2:02 AM Tuesday26 - November 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ

ಇತ್ತೀಚಿನ ಸುದ್ದಿ

ಜಗತ್ತಿನೆಲ್ಲೆಡೆ ಸುದ್ದಿ ಮಾಡುತ್ತಿದೆ ಹೊಸ ಡಯಟ್, Veganism ನಿಜವಾಗಿಯೂ ಹಿತಕರವೇ ? ; ಲೇಖನ – ಅಕ್ಷತಾ ಬಜಪೆ

29/10/2021, 10:06

ಅಕ್ಷತಾ ಬಜಪೆ
akshathakudla@gmail.com

ವಿಷಯ ಇಷ್ಟೇ..
ಇಲ್ಲಿಯ ತನಕ ಸಸ್ಯಾಹಾರಿ, ಮಾಂಸಾಹಾರಿ ಅಂತ ಎರಡು ವಿಭಾಗಗಳಲ್ಲಿ ಇದ್ದ ಆಹಾರ ಪದ್ಧತಿಗೆ ಈಗ #vegan ಅನ್ನುವ ಹೊಸ ‘ವಾದ’ ಸೇರಿಕೊಂಡಿದೆ.

ಇದನ್ನು ವಾದ ಅಂತ ಕರೆದಿದ್ದೇಕೆಂದರೆ #veganism ನಲ್ಲಿ ಸಂಪೂರ್ಣ ಮಾಂಸಾಹಾರ ತೊರೆಯುವುದು ಮಾತ್ರವಲ್ಲದೆ, ಇದರ ಮುಖ್ಯ ಉದ್ದೇಶ #dairyfree ಅಂದರೆ ಡೈರಿಯಿಂದ ಬರುವ ಅಥವಾ ಪ್ರಾಣಿಜನ್ಯ ಹಾಲು, ಮೊಸರು, ಬೆಣ್ಣೆ, ತುಪ್ಪ ಇವುಗಳಿಂದ ಮುಕ್ತರಾಗುವುದು.


ಯಾವುದೇ ಡೈರಿ ಉತ್ಪನ್ನಗಳನ್ನು ಬಳಸದೇ ಇರುವುದು.
ಬೇಕಾದರೆ ಸಸ್ಯಜನ್ಯ ಹಾಲು ಉಪಯೋಗಿಸಿಕೊಳ್ಳಿ ಅನ್ನುವುದು ಇವರ ವಾದ (ಉದಾ: ಸೋಯಾ ಹಾಲು).

ಈ ಬಾರಿ ಇದನ್ನೆಲ್ಲ ಪ್ರಮೋಟ್ ಮಾಡಲು ದೊಡ್ಡ ದೊಡ್ಡ ಸೆಲೆಬ್ರೆಟಿಗಳನ್ನು ಬಳಸಿಕೊಳ್ಳುತ್ತಿದ್ದಾರೆ.
ಫ್ಯಾಶನ್ ಹೆಸರಿನಲ್ಲಿ ಜನರನ್ನು ಮರುಳು ಮಾಡುವ ಮತ್ತೊಂದು ಷಡ್ಯಂತ್ರ ಇದು.

ನಮಗೆಲ್ಲಾ ನೆನಪಿರಬಹುದು ಕೆಲ ವರುಷಗಳ ಹಿಂದೆ ತುಪ್ಪ ತಿಂದವರಿಗೆಲ್ಲಾ ಬೊಜ್ಜು ಬರುತ್ತದೆ. ಹಾಗಾಗಿ ತುಪ್ಪ ತಿನ್ನಬಾರದು ಅನ್ನೋ ಹುಚ್ಚು ಐಡಿಯಾ ಕೊಟ್ಟರು. ಇದನ್ನೇ ಲೋಕಲ್ ಡಾಕ್ಟರ್‌ ಗಳೆಲ್ಲಾ ಕಣ್ಣುಮುಚ್ಚಿ ನಂಬಿ ನಮಗೂ ಅದೇ ಸಲಹೆ ಕೊಟ್ಟರು.
ಕೆಲ ವರುಷಗಳಲ್ಲಿ ಇದು ಸುಳ್ಳು ಅಂತ ಸಾಬೀತಾಗುವ ಹೊತ್ತಿಗೆ,
ಮನೆಯಲ್ಲೇ ಹಸು ಸಾಕಿ, ತುಪ್ಪ ಮಾಡಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಅದೆಷ್ಟೋ ಜನ ಆ ಕಸುಬನ್ನೇ ಬಿಟ್ಟು ಬೇರೆ ಜೀವನಾಧಾರ ಹುಡುಕಿಕೊಂಡಿದ್ದರು. ಈಗ ಆ ಎಲ್ಲ ಕೆಲಸ ಕೆಲವೇ ಕೆಲವು ಡೈರಿಗಳು ಮಾಡುತ್ತಿವೆ‌.

ಇತ್ತ ಜನರ ಕಸುಬು ಹೋಯಿತು.
ನಮಗೆ ಅರಿವಿಲ್ಲದೆ ಅದೇ ಹೆಸರಿನ ಕೈಗಾರಿಕೆ ಬಂತು.
ಅವರು ತಯಾರಿಸುವ ಪ್ಯಾಕೆಟ್ ಗಳಲ್ಲಿ ನಾನಾ ಹೆಸರಿನ ವಿಷ ಉಚಿತವಾಗಿ ಸಿಕ್ಕಿತು.
ಇತ್ತ ಸಾಮಾನ್ಯ ಜನ ಒಂದು ಲೀಟರ್‌ ದೇಸಿ ತುಪ್ಪಕ್ಕೆ ಸಾವಿರಾರು ರೂಪಾಯಿ ಕೊಡುವಂತಹ ದಯನೀಯ ಪರಿಸ್ಥಿತಿ ಬಂತು.
ಜೊತೆಗೆ ತುಪ್ಪ ತಿನ್ನುವುದು ಬಿಟ್ಟು ತಮ್ಮ ದೇಹಾರೋಗ್ಯದ ಸಂತುಲನ‌ ಕಳೆದುಕೊಂಡವರೆಷ್ಟೋ…!

ತಾಯಿಯ ಎದೆ ಹಾಲಿನ‌ ವಿಷಯದಲ್ಲಿ ಕೂಡ 2-3 ದಶಕಗಳ ಹಿಂದೆ ಇದೇ ತರಹದ ಬೃಹನ್ನಾಟಕ ನಡೆದದ್ದು ತಮಗೆ ನೆನಪಿರಬಹುದು.

ಇನ್ನು ಈಗ ಹೊಸದಾಗಿ ಇನ್ನೊಂದು product ಬಂದಿದೆ. ಇದನ್ನೂ ನಾವು ಅಪ್ಪಕೊಂಡರೆ ಕೆಲವೇ ವರುಷಗಳಲ್ಲಿ ನಮ್ಮ. ದೇಹ ನಿಷ್ಕ್ರಿಯವಾದರೂ ಆಶ್ಚರ್ಯವಿಲ್ಲ.
Imagine meat ಅನ್ನುವ ಹೆಸರಿನಲ್ಲಿ ಬಾಲಿವುಡ್ ನ ಒಂದು ಸೆಲೆಬ್ರಿಟಿ ದಂಪತಿಗಳು ಒಂದು ಉತ್ಪನ್ನವನ್ನು endorse ಮಾಡುತ್ತಿದ್ದಾರೆ. ಅವರ ಮೂಲಕವೇ ಈ ಉತ್ಪನ್ನವನ್ನು ಭಾರತಕ್ಕೆ ತರಲಾಯಿತು. ಸೋಯಾ ತಳಿಯ ಮೂಲಕ ಮಾಂಸದಂತೆ ರುಚಿಸುವ, feel ಕೊಡುವ ಉತ್ಪನ್ನ ಅದು. ನಾವು ‌ಮಾಂಸದ ಬದಲಾಗಿ ಇದನ್ನು ಬಳಸಬಹುದಂತೆ. ಇಲ್ಲಿಯತನಕದ ಅತೀ ಅಪಾಯಕಾರಿ ಆವಿಷ್ಕಾರ ಇದು ಅಂತ ತಜ್ಞರು ಹೇಳುತ್ತಿದ್ದಾರೆ.

ನಮ್ಮ ಮನೆಗಳಲ್ಲಿ ನಮ್ಮ ಅಜ್ಜ- ಅಜ್ಜಿ ಯಾವುದು ತಿನ್ನುತ್ತಿದ್ದರೋ ಅದಷ್ಟೇ ತಿಂದರೆ ನಮಗೆ ಏನೆಲ್ಲಾ ಬೇಕೋ ಅಷ್ಟು ರುಚಿ, protein, vitamin ಎಲ್ಲವೂ ಸಿಗುತ್ತದೆ.
ಹುಚ್ಚುಕುದುರೆಯ ಹಿಂದೆ ಓಡದೇ ಇದ್ದರೆ ನಮ್ಮ ಆರೋಗ್ಯ, ಆಯಸ್ಸು ಎರಡೂ ಉತ್ತಮವಾಗಿರಬಲ್ಲದು.

ಇತ್ತೀಚಿನ ಸುದ್ದಿ

ಜಾಹೀರಾತು