ಇತ್ತೀಚಿನ ಸುದ್ದಿ
ಜಮ್ಮು ಮತ್ತು ಕಾಶ್ಮೀರ: ಎರಡು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ 4 ಮಂದಿ ಉಗ್ರರು ಹತ
20/06/2022, 17:52
ಶ್ರೀನಗರ(reporterkarnataka.com):
ಜಮ್ಮು ಮತ್ತು ಕಾಶ್ಮೀರದಲ್ಲಿ ನಿನ್ನೆ ರಾತ್ರಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ.
ಕುಪ್ವಾರ ಮತ್ತು ಕುಲ್ಗಾಮ್ ಜಿಲ್ಲೆಗಳ ಎರಡು ಪ್ರತ್ಯೇಕ ಘಟನೆಗಳಲ್ಲಿ ಭದ್ರತಾ ಪಡೆಗಳು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಸತ್ತವರಲ್ಲಿ ಒಬ್ಬ ಪಾಕಿಸ್ತಾನಿ ಉಗ್ರಗಾಮಿ ಲಷ್ಕರ್-ಇ-ತೊಯ್ಬಾಗಾಗಿ ಕೆಲಸ ಮಾಡುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶೌಕತ್ ಅಹ್ಮದ್ ಶೇಖ್ ಎಂಬ ಉಗ್ರನ ಬಂಧನದ ಮಾಹಿತಿ ಮೇರೆಗೆ ಕುಪ್ವಾರ ಜಿಲ್ಲೆಯ ಲೋಲಾಬ್ ಪ್ರದೇಶದಲ್ಲಿ ಸೇನೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ. ಇಕ್ರಮ್‌ನಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ಭದ್ರತಾ ಪಡೆಗಳು ಸುತ್ತುವರಿದಿವೆ. ಈ ಹಿನ್ನೆಲೆಯಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಪಡೆಗಳು ವಿರುದ್ಧ ದಿಕ್ಕಿನಲ್ಲಿ ಗುಂಡಿನ ದಾಳಿ ನಡೆಸಿವೆ. ಘಟನೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಲೋಲಾಬ್‌ನಲ್ಲಿ ಗುಂಡಿನ ಚಕಮಕಿ ಮುಂದುವರಿದಿದೆ.
ಈ ನಡುವೆ ಕುಲ್ಗಾಂ ಜಿಲ್ಲಾ ದಮ್ಹಾಲ್ ಹಂಜಿಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಇದುವರೆಗೆ ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಾರೆ.