1:53 AM Monday15 - September 2025
ಬ್ರೇಕಿಂಗ್ ನ್ಯೂಸ್
ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ

ಇತ್ತೀಚಿನ ಸುದ್ದಿ

ಜನವರಿ 14 ಹಾಗೂ 15: ಬಿಕರ್ನಕಟ್ಟೆ ಬಾಲಯೇಸು ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ

02/01/2025, 21:25

ಮಂಗಳೂರು(reporterkarnataka.com): ನಗರದ ಬಿಕರ್ನಕಟ್ಟೆಯ ಕಾರ್ಮೆಲ್ ಹಿಲ್ ನಲ್ಲಿರುವ ಬಾಲ ಯೇಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಜನವರಿ 14 ಹಾಗೂ 15ರಂದು ವಿಜೃಂಭಣೆಯಿಂದ ಆಚರಿಸಲಾಗುವುದು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಬಾಲಯೇಸುವಿನ ಪುಣ್ಯಕ್ಷೇತ್ರ ರುಮಠದ ಮುಖ್ಯಸ್ಥರಾದ ವಂದನೀಯ ಫಾ. ಮೆಲ್ವಿನ್ ಡಿಕುನ್ಹಾ ಅವರು ಈ ವಿಷಯ ತಿಳಿಸಿದರು.

ವಾರ್ಷಿಕ ಮಹೋತ್ಸವ ಸಾಂಭ್ರಮಿಕ ಬಲಿಪೂಜೆಗಳು
ಜನವರಿ 14ರಂದು ಸಂಜೆ 6.00 ಘಂಟೆಗೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆಯನ್ನು ಅತೀ ವಂದನೀಯ ವಿಲ್ಪ್ರೇಡ್
ಗ್ರೆಗೋರಿ ಮೊರಾಸ್, ಝಾನ್ಸಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಆರ್ಪಿಸುವರು. ಅದೇ ದಿನ ಬೆಳಿಗ್ಗೆ 10.30 ಗಂಟೆಗೆ ಅತೀ ವಂದನೀಯ ಡಾ. ಅಲೋಶಿಯಸ್ ಪಾಲ್ ಡಿಸೋಜಾ, ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರು ನೆರವೇರಿಸುವರು. ಇದು ಮಕ್ಕಳಿಗಾಗಿ ಅರ್ಪಿಸಲಾಗುವ ವಿಶೇಷ ಪ್ರಾರ್ಥನಾ ವಿಧಿ ನೆರವೇರಲಿದೆ ಎಂದು ಅವರು ತಿಳಿಸಿದರು.
ಜನವರಿ 15ರಂದು ಬೆಳಿಗ್ಗೆ 10.30 ಗಂಟೆಗೆ ಪಶ್ಚಿಮ ಬಂಗಾಳದ ಅಸನ್‌ಸೋಲ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಎಲಿಯಾಸ್ ಫ್ರ್ಯಾಂಕ್ ಅರ್ಪಿಸಲಿರುವರು. ಇದು ವ್ಯಾದಿಷ್ಟರಿಗಾಗಿ ಅರ್ಪಿಸಲಾಗುವ ವಿಶೇಷ ಪೂಜಾವಿಧಿಯಾಗಿದೆ. ಮಹೋತ್ಸವದ ಸಮಾರೋಪ ಪ್ರಾರ್ಥನಾವಿಧಿ ಸಂಜೆ 6.00 ಘಂಟೆಗೆ ಕಾರ್ಮೆಲ್ ಸಭೆಯ ಅತೀ ವಂದನೀಯ ರುಡೋಲ್ಫ್ ಡಿಸೋಜಾ ಅರ್ಪಿಸಲಿರುವರು.
ಜನವರಿ 14ರಂದು ಜರಗುವ ಇತರ ಬಲಿಪೂಜೆಗಳ ವೇಳಾಪಟ್ಟಿ ಹೀಗಿದೆ: ಬೆಳಿಗ್ಗೆ 6.00 (ಕೊಂಕಣಿ), 7.30 (ಇಂಗ್ಲೀಶ್), 9.00 (ಕೊಂಕಣಿ), 1.00 (ಕನ್ನಡ). ಅದೇ ದಿನ 10.30 ಘಂಟೆಗೆ ಮಕ್ಕಳಿಗಾಗಿ ವಿಶೇಷ ಬಲಿಪೂಜೆ ಕೊಂಕಣಿಯಲ್ಲಿ ನೆರವೇರುವುದು. ಈ ದಿನದ ಆರಂಭಿಕ ಪೂಜಾವಿಧಿಯನ್ನು ಬೆಳಿಗ್ಗೆ 6.00 ಘಂಟೆಗೆ ಬಳ್ಳಾರಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಹೆನ್ರಿ ಡಿಸೋಜಾ – ಅವರು ನೆರವೇರಿಸಲಿರುವರು ಎಂದು ಅವರು ತಿಳಿಸಿದರು.
ವಾರ್ಷಿಕ ಹಬ್ಬದ ಎರಡನೆಯ ದಿನ – ಜನವರಿ 15ರಂದು ಬೆಳಿಗ್ಗೆ 6.30, 7.30, 9.00 ಘಂಟೆಗೆ ಕೊಂಕಣಿಯಲ್ಲಿ, 10.30ಗೆ ಮಕ್ಕಳಿಗಾಗಿ ವ್ಯಾದಿಷ್ಟರಿಗಾಗಿ ವಿಶೇಷ ಪೂಜೆ ಹಾಗೂ 1.00 ಗಂಟೆಗೆ ಮಲಯಾಳಂ ಭಾಷೆಯಲ್ಲಿ ಪೂಜೆ ನೆರವೇರುವುದು ಎಂದು ಅವರು ವಿವರಿಸಿದರು.
*ನವದಿನಗಳ ನವೇನಾ ಪ್ರಾರ್ಥನೆ:* ಈ ಎರಡು ದಿನದ ವಾರ್ಷಿಕ ಮಹೋತ್ಸವಕ್ಕಾಗಿ ನವದಿನಗಳ ಸಿದ್ಧತೆ – ನವೇನಾ ಪ್ರಾರ್ಥನೆ ಜನವರಿ 5ರಿಂದ ಜನವರಿ 13ರ ವರೆಗೆ ನಡೆಯುವುದು. ಆ ದಿನಗಳಲ್ಲಿ ಪ್ರತಿದಿನ 9 ಪ್ರಾರ್ಥನಾ ವಿಧಿಗಳು ನಡೆಯುವುವು. ಬೆಳಿಗ್ಗೆ 6.00, 7.30, 9.00, 10.30 ಹಾಗೂ ಮಧ್ಯಾಹ್ನ 1.00 ಗಂಟೆಗೆ ಕೊಂಕಣಿ ಭಾಷೆಯಲ್ಲಿ ಸಂಜೆ 4.00 ಗಂಟೆಗೆ ಮಲಯಾಳಂ, 5.00 ಗಂಟೆಗೆ ಇಂಗ್ಲೀಷ್ ಹಾಗೂ 7.30 ಗಂಟೆಗೆ ಕನ್ನಡದಲ್ಲಿ ಬಲಿಪೂಜೆಯು ಪುಣ್ಯಕ್ಷೇತ್ರದೊಳಗೆ ನಡೆಯುವುದು ಎಂದು ಅವರು ತಿಳಿಸಿದರು.
ಪರಮ ಪ್ರಸಾದದ ಆರಾಧನೆ ಪ್ರತಿ ನವೆನಾ ದಿನಗಳಲ್ಲಿ 11.30 ರಿಂದ 12.45 ಗಂಟೆಯ ವರೆಗೆ ನಡೆಯುವುದು. ಈ ವೇಳೆ ವಿವಿಧ ಅಗತ್ಯಗಳಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಗುವುದು.
ದಿವ್ಯಬಾಲ ಯೇಸುವಿನ ಮೆರವಣಿಗೆಯನ್ನು ಪ್ರಪ್ರಥಮವಾಗಿ ಪ್ರತಿದಿನ ಸಂಜೆಯ 6.00 ಗಂಟೆಯ ಬಲಿಪೂಜೆಯ ಬಳಿಕ ಹಮ್ಮಿಕೊಳ್ಳಲಾಗಿದೆ ಎಂದು ಅವರು ನುಡಿದರು.
*ಹೊರೆಕಾಣಿಕೆ:* ಮಹೋತ್ಸವದ ಹೊರೆಕಾಣಿಕೆಯು ಜನವರಿ 4 ರಂದು ಸಂಜೆ 4.30 ಗಂಟೆಗೆ ಹೋಲಿಕ್ರಾಸ್ ಚರ್ಚ್, ಕುಲಶೇಖರದಿಂದ ಆರಂಭಗೊಳ್ಳುವುದು. ಹೊರೆಕಾಣಿಯ ಅಂತಿಮಭಾಗದಲ್ಲಿ ಸರ್ವಧರ್ಮ ಪ್ರಾರ್ಥನಾಕೂಟ ಹಾಗೂ ಧ್ವಜಾರೋಹಣ ಪುಣ್ಯಕ್ಷೇತ್ರದ ಅಂಗಳದಲ್ಲಿ ನಡೆಯುವುದು ಎಂದರು.
ಅನ್ನಸಂತರ್ಪಣೆ ನವೇನಾ ಹಾಗೂ ಹಬ್ಬದ ದಿನಗಳಲ್ಲಿ (ಜನವರಿ 5 ರಿಂದ 15 ರ ವರೆಗೆ) ಮಧ್ಯಾಹ್ನದ ವೇಳೆ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಯು ನಡೆಯುವುದು.
*ರಕ್ತದಾನ ಹಾಗೂ ಕೇಶದಾನ ಶಿಬಿರ:* ಜನವರಿ 9 ಹಾಗೂ 10 ರಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.00 ಗಂಟೆಯ ವರೆಗೆ ರಕ್ತದಾನ ಹಾಗೂ ಕೇಶದಾನ ಶಿಬಿರವನ್ನು ಏರ್ಪಡಿಸಲಾಗಿದೆ.
*ಎರಡು ವಿಶೇಷ ಯೋಜನೆಗಳ ಅನಾವರಣ:* ಯೇಸುಕ್ರಿಸ್ತರ ಜನನದ 2025 ನೇ ಜ್ಯುಬಿಲಿ ವರ್ಷವನ್ನು ಆಚರಿಸುವ ಸಂದರ್ಭದಲ್ಲಿ ಒಂದು ಬಡ ಕುಟುಂಬಕ್ಕೆ ಸಂಪೂರ್ಣ ಮನೆಯನ್ನು ಕಟ್ಟಿಕೊಡುವ ಯೋಜನೆ (ಇನ್‌ಫೆಂಟ್ ಜೀಸಸ್ ಜ್ಯುಬಿಲಿ ಹೌಸಿಂಗ್ ಪ್ರೋಜೆಕ್ಟ್) ಹಾಗೂ ಕಾರ್ಮೆಲ್ ಸಭೆಯ ಲಿಸಿಯಾದ ಸಂತ ತೆರೇಸಾ ಅವರನ್ನು ಸಂತಪದವಿಗೆ ಏರಿಸಿ ಶತಮಾನೋತ್ಸವವನ್ನು ಆಚರಿಚುವ ಸಂದರ್ಭದಲ್ಲಿ ಸುಮಾರು 100 ವಿಧ್ಯಾರ್ಥಿವೇತನಗಳನ್ನು (ಸೆಂಟ್ ತೆರೇಸ್ ಸೆಂಟಿನರಿ ಮೆಮೋರಿಯಲ್ ಸ್ಕೋಲರ್‌ಶಿಪ್ ಪ್ರೋಜೆಕ್ಟ್) ವಿತರಿಸಲಾಗುವುದು.

ಈ ಎರಡು ವಿಷಯಗಳನ್ನು ಆಧರಿಸಿ ಒಂದು ವಿಶೇಸ ವಸ್ತುಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಪ್ರತಿಕಾಗೋಷ್ಠಿಯಲ್ಲಿ ವಂದನೀಯ ಫಾ. ಸ್ವೀವನ್ ಪಿರೇರಾ, {ನಿರ್ದೇಶಕರು, ಬಾಲಯೇಸುವಿನ ಪುಣ್ಯಕ್ಷೇತ್ರ)ವಂದನೀಯ ಫಾ. ದೀಪ್ ಫೆರ್ನಾಂಡೀಸ್, (ಕಾರ್ಮೆಲ್ ಸಭೆ) ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು