2:20 AM Sunday5 - January 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರು: 22ನೇ ಚಿತ್ರಸಂತೆ ಉದ್ಘಾಟನೆ; ಕಲಾಕೃತಿ ಕೊಂಡು ಕಲಾವಿದರ ಬೆಂಬಲಿಸಲು ಮುಖ್ಯಮಂತ್ರಿ ಕರೆ ವಿರೋಧ ಪಕ್ಷ ಆರೋಪ ಮಾಡಿದರೆ ಸಾಬೀತು ಮಾಡಬೇಕು: ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯ ಇಡಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಲೂಟಿ: ಕಠಿಣ… ಬೆಂಗಳೂರು: ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿರುವ ರಸ್ತೆಗಳನ್ನು ಗುರುತಿಸಲು ಸೂಚನೆ ಎನ್. ಆರ್. ಪುರ: ರಾಜ್ಯ ಹೆದ್ದಾರಿಯಲ್ಲಿ ಓಡಾಡಿದ ಕಾಡಾನೆ; ನಾಗರಿಕರಲ್ಲಿ ಹೆಚ್ಚಿದ ಆತಂಕ ದೀರ್ಘಾವಧಿ ಸಾಲ 137.85 ಕೋಟಿಗಳ ಅನುದಾನ ವಿನಿಯೋಗ: ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ… ರಾಜ್ಯದ 4 ಸಾರಿಗೆ ನಿಗಮಗಳಲ್ಲಿ ಶೇ.15ರಷ್ಟು ದರ ಹೆಚ್ಚಳ: ಸಚಿವ ಸಂಪುಟ ಅನುಮೋದನೆ ಮಂಗಳೂರು ಸಹಿತ ರಾಜ್ಯದ 6 ಸ್ಮಾರ್ಟ್‌ ಸಿಟಿ ಕಾಮಗಾರಿಗಳ ತನಿಖೆ: ಸಚಿವ ಬೈರತಿ… ಕ್ರೆಡಲ್ ನಿಂದ 40.53 ಕೋಟಿ ಲಾಭಾಂಶ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹಸ್ತಾಂತರ ಬೆಂಗಳೂರು: ಬೈಕ್ ಶೋ ರೂಂನಲ್ಲಿ ಅಗ್ನಿ ಅನಾಹುತ: ಸುಟ್ಟು ಕರಕಲಾದ 60ಕ್ಕೂ ಹೆಚ್ಚು…

ಇತ್ತೀಚಿನ ಸುದ್ದಿ

ಈಡಿಗರ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಂದ ಎಂಪಿ ಟಿಕೆಟ್ ಆಫರ್: ನಟ ಶಿವರಾಜ್ ಕುಮಾರ್ ಹೇಳಿದ್ದೇನು?

10/12/2023, 23:51

ಬೆಂಗಳೂರು(reporterkarnataka.com):ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ 75 ನೇ ವರ್ಷದ ಅಮೃತ ಮಹೋತ್ಸವದ ಬೃಹತ್ ಜಾಗೃತ ಸಮಾವೇಶ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಿತು.
ಸರ್ಕಾರಕ್ಕೆ ಸಮಾಜದ ವತಿಯಿಂದ ಹಲವು ಬೇಡಿಕೆಗಳನ್ನು ನೀಡಲಾಯಿತು. ಈಡಿಗ ಸಮಾಜ ಇನ್ನೂ ಹೆಚ್ಚಿನ ಸಂಘಟನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲಿ, ನಾರಾಯಣ ಗುರುಗಳ ಆದರ್ಶಗಳನ್ನು ಎಲ್ಲರೂ ಸದಾ ಪಾಲಿಸೋಣ ಎಂದು ಸಂಘದ ಅಮೃತ ಮಹೋತ್ಸವಕ್ಕೆಗಣ್ಯರು
ಶುಭ ಕೋರಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡುತ್ತಿದ್ದಾಗ ನಟ ಶಿವರಾಜ್ ಕುಮಾರ್ ಅವರನ್ನು ಉದ್ದೇಶಿಸಿ, ಮುಂಬರುವ ಲೋಕಸಭೆ ಚುನಾವಣೆಗೆ ನಿಲ್ಲಲ್ಲು ಸಿದ್ಧರಾಗಿ ಎಂದು ಹೇಳಿದರು. ಆದರೆ ನಟ ಶಿವರಾಜ್ ಕುಮಾರ್ ಅವರು ಇದೇ ಸಮಾರಂಭದಲ್ಲಿ ಉತ್ತರ ನೀಡಿ, ತಂದೆಯವರು ಬಣ್ಣ ಮಾತ್ರ ಹಚ್ಚಬೇಕು. ಆ್ಯಕ್ಟ್ ಮಾತ್ರ ಮಾಡಬೇಕು. ನಟನೆಯ ಮೂಲಕ ಜನರನ್ನು ರಂಜಿಸುವುದಷ್ಟೇ ನಮ್ಮ ಕೆಲಸ ಎಂದು ಹೇಳುತ್ತಿದ್ದರು ಎನ್ನುವ ಮೂಲಕ ನಯವಾಗಿ ರಾಜಕೀಯವನ್ನು
ನಿರಾಕರಿಸಿದರು. ಪತ್ನಿ ಗೀತಾಗೆ ರಾಜಕೀಯದ ಬಗ್ಗೆ ಒಲವಿದೆ. ಅವರು ಈ ಹಾದಿಯಲ್ಲಿ ಮುಂದುವರಿಯಲಿ ಎಂದು ಶಿವರಾಜ್ ಕುಮಾರ್ ಹೇಳಲು ಮರೆಯಲಿಲ್ಲ.
ವರನಟ ರಾಜ್ ಕುಮಾರ್ ಅವರಿಗೂ ಪ್ರಮುಖ ರಾಜಕೀಯ ಪಕ್ಷಗಳು ಆಫರ್ ನೀಡಿತ್ತು. ಆದರೆ ರಾಜ್ ಕುಮಾರ್ ಅವರು ರಾಜಕೀಯಕ್ಕೆ ಬರಲು ನಿರಾಕರಿಸಿದ್ದರು. ರಾಜ್ ಕುಮಾರ್ ಅವರು ಮನಸ್ಸು ಮಾಡುತ್ತಿದ್ದರೆ ಅವರಿಗೆ ರಾಜ್ಯದ ಮುಖ್ಯಮಂತ್ರಿ ಆಗಬಹುದಿತ್ತು. ಆದರೆ ಅವರು ನಟನಾಗಿ ರಾಜಕೀಯ ಪ್ರವೇಶಿಸುವುದನ್ನು ಒಪ್ಪುತ್ತಿರಲಿಲ್ಲ.
ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಲಾ‌ ಶಿಕ್ಷಣ ಹಾಗೂ ಸಾಕ್ಷರತಾ‌ ಇಲಾಖೆ‌ ಸಚಿವ ಎಸ್.ಮಧು ಬಂಗಾರಪ್ಪ, ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ,
ನಟರಾದ ಡಾ.ಶಿವರಾಜ್ ಕುಮಾರ್, ಶ್ರೀಮುರುಳಿ, ಈಡಿಗ ಸಂಘದ ರಾಜ್ಯಾಧ್ಯಕ್ಷ ತಿಮ್ಮೇಗೌಡ, ಶಾಸಕ ಎಚ್.ಆರ್ ಗವಿಯಪ್ಪ, ಶಿರಸಿ ಶಾಸಕರಾದ ಭೀಮಣ್ಣ ನಾಯ್ಕ್ , ಸಮಾಜದ ಅನೇಕ ಸ್ವಾಮೀಜಿಗಳು ಮತ್ತು ಸಮಾಜದ ಅನೇಕ ಮುಖಂಡರುಗಳು,ಮಾಜಿ ಶಾಸಕರು, ಮಾಜಿ ಸಚಿವರುಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು