಿಲ್ಲ. ಆದರೆ ವಿಧಾನಸಭೆಯಲ್ಲಿ ಕೂತು ಕಾನೂನು ರೂಪಿಸಬಲ್ಲ ಸುನಿಲ್ ಕುಮಾರ್ ಇದ್ಯಾವುದನ್ನೂ ವಿರೋಧಿಸಲಿಲ್ಲ. ಪ್ರಜ್ಞಾವಂತ ಬಿಜೆಪಿ ನಾಯಕರು ಕೂಡ ಇದ್ಯಾವುದಕ್ಕೂ ಕ್ಯಾರೇ ಅನ್ನಲಿಲ್ಲ. ಒಟ್ಟಿನಲ್ಲಿ ಪ್ರಜಾಪ್ರಭುತ್ವವನ್ನು ಅಣಕಿಸುವಂತಿತ್ರು. ಜನಸಾಮಾನ್ಯರು ಎಲ್ಲದರು ತಪ್ಪಿ ಕಾನೂನು ಉಲ್ಲಂಘಿಸಿದರೂ ದಂಡನಾ ಕ್ರಮ ಕೈಗೊಳ್ಳುವ  ಜಿಲ್ಲಾಧಿಕಾರಿ ಕೂಡ ಸುಮ್ಮನಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು