10:37 AM Thursday9 - January 2025
ಬ್ರೇಕಿಂಗ್ ನ್ಯೂಸ್
ಬಳ್ಳಾರಿ: ಎಲ್ಲ ರೈಲುಗಳ ಆರಂಭಕ್ಕಾಗಿ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯಿಂದ ಒಂದು ತಿಂಗಳ… ಎಂಎಸ್‌ ಐಎಲ್‌ ಟೂರ್‌ ಪ್ಯಾಕೇಜ್‌ ಗೆ ಸಚಿವ ಎಂ. ಬಿ. ಪಾಟೀಲ್ ಚಾಲನೆ ಜ.10-12: ಸೌತ್ ಏಷ್ಯಾ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-2025; ದೇಶ – ವಿದೇಶದ 2… ದೇಶದ ವೈವಿಧ್ಯತೆ, ಸೌಹಾರ್ದತೆ ಉಳಿಸಿಕೊಳ್ಳುವ ಮೂಲಕ ಆಂತರಿಕವಾಗಿ ಸಶಕ್ತವಾಗಬೇಕಿದೆ: ಧರ್ಮಸ್ಥಳದಲ್ಲಿ ಉಪ ರಾಷ್ಟ್ರಪತಿ… 60% ಕಮೀಷನ್; ನಿಮ್ಮ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ ನೋಡಿ: ಸಿಎಂಗೆ ಕೇಂದ್ರ ಸಚಿವ… ಇದು 60 ಪರ್ಸೆಂಟ್‌ ಕಮಿಷನ್‌ ಸರ್ಕಾರ, ಗುತ್ತಿಗೆದಾರರಿಗೆ ನೀಡಲು ಹಣವಿಲ್ಲ: ಪ್ರತಿಪಕ್ಷ ನಾಯಕ… ಹಣ ಕೈಯಲ್ಲಿದ್ದರೂ ಸ್ಕಾಲರ್ ಶಿಪ್ ವಿತರಣೆಯಲ್ಲಿ ನಿರ್ಲಕ್ಷ್ಯ: ಅಧಿಕಾರಿಗಳ ಚಳಿ ಬಿಡಿಸಿದ ಸಿಎಂ… ಅರಣ್ಯ ಒತ್ತುವರಿ, ಕಳ್ಳಬೇಟೆ ತಡೆಗೆ ಗರುಡಾಕ್ಷಿ ಅಸ್ತ್ರ: ಆನ್ಲೈನ್ ಎಫ್ಐಆರ್ ವ್ಯವಸ್ಥೆಗೆ ಚಾಲನೆ ರಾಜ್ಯದಲ್ಲಿ ಎಚ್ ಎಂಪಿವಿ ಸೋಂಕು: ಜನರಲ್ಲಿ ಆತಂಕ ಬೇಡ, ಎಚ್ಚರ ಇರಲಿ; ಆರೋಗ್ಯ… ತೀರ್ಥಹಳ್ಳಿಯ ಕಿತ್ತನಗದ್ದೆ ನಾಡ್ತಿಯ ಹೊಳೆಯಲ್ಲಿ ಮರಳು ಮಾಫಿಯ ಜಾಲ ಪತ್ತೆ

ಇತ್ತೀಚಿನ ಸುದ್ದಿ

ಜನವರಿ 11 ಮತ್ತು 12ರಂದು ‘ಲಿಟ್ ಫೆಸ್ಟ್’ ಮಂಗಳೂರು ಸಾಹಿತ್ಯೋತ್ಸವ: ಖ್ಯಾತ ಸಾಹಿತಿ ಡಾ. ಎಸ್. ಎಲ್. ಭೈರಪ್ಪ ಉದ್ಘಾಟನೆ

09/01/2025, 10:06

ಮಂಗಳೂರು(reporterkarnataka.com: ಭಾರತ್ ಫೌಂಡೇಶನ್ ವತಿಯಿಂದ ಆಯೋಜಿಸಲ್ಪಡುತ್ತಿರುವ ”ಲಿಟ್ ಫೆಸ್ಟ್” ಮಂಗಳೂರು ಸಾಹಿತ್ಯೋತ್ಸವದ 7ನೇ ಆವೃತ್ತಿಯು ನಗರದ ಡಾ. ಟಿ.ಎಂ.ಎ. ಪೈ ಇಂಟರ್‌ನ್ಯಾಷನಲ್ ಕನ್ವೆನ್ನನ್‌ ಸೆಂಟರ್‌ನಲ್ಲಿ ಜನವರಿ 11 ಮತ್ತು 12 ರಂದು ಜರುಗಲಿದೆ. ನಾಡಿನ ಖ್ಯಾತ ಸಾಹಿತಿಗಳಾದ ಡಾ. ಎಸ್. ಎಲ್. ಭೈರಪ್ಪ ಅವರಿಂದ ಉದ್ಘಾಟನೆಗೊಳ್ಳಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸಮಾನ ಮನಸ್ಕರ ಚಿಂತನೆಯಿಂದ ಆರಂಭ ಗೊಂಡ ಲಿಟ್ ಫೆಸ್ಟ್ ಇಂದು 7ನೆ ಆವೃತಿಗೆ ದಾಪುಗಾಲಿಟ್ಟಿದೆ. ಇದು ಸಾಹಿತ್ಯ ಹಬ್ಬವಲ್ಲ, ಇದು ಇಡೀ ಜಿಲ್ಲೆಯ ಸಾಹಿತ್ಯಾಸಕ್ತರ ಹಬ್ಬ. ಎಲ್ಲರೂ ಒಗ್ಗೂಡಿ ಸಾಹಿತ್ಯೋತ್ಸವವನ್ನು ಅನುಭವಿಸಬೇಕು,ಆನಂದಿಸಬೇಕು ಎನ್ನುವ ದೃಷ್ಟಿಯಿಂದ ಆಯೋಜಿಸಲಾಗುತ್ತದೆ.
ಸಾಹಿತ್ಯಸಕ್ತರಿಗೆ ಮಂಗಳೂರು ಸಾಹಿತ್ಯ ಉತ್ಸವದಲ್ಲಿ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ,ಆರ್ಥಿಕಮತ್ತು ಸಿನಿಮಾ ಸಹಿತ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಹೊಸ ಹೊಸ ಆವಿಷ್ಕಾರ,ಬೆಳವಣಿಗೆಗಳನ್ನ ತಿಳಿಯಲು ಇಲ್ಲಿ ಅವಕಾಶವಿದೆ.
ಕಾರ್ಯಕ್ರಮಗಳ ವಿವರ:
9.30-ಉದಯರಾಗ.
10.00- ಸಮಾರಂಭ ಉದ್ಘಾಟನೆ
ಬೆಳಿಗ್ಗೆ10.45 ಕ್ಕೆ,“Energy for Survival – Security and Climate” ಬಗ್ಗೆ ಇಂಗ್ಲಿಷ್ ಭಾಷೆಯಲ್ಲಿ ಸಂವಾದ ಇದ್ದು, ಹರ್ದೀಪ್ ಸಿಂಗ್ ಪುರಿ ವಿಚಾರ ಮಂಡಿಸುವರು. ಡಾ. ನಂದಕಿಶೋರ್ ಎಂ.ಎಸ್. ಅವರು ನಿರ್ವಹಣೆ ಮಾಡುವರು.
11.45ಕ್ಕೆ ವಿಕ್ರಮ್ ಸೂದ್ “Art and Craft of Building and Dismantling narratives”ವಿಚಾರ ಮಂಡಿಸಲಿದ್ದು, ಪ್ರಶಾಂತ್ ವೈದ್ಯರಾಜ್ ಸಂವಾದ ನಡೆಸುವರು.
ಮಧ್ಯಾಹ್ನ 2ಕ್ಕೆ “ಸಂಸ್ಕೃತಯಾನಂ” ಎಂಬ ಕಾರ್ಯಕ್ರಮದಲ್ಲಿ ಸಮಸ್ಥಿ ಗುಬ್ಬಿ, ಡಾ.ಎಚ್.ಆರ್.ವಿಶ್ವಾಸ್, ಡಾ.ಶಂಕರ ರಾಜಾರಾಮನ್ ವಿಚಾರ ಮಂಡಿಸಲಿದ್ದು, ಡಾ. ಶಾಂತಲಾ ವಿಶ್ವಾಸ್ ಸಂವಹನಕಾರರಾಗಿ ನಿರ್ವಹಣೆ ಮಾಡುವರು.
ಮಧ್ಯಾಹ್ನ 3.00 ಗಂಟೆಗೆ “ಪ್ರೋಸೆಸ್ ರೆಫಾರ್ಮ್ಸ್ ಆಸ್ ಪಬ್ಲಿಕ್ ಪಾಲಿಸಿ” ವಿಷಯದ ಕುರಿತು ಸಂಜೀವ ಸಾನ್ಯಾಲ್ ವಿಚಾರ ಮಂಡಿಸಲಿದ್ದು, ಬಂಗಾರಡ್ಕ ವಿಶ್ವೇಶ್ವರ ಭಟ್ ಸಂವಹನಕಾರರಾಗಿ ಭಾಗವಹಿಸುವರು.
ಸಂಜೆ 4 ಗಂಟೆಗೆ “ಗ್ರಾಜುವೇಟಿಂಗ್‌ ದಿ ಎಜುಕೇಶನಲ್‌ ಪಾಲಿಸಿ” ಕುರಿತು ಡಾ. ಸಂತಿಶ್ರೀ ಧುಲಿಪುಡಿ ಪಂಡಿತ್, ಡಾ. ವಿನಯ್ ಸಹಸ್ರಬುದ್ಧ ಮಾತನಾಡಲಿದ್ದು, ಡಾ. ವಿನಯಚಂದ್ರ ಭನ್ವತೆ ಸಂವಹನಕಾರರಾಗಿರುವರು.
ಮಧ್ಯಾಹ್ನ 2 ಗಂಟೆಗೆ ಸಿನಿಮಾ ತಾಂತ್ರಿಕತೆ ಕುರಿತು ಗಿರೀಶ್ ಕಾಸರವಳ್ಳಿ ,ಗೋಪಾಲಕೃಷ್ಣ ಪೈ, ಮಾತನಾಡಲಿದ್ದು, ಅರುಣ್‌ ಭಾರಧ್ವಾಜ್‌ ಸಂವಹನಕಾರರಾಗಿದ್ದಾರೆ.
ಮಧ್ಯಾಹ್ನ 3ಕ್ಕೆ ಫ್ರಮ್ ಇಂಡಿವಿಜುವಲ್‌ ಟು ಮಧ್ಯಾಹ್ನ 3ಕ್ಕೆ ಪ್ರೊಮ್ ಇಂಡಿವಿಜುವಲ್‌ ಟು ಇನ್ ಡಿವಿಸಿಬಲ್‌ ಎಂಬ ವಿಷಯದಲ್ಲಿ ಸ್ವಾಮಿ ಮಹಾಮೇಧಾನಂದ, ಸತ್ಯೇಶ್ ಬೆಳ್ಳೂರು ಮಾತನಾಡಲಿದ್ದು, ಡಾ. ಶಂಕ‌ರ್ ರಾಜಾರಾಮ್ ಸಂವಹನ ನಡೆಸಲಿದ್ದಾರೆ.
4.00 ಗಂಟೆಗೆ ಭಾರತೀಯ ಭಾಷೆಗಳಿಗೆ ದೇಶಿಯತೆ ಕೊಡುಗೆಗಳು ಕುರಿತು ಡಾ. ಜಿ.ಬಿ.ಹರೀಶ, ವಿ.ನಾಗರಾಜ್, ಡಾ.ಎಚ್.ಆರ್.ವಿಶ್ವಾಸ್ ಮಾತನಾಡಲಿದ್ದಾರೆ, ಕ್ಷಮಾ ನರಗುಂದ ಸಂವಹನ ನಡೆಸುವರು.
ಸಮಾರೋಪ ಸಮಾರಂಭದಲ್ಲಿ ಶತಾವಧಾನಿ ಡಾ.ಆರ್. ಗಣೇಶ್ ಮತ್ತು ಡಾ.ಅಜಕ್ಕಳ ಗಿರೀಶ ಭಟ್ ಭಾಗವಹಿಸುವರು.
11 ಗಂಟೆಗೆ ಹರಟೆಕಟ್ಟೆಯಲ್ಲಿ ಡಾ. ಎಸ್.ಎಲ್.ಭೈರಪ್ಪ ಜೊತೆ ಸಂವಾದ.
ಮಧ್ಯಾಹ್ನ 2.15ಕ್ಕೆ ರಸಪ್ರಶ್ನೆ ಕಾರ್ಯಕ್ರಮದ ಅಂತಿಮ ಘಟ್ಟ ನಡೆಯುವುದು.
ಎರಡನೇ ದಿನದ ಕಾರ್ಯಕ್ರಮ
ಎರಡನೇ ಸಭಾಂಗಣದಲ್ಲಿ.
10.15ಕ್ಕೆ ಹಿಮಾಲಯನ್ ಜಿಯೋಪಾಲಿಟಿಕ್ಸ್ ಕುರಿತು ಡಾ.ಕ್ಲಾಔಡೆ ಅರ್ಪಿ, ದಿಲೀಪ್ ಸಿನ್ಹ, ಜಂಗ್ಚುಪ್ ಚೊಡೆನ್ ಮಾತನಾಡುವರು, ಬಿಪೀಂದ್ರ ಅವರು ಸಂವಹನ ನಡೆಸುವರು.
11.15ಕ್ಕೆ ನಾಗೋರ್ಟ್ ಅಂಡ‌ರ್ ಸೀಝ್ ಕುರಿತು ಬಾವನ್ ಅರೋರ,ಮೆಗ್ನ ಗಿರೀಶ್, ಶಿವ್ ಅರೂರ್ ಮಾತನಾಡುವರು. ಸುರಭಿ ಹೊಡಿಗೆರೆ ಸಂವಹನ ನಡೆಸುವರು.
12.15ಕ್ಕೆ ವುಮನ, ಜೆಂಡ‌ರ್ ಮತ್ತು ಸೊಸೈಟಿ ಕುರಿತು ಡಾ. ವರದ ಸಂಭುಸ್, ಕ್ಷಮಾ ನರಗುಂದ ಮಾತನಾಡುವರು. ಡಾ. ಸುಷ್ಮಾ ಶೆಟ್ಟಿ ಸಂವಹನ ನಡೆಸುವರು.
“ಅಂಬೇಡ್ಕ‌ರ್ ಮತ್ತು ಸಂವಿಧಾನ” ಸತ್ಯ ಮತ್ತು ಮಿಥ್ಯ ಕುರಿತು ವಿಕಾಸ್ ಕುಮಾರ್ ಪಿ. ಎಸ್, ಮಹೇಶ್‌ ಮಾತನಾಡುವರು 3 ಗಂಟೆಗೆ ಯುವ ಮಿಥ್ಯ ಕುರಿತು ವಿಕಾಸ್ ಕುಮಾರ್ ಪಿ. ಎನ್ , ಮಹೇಶ್‌ ಮಾತನಾಡುವರು.
3 ಗಂಟೆಗೆ ಯುವ ಕವಿಗೋಷ್ಠಿಯಲ್ಲಿ ಸತೀಶ ಹೆಗಡೆ ಶಿರಸಿ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಸ್ಮಿತಾ ಅಮೃತರಾಜ್‌ ಭಾಗವಹಿಸುವರು. ಗುರುಪ್ರಸಾದ್ ಟಿ.ಎನ್. ನಡೆಸಿಕೊಡುವರು.

ಪತ್ರಿಕಾ ಗೋಷ್ಠಿ ಯಲ್ಲಿ ಸುಜಿತ್ ಪ್ರತಾಪ್,ಈಶ್ವರಚಂದ್ರ ಶೆಟ್ಟಿ,ಸುನಿಲ್ ಕುಲಕರ್ಣಿ, ಭಾರತ್ ಫೌಂಡೇಶನ್ ಟ್ರಸ್ಟಿ , ಶ್ರೀರಾಜ್ ಗುಡಿ ಟ್ರಸ್ಟಿ ಭಾರತ್ ಫೌಂಡೇಶನ್ , ದುರ್ಗಾ ಪ್ರಸಾದ್ ಕಟೀಲ್.ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು