8:36 AM Thursday10 - July 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿನ ಪೆಟ್ರೋಲಿಯಂ ಕಂಪನಿಗಳ ಸಂಬಂಧಿತ ದುರಂತ ನಿರ್ವಹಣೆಗೆ ಅಗ್ನಿಶಾಮಕ ಇಲಾಖೆಯ ಸಶಕ್ತಗೊಳಿಸಲಾಗಿದೆ: ಗೃಹ… ಕೊಪ್ಪ ಮೊರಾರ್ಜಿ‌ ವಸತಿ ಶಾಲೆಯ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಪ್ರಿನ್ಸಿಪಾಲ್, ವಾರ್ಡನ್ ಅಮಾನತು:… ಕೊಲೆ ಪ್ರಕರಣ: ಯೆಮೆನ್‌ನಲ್ಲಿ ಮರಣ ದಂಡನೆಗೆ ಒಳಗಾಗಿರುವ ಕೇರಳದ ನರ್ಸ್ ನಿಮಿಷಾಗೆ ಜುಲೈ… ನಂಜ ಈ ಪಣಿ ಮಾಡಿತಾಮಿ ಸಾರೂ: ವಿರಾಜಪೇಟೆ ಶಾಸಕರ ಮುಂದೆ ಕೆದರಿದ ಕೂದಲಿನ,… ಪುನರ್ವಸು ಮಳೆ ಅಬ್ಬರ: ಕೊಚ್ಚಿ ಹೋಗುವ ಭೀತಿಯಲ್ಲಿ ತೀರ್ಥಹಳ್ಳಿಯ ಕುನ್ನಿಕೇವಿ ಸೇತುವೆ! ತುಂಗಾ ಕಮಾನು ಸೇತುವೆ ಮೇಲೆ ಹರಿಯುತ್ತಿದೆ ನೀರು!: ಹೆದ್ದಾರಿ ಇಂಜಿನಿಯರ್ ಗಳ ಅದ್ಬುತ… ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ…

ಇತ್ತೀಚಿನ ಸುದ್ದಿ

ಐಗಳ ಮಲ್ಲಾಪುರ: ಪೋಲಾಗುತ್ತಿರುವ ಕುಡಿಯುವ ನೀರು, ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ!

12/06/2022, 22:07

 ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com 

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ಚೌಡಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಐಗಳ ಮಲ್ಲಾಪುರದಲ್ಲಿ ಗ್ರಾಮದ ಹಲವೆಡೆಯ ಸಾರ್ವಜನಿಕ ಕೊಳಾಯಿಗಳಿಗೆ ಟ್ಯಾಪ್ ಇಲ್ಲದ್ದರಿಂದಾಗಿ, ಪ್ರತಿ ಬಾರಿ ನೀರು ಸರಬರಾಜು ಆದಾಗ ಕೆಲ ತಾಸುಗಳ ಕಾಲ ನೀರು ಪೋಲಾಗುತ್ತಿದೆ ಎಂದು ಕೆಲ ಗ್ರಾಮಸ್ಥರು ದೂರಿದ್ದಾರೆ. 

ಕೆಲ ವರ್ಷಗಳೇ ಕಳೆದರೂ ನೀರಿನ ತೊಟ್ಟಿ ಸ್ವಚ್ಚಗೊಳಿಸಿಲ್ಲ ಪರಿಣಾಮ ತೊಟ್ಟಿ ಹೊಳ ಹಾಗೂ ಸುತ್ತ ಮುತ್ತ, ದಪ್ಪನೆಯ ಪಾಚಿ ಬೆಳೆದಿದೆ ಮತ್ತು ನೀರಲ್ಲಿ ಹುಳುಗಳು ಇವೆ ಇದರಿಂದಾಗಿ ಗ್ರಾಮಸ್ಥರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ನೀರಿನ ತೊಟ್ಟಿ ಹತ್ತಿರ ಇರುವ ಪಾಚಿಯಿಂದಾಗಿ ಸಾಕಷ್ಟು ಜನ ಬಿದ್ದಿದ್ದಾರೆಂದು ಗ್ರಾಮಸ್ಥರು ದೂರಿದ್ದಾರೆ. ನೀರಿನ ಟ್ಯಾಂಕ್ ಹಾಗೂ ತೊಟ್ಟಿಯನ್ನು ತೊಳೆದು ಸ್ವಚ್ಚಗೊಳಿಸಬೇಕಿದೆ, ಮತ್ತು ಸುತ್ತ ಮುತ್ತ ನೈರ್ಮಲ್ಯತೆ ಇಲ್ಲವಾಗಿದೆ  ಕಾಪಾಡಬೇಕಿದೆ. ಸಂಬಂಧಿಸಿದಂತೆ ಹಲವುಬಾರೀ ಗ್ರಾಪಂ ಗೆ ಸೂಚಿಸಲಾಗಿದೆಯಾದರೂ, ಏನೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಹಾಗೂ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿಯೋ ನೀರನ್ನು ಸಂಗ್ರಹಿಸುವ ಮೇಲ್ಭಾಗದಲ್ಲಿರುವ ನೀರಿನ ಟ್ಯಾಂಕ್ ತೊಳೆದು ವರ್ಷಗಳೇ ಆಗಿವೆ, ದುರ್ವಾಸನೆ ಯೊಂದಿಗೆ ಕಲುಷಿತ ನೀರು ಸರಬರಾಜಾಗುತ್ತಿದೆ ಆಗಾಗ್ಗೆ ಹುಳಗಳು ಕಾಣಿಸಿವೆ ಎಂದು ದೂರಲಾಗಿದೆ.

ಕೆಲ ಗಲ್ಲಿಗಳಲ್ಲಿನ ನಳಗಳಿಗೆ ಟ್ಯಾಪ್ ಇಲ್ಲವಾಗಿದೆ ಪರಿಣಾಮ,ನಲ್ಲಿಗಳಿಂದ ನೀರು ಹರಿದು ರಸ್ತೆಗಳಲ್ಲಿ ಗುಂಡಿ ನಿರ್ಮಾಣವಾಗಿವೆ,ಅವು ಸೊಳ್ಳೆಗಳ ತಾಣಗಳಾಗಿವೆ ಮತ್ತು ಕೊಳೆತು ನಾರುತ್ತ ಸಾಂಕ್ರಾಮಿ ರೋಗ ಹರಡುತ್ತಿವೆ ಎಂದು ಕೆಲವರು ದೂರಿದ್ದಾರೆ. ಪ್ರತಿ ಭಾರಿಯೂ ನೀರು ಬಿಟ್ಟರೆ ಕೆಲ ತಾಸುಗಳ ಕಾಲ ಟ್ಯಾಪ್ ಇಲ್ಲದ ನಳಗಳಿಂದ, ಬಾರೀ ಪ್ರಮಾಣದಷ್ಟು ನೀರು ಪೋಲಾಗಿಯೇ ಹರಿಯುತ್ತವೆ. ಗ್ರಾಮಪಂಚಾಯ್ತಿ ಯಿಂದ  ಸಾರ್ವ ಜನಿಕ ಪ್ರತಿ ನಳಕ್ಕೂ ಟ್ಯಾಪ್ ಶೀಘ್ರವೇ ಅಳವಡಿಸಬೇಕು, ವೈಯಕ್ತಿಕ ವಾಗಿ ಮನೆಗಳಿಗೆ ಅಳವಡಿಸಿಕೊಂಡಿರುವ ನಳಗಳಿಗೆ ಟ್ಯಾಪ್ ಅಳವಡಿಸುವುದನ್ನು ಖಡ್ಡಾಯಗೊಳಿ ನೀರು ಪೋಲಾಗದಂತೆ ಶೀಘ್ರವೇ ಗ್ರಾಪಂ ಕ್ರಮ ಜರುಗಿಸಬೇಕೆಂದು ಕೆಲ ಸಂಘಟನೆಗಳು ಒತ್ತಾಯಿಸಿವೆ. ಸಂಬಂಧಿಸಿದಂತೆ ಪಿಡಿಓ ಅಗತ್ಯ ಕ್ರಮಗಳನ್ನು ಶೀಘ್ರವೇ ಕೈಗೊಳ್ಳಬೇಕಿದೆ,ಈ ನಿಟ್ಟಿನಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಈ ಮೂಲಕ ಒತ್ತಾಯಿಸಲಾಗಿದೆ.

ಸರ್ಕಾರ ನೀರು ಉಳಿಸಿ ಎಂದು ಬೊಬ್ಬೆಹೊಡೆದು ಕೊಳ್ಳುತ್ತಿದೆ,ಕೆಲವೆಡೆಗಳಲ್ಲಿ ಹನಿ ನೀರಿಗೂ ತಾತ್ವಾರ ಪಡುವ ದುಸ್ಥಿತಿ ಹಲೆವೆಡೆ ಇದೆ, ಆದ್ರೆ ಇಲ್ಲಿ ನೀರಿಗೆ ಮಹತ್ವ ಕೊಡುತ್ತಿಲ್ಲ ನೀರು ಪೋಲಾಗುವುದನ್ನು ತಡೆಯುತ್ತಿಲ್ಲ ಎಂದು ಗ್ರಾಮದ ಪ್ರಜ್ಞಾವಂತರು ದೂರಿದ್ದಾರೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಇಲ್ಲಿಗೆ ಈ ವರೆಗೂ ಬೆಟ್ಟಿ ನೀಡಿಲ್ಲ, ಶೀಘ್ರವೆ ಗ್ರಾಮಕ್ಕೆ ಬೆಟ್ಟಿ ನೀಡಬೇಕು ನೀರು ಪೋಲಾಗದಂತೆ ಅಗತ್ಯ ಕ್ರಮ ಜರುಗಿಸಬೇಕಿದೆ.

ನೀರಿನ ಟ್ಯಾಂಕ್ ಹಾಗೂ ನೀರಿನ ತೊಟ್ಟಿ ಸ್ವಚ್ಚಗೊಳಿಸಬೇಕು ಮತ್ತು ಸುತ್ತ ನೈರ್ಮಲ್ಯತೆ ಕಾಪಾಡಬೇಕಿದೆ. ಗ್ರಾಮದ ಕೆಲವೆಡೆಗಳಲ್ಲಿ ಮೂಲ ಭೂತಸೌಕರ್ಯಗಳಿಲ್ಲವಾಗಿದೆ,ನೈರ್ಮಲ್ಯತೆ ಮರೀಚಿಕೆಯಾಗಿದೆ, ಕಾಲುವೆಗಳು ಕೆಲವೆಡೆ ತುಂಬಿವೆ.ಹಲವೆಡೆ ಕಸದ ರಾಶಿಗಳಿದ್ದು ಸೊಳ್ಳೆಗಳ ತಾಣವಾಗಿವೆ ಕಾರಣ ಈ ದುಸ್ಥಿಯನ್ನು ಶೀಘ್ರವೇ ಸರಿಪಡಿಸಬೇಕಿದೆ. ಗ್ರಾಮದ ಕೆಲವು ಜನಪ್ರತಿನಿಧಿಗಳು ಗ್ರಾಮದ ಬಗ್ಗೆ ಕಾಳಜಿ ತೋರದೆ ತಾತ್ಸಾರ ತೋರುತ್ತಿದ್ದಾರೆ, ಗ್ರಾಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಅವರಂತೆ ವರ್ತಿಸುತ್ತಾರೆಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಪಿಡಿಓರವರಿಗೆ ಶೀಘ್ರವೇ ಆದೇಶಿಸಬೇಕೆಂದು ಗ್ರಾಮದ ಹಲವು ಸಂಘಟನೆಗಳ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಮಹಿಳೆಯರು ಈ ಮೂಲಕ ಕೂಡ್ಲಿಗಿ ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು