ಇತ್ತೀಚಿನ ಸುದ್ದಿ
ಜಲ ಪ್ರವಾಹಕ್ಕೆ ಬದುಕು ಕಳೆದುಕೊಂಡ ನಿರಾಶ್ರಿತರಿಂದ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನ: ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಘಟನೆ
10/02/2023, 15:07

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
2019ರಲ್ಲಿ ನೆರೆಯಿಂದ ಬದುಕು ಕಳೆದುಕೊಂಡಿದ್ದ ಮಲೆಮನೆ ಹಾಗೂ ಮಧುಗುಂಡಿಯ ಸುಮಾರು 11 ಕುಟುಂಬಗಳು ಪರಿಹಾರಕ್ಕೆ ಆಗ್ರಹಿಸಿ ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ.
ಮೂಡಿಗೆರೆ ತಾಲೂಕಿನ ಮಲೆಮನೆ-ಮಧುಗುಂಡಿಯ ಗ್ರಾಮಸ್ಥರು 2019ರ ಭಾರಿ ಜಲಪ್ರವಾಹಕ್ಕೆಮನೆ-ಆಸ್ತಿ-ಹೊಲ-ಗದ್ದೆ-ತೋಟ ಎಲ್ಲವನ್ನೂ ಕಳೆದುಕೊಂಡಿದ್ದರು. ಮಲೆಮನೆಯಲ್ಲಿ 6 ಮನೆಗಳು ಸಂಪೂರ್ಣ ನೆಲಸಮವಾಗಿದ್ದವು.
ಮನೆ ಮಂದಿ ಒಂದು ಚಮಚ ಕೂಡ ಸಿಗದಂತೆ ಎಲ್ಲವನ್ನೂ ಕಳೆದುಕೊಂಡಿದ್ದರು. ನಾಲ್ಕು ವರ್ಷದಿಂದ ಗ್ರಾಮಸ್ಥರು ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕೂತಿದ್ದರು. ಆದರೆ ಇದುವರೆಗೆ ಯಾವುದೇ ಪರಿಹಾರ ಸಿಗಲಿಲ್ಲ.