1:32 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಜಲಕ್ಷಾಮದ ನಡುವೆ ಈಜುಕೊಳ: ಮತ್ತೊಂದು ವಿವಾದದಲ್ಲಿ ಬ್ರಿಟನ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಾಕ್

16/08/2022, 19:09

ಲಂಡನ್(reporterkarnataka.com): ಬ್ರಿಟನ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಾಕ್ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಇಂಗ್ಲೆಂಡಿನ ಹಲವೆಡೆ ಕ್ಷಾಮದ ಪರಿಸ್ಥಿತಿ ಇರುವಾಗ ತಮ್ಮ ಮನೆಯಲ್ಲಿ 3.8 ಕೋಟಿ ರೂಪಾಯಿ ವೆಚ್ಚದ ಈಜುಕೊಳ ನಿರ್ಮಿಸಿದ್ದಾರೆ ಎಂಬ ಟೀಕೆಗೆ ಗುರಿಯಾಗಿದ್ದಾರೆ.

ನಾರ್ಥ್ ಯಾರ್ಕ್‌ಶೈರ್‌ನಲ್ಲಿನ ತನ್ನ ಬಂಗಲೆಯಲ್ಲಿ ಸುನಾಕ್ 3.8 ಕೋಟಿ ರೂ. ವೆಚ್ಚದಲ್ಲಿ ಈಜುಕೊಳ ನಿರ್ಮಿಸಿದ್ದು ಅವರು ಪತ್ನಿ, ಇಬ್ಬರು ಮಕ್ಕಳೊಂದಿಗೆ ಇಲ್ಲಿ ವಾರಾಂತ್ಯ ಹಾಗೂ ರಜೆಯನ್ನು ಮೋಜಿನಿಂದ ಕಳೆಯುತ್ತಿದ್ದಾರೆ ಎಂದು ‘ಡೈಲಿ ಮೈಲ್’ ವರದಿ ಮಾಡಿದೆ. ಅಲ್ಲದೆ ಈ ಬಂಗಲೆಯಲ್ಲಿ ಟೆನಿಸ್ ಕೋರ್ಟ್ ಹಾಗೂ ಜಿಮ್ ಅನ್ನೂ ನಿರ್ಮಿಸಲಾಗುತ್ತಿದೆ. ಆಗಸದಿಂದ ತೆಗೆಯಲಾಗಿರುವ ಈ ಪ್ರದೇಶದ ಚಿತ್ರದಲ್ಲಿ ಈಜುಕೊಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿರುವುದು ದೃಢಪಟ್ಟಿದೆ ಎಂದು ವರದಿ ಹೇಳಿದೆ. ಕ್ಷಾಮದ ಹಿನ್ನೆಲೆಯಲ್ಲಿ ನೀರಿನ ಖರ್ಚು ಮಿತಗೊಳಿಸಲು ನಗರದಲ್ಲಿನ ಸಾರ್ವಜನಿಕ ಈಜುಕೊಳವನ್ನು ಮುಚ್ಚಿರುವ ಸಂದರ್ಭದಲ್ಲಿ ಜನಪ್ರತಿನಿಧಿಯೊಬ್ಬರು ಈ ರೀತಿ ಮಾಡುತ್ತಿರುವುದು ಸರಿಯೇ ಎಂದು ವ್ಯಾಪಕ ಖಂಡನೆ, ಟೀಕೆ ವ್ಯಕ್ತವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು