ಇತ್ತೀಚಿನ ಸುದ್ದಿ
ಇನ್ನು 2ರಿಂದ 18 ವರ್ಷದವರಿಗೆ ಕೋವಾಕ್ಸಿನ್ ಲಸಿಕೆ: ಡಿಸಿಜಿಐ ಗ್ರೀನ್ ಸಿಗ್ನಲ್
12/10/2021, 19:34
ಹೊಸದಿಲ್ಲಿ(reporterkarnataka.com) : ವಿಷಯ ತಜ್ಞರ ಸಮಿತಿಯು 2ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಭಾರತ್ ಬಯೋಟೆಕ್ ತಯಾರಿಸಿರುವ ಕೋವಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ ಎಂದು ತಿಳಿದು ಬಂದಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪೆನಿಯು ಸೆಪ್ಟೆಂಬರ್‌ನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಕೋವಾಕ್ಸಿನ್‌ನ ಹಂತ -2 ಹಾಗೂ ಹಂತ -3 ಪ್ರಯೋಗಗಳನ್ನು ಪೂರ್ಣಗೊಳಿಸಿತು ಹಾಗೂ ಈ ತಿಂಗಳ ಆರಂಭದಲ್ಲಿ ಟ್ರಯಲ್ ಡೇಟಾವನ್ನು ಡ್ರಗ್ಸ್ ಮತ್ತು ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಗೆ ಸಲ್ಲಿಸಿತು.