ಇತ್ತೀಚಿನ ಸುದ್ದಿ
ಭಾರತೀಯ ವಾಯುಪಡೆಯ ಮಿರಾಜ್ ಪತನ: ಪೈಲಟ್ ಸುರಕ್ಷಿತವಾಗಿ ಪಾರು; ಮಧ್ಯಪ್ರದೇಶದಲ್ಲಿ ದುರ್ಘಟನೆ
21/10/2021, 23:02
ಗ್ವಾಲಿಯರ್(reporterkarnataka.com):
ಭಾರತೀಯ ವಾಯುಪಡೆಯ ಮಿರಾಜ್ 2000 ಯುದ್ಧ ವಿಮಾನ ಗುರುವಾರ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಬಳಿ ಪತನಗೊಂಡಿದ್ದು, ಪೈಲಟ್ ಹೊರಗೆ ಧುಮುಕಿ ಬಚಾವ್ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೈಲಟ್ ಸುರಕ್ಷಿತವಾಗಿ ಹೊರಹಾಕಲ್ಪಟ್ಟರು ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ. ಇಂದು ಮುಂಜಾನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮೀರಜ್ 2000 ಏರ್‍ಕ್ರಾಫ್ಟ್ ಹಾರಾಟ ನಡೆಸುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನಲೆಯಲ್ಲಿ ವಿಮಾನ ಪತನಗೊಂಡಿದೆ. ವಿಮಾನ ಪತನದ ಮುನ್ಸೂಚನೆ ದೊರೆಯುತ್ತಿದ್ದಂತೆ ಪೈಲಟ್ ವಿಮಾನದಿಂದ ಪ್ಯಾರಾಚೂಟ್ ಮೂಲಕ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.
ಮನಕ್‍ಭಾಗ್ ಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತು. ನೋಡ ನೋಡುತ್ತಿದ್ದಂತೆ ವಿಮಾನ ಪತನವಾಯಿತು. ಪೈಲಟ್ ಅವರನ್ನು ರಕ್ಷಣೆ ಮಾಡಲಾಗಿದೆ ಎಂದು ಭೀಂಡ್ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಇಂದು ಮುಂಜಾನೆ ಗ್ವಾಲಿಯರ್‍ನಲ್ಲಿರುವ ಏರ್‍ಬೇಸ್‍ನಿಂದ ವಿಮಾನ ಹಾರಾಟ ಆರಂಭಿಸಿತ್ತು. ಘಟನಾ ಸ್ಥಳಕ್ಕೆ ಜಿಲ್ಲಾಡಳಿತ ಹಾಗೂ ವಾಯುಪಡೆ ಅಕಾರಿಗಳು ದೌಡಾಯಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.