ಇತ್ತೀಚಿನ ಸುದ್ದಿ
ಜಾತಿ ಗಣತಿಗೆ ಸಂಬಂಧಿಸಿದ ವಿಷಯಗಳ ಅಧ್ಯಯನ ಸಮಿತಿ: ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಸಂಚಾಲಕ
04/09/2021, 18:27
ನವದೆಹಲಿ(reporterkarnataka.com): ಜಾತಿ ಗಣತಿಗೆ ಸಂಬಂಧಿಸಿದ ವಿಷಯಗಳನ್ನು ಅಧ್ಯಯನ ಮಾಡುವ ನೂತನ ಸಮಿತಿಗೆ ಸಂಚಾಲಕರಾಗಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರನ್ನು ನೇಮಕ ಮಾಡಲಾಗಿದೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಶಿಫಾರಸ್ಸಿನ ಮೇರೆಗೆ ಈ ನೇಮಕ ಮಾಡಲಾಗಿದೆ.ಸದಸ್ಯರಾಗಿ ಅಭಿಷೇಕ್ ಮನು ಸಿಂಘ್ವಿ, ಸಲ್ಮಾನ್ ಖುರ್ಶಿದ್, ಮೋಹನ್ ಪ್ರಕಾಶ್, ಆರ್.ಪಿ.ಎನ್ ಸಿಂಗ್, ಪಿ.ಎಲ್. ಪುನಿಯಾ, ಕುಲ್ದೀಪ್ ಬಿಶೋನಿ ಅವರನ್ನು ನೇಮಿಸಿ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಆದೇಶ ನೀಡಿದ್ದಾರೆ.