10:11 PM Monday14 - July 2025
ಬ್ರೇಕಿಂಗ್ ನ್ಯೂಸ್
ಕಾರ್ಕಳ ಥೀಮ್ ಪಾರ್ಕ್‌ ಪರಶುರಾಮ ಮೂರ್ತಿ ಹಿತ್ತಾಳೆಯದ್ದೇ ಹೊರತು ಕಂಚಿನಿಂದ ಮಾಡಿದ್ದು ಅಲ್ಲ:… ಕನ್ನಡದ ಮೇರು ನಟಿ ಸರೋಜಾದೇವಿ ನಿಧನ: ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಬೊಮ್ಮಾಯಿ… Kodagu | ವಿರಾಜಪೇಟೆ: ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಬೆಂಕಿ ಆಕಸ್ಮಿಕ; ಅಪಾರ… Vijayapura | ಇಂಡಿಯಲ್ಲಿ 4559 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, ಉದ್ಘಾಟನೆ ಶಕ್ತಿ ಯೋಜನೆ: 500 ಕೋಟಿ ಮಹಿಳೆಯರಿಗೆ ತಲುಪಿದ ಸಾಂಕೇತಿಕವಾಗಿ ಟಿಕೆಟ್ ವಿತರಿಸಿದ ಮುಖ್ಯಮಂತ್ರಿ Kodagu | ದಕ್ಷಿಣ ಕೊಡಗಿನಲ್ಲಿ ಹಸುಗಳ ಮೇಲೆ ವ್ಯಾಘ್ರ ದಾಳಿ: ಒಂದು ಬಲಿ;… ಶರಾವತಿ ನದಿಗೆ ಹೊಲೆ ಬಾಗಿಲಿನಲ್ಲಿ ನಿರ್ಮಿಸಿದ ನೂತನ ಸೇತುವೆ: ಕೇಂದ್ರ ಭೂ ಸಾರಿಗೆ… Kodagu | ಕಾಡಾನೆಗಳ ಕಾಡಿಗೆ ಅಟ್ಟುವ ಕಾರ್ಯಾಚರಣೆ ಯಶಸ್ವಿ: 18 ಸಲಗಗಳು ಮರಳಿ… ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆಯಲ್ಲಿ ಲೂಟಿ ಮಾಡುವ ಉದ್ದೇಶ: ಪ್ರತಿಪಕ್ಷ ನಾಯಕ… ಬೆಂಗಳೂರು ಕಾಲ್ತುಳಿತ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ನಾ ವರದಿ…

ಇತ್ತೀಚಿನ ಸುದ್ದಿ

ಇದೀಗ ಪ್ರೋಮೊ ನೋಡಿ… !! ಕಿಚ್ಚ ಸುದೀಪ್ ಬಿಗ್ ಬಾಸ್ ಒಟಿಟಿ ಕನ್ನಡದ ಮೊದಲ ಆವೃತ್ತಿ ವೂಟ್‌ನಲ್ಲಿ

25/07/2022, 17:42

*ಆನ್ ಬೋರ್ಡ್ಸ್ ವಿಮಲ್ ಎಲೈಚಿ ಸಹ ಪ್ರಸ್ತುತಿ, ಪ್ರಾಯೋಜಕರು ಮತ್ತು ವಿಶೇಷ ಪ್ರಾಯೋಜಕರಾಗಿ ಪೇಟಿಎಂ.

ಬೆಂಗಳೂರು(reporterkarnataka.com):

ವಿಯಾಕಮ್-18ರ ಬಹುಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ವೇದಿಕೆಯಾಗಿರುವ ವೂಟ್‌ನಲ್ಲಿ ಎಕ್ಸ್‌ಕ್ಯೂಕ್ಲಿವ್ ಆಗಿ ಬಿಗ್ ಬಾಸ್ ಒಟಿಟಿ ಕನ್ನಡ ಪ್ರಸಾರವಾಗಲಿದೆ. ಕಳೆದ ವರ್ಷ ಹಿಂದಿಯಲ್ಲಿ ಪ್ರಸಾರವಾದ ಬಿಗ್‌ಬಾಸ್ ಒಟಿಟಿಯಿಂದ ಉತ್ತೇಜನಗೊಂಡು, ಡಿಜಿಟಲ್ ಮನರಂಜನಾ ಕ್ಷೇತ್ರವನ್ನು ವಿಸ್ತರಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕನ್ನಡದಲ್ಲಿ ವೀಕ್ಷಕರ ಪಾಲಿಗೆ ವೂಟ್ ಮನರಂಜನಾತ್ಮಕ ದೃಷ್ಟಿಯಿಂದ ಆಗಸ್ಟ್ 6 ರಿಂದ ಅಗ್ರಸ್ಥಾನ  ಪಡೆಯುವುದರಲ್ಲಿ ಅನುಮಾನವಿಲ್ಲ. 

ಮುಂದಿನ 6 ವಾರಗಳ ಕಾಲ ವೀಕ್ಷಕರಿಗೆ 24/7 ಸಮಯ ನೇರ ಪ್ರಸಾರವನ್ನು ಮನೆಯಲ್ಲೆ ಕುಂತು ನೋಡಬಹುದು. ಡಿಜಿಟಲ್ ಎಕ್ಸ್‌ಕ್ಲೂಸಿವ್ ಆವೃತ್ತಿಯ ಬಿಗ್ ಬಾಸ್ ಒಟಿಟಿ ಕನ್ನಡವನ್ನು ಆನ್ ಬೋರ್ಡ್ಸ್ ವಿಮಲ್ ಎಲೈಚಿ ಸಹ ಪ್ರಸ್ತುತಿ, ಪ್ರಾಯೋಜಕರು ಮತ್ತು ಪೇಟಿಎಂ  ವಿಶೇಷ ಪ್ರಾಯೋಜಕತ್ವದಲ್ಲಿ ವೂಟ್‌ನಲ್ಲಿ ವೀಕ್ಷಿಸಬಹುದು. ಸಾಕಷ್ಟು ಆಕರ್ಷಕವಾಗಿರುವ ಬಿಗ್‌ಬಾಸ್ ಪ್ರೋಮೋವನ್ನು ಕನ್ನಡ ಚಲನಚಿತ್ರ ರಂಗದ ಬಾದ್‌ಷಾ, ಕಿಚ್ಚ ಸುದೀಪ್ ಇಂದು ಅನಾವರಣಗೊಳಿಸಿದರು. ಒಟಿಟಿ ಶೋನ ಮೊದಲ ಆವೃತ್ತಿಗೆ ಕಿಚ್ಚ ಸುದೀಪ್ ಅವರು ರೆಡ್ ಕಾರ್ಪೆಟ್ ಮೂಲಕ ಆಗಮಿಸಿ ತಮ್ಮದೇ ಶೈಲಿಯಲ್ಲಿ ಅನಾವರಣಗೊಳಿಸಿದರು. ಮೊದಲ ಬಿಗ್ ಬಾಸ್ ಒಟಿಟಿ ಕನ್ನಡ ಪ್ರೋಮೋವನ್ನು ವೀಕ್ಷಿಸಿ…

https://www.instagram.com/tv/CgV2CmfJu74/?igshid=YmMyMTA2M2Y=

‘ಮೊದಲ ಒಟಿಟಿ ಆವೃತ್ತಿಯಲ್ಲಿ ವೀಕ್ಷಿಸಲು ಉತ್ಸುಕನಾಗಿದ್ದು, ಇದೊಂದು ಉತ್ತಮ ಬೆಳವಣಿಗೆಯಾಗಿದೆ. ಹೊಸ ಅವತರಣಿಕೆಯೂ ಜನರಲ್ಲಿ ಕ್ರೇಜ್ ಮೂಡಿಸಲಿದೆ. ಒಟಿಟಿಯಲ್ಲಿ ಕನ್ನಡದ ಬಿಗ್‌ಬಾಸ್ ತರುವುದು ಕನಸಾಗಿತ್ತು. 24/7 ವೇಳೆಯಲ್ಲೂ ಜನರು ನೇರಪ್ರಸಾರ ನೋಡಬಹುದು. ಇಲ್ಲಿ ಮನರಂಜನೆ, ಡ್ರಾ, ಮುಂದಿನ 6 ವಾರಗಳ ಕಾಲ ವೀಕ್ಷಕರ ಗಮನಸೆಳೆಯಲಿದೆ. ಬಿಗ್‌ಬಾಸ್ ಹುಚ್ಚು ಇದೀಗ ಆರಂಭಗೊಂಡಿದೆ. ನೋಡ್ತಾ ಇರಿ’ ಎಂದು ಸುದೀಪ್ ಕರೆ ನೀಡಿದರು. 

ಬಿಗ್ ಬಾಸ್ ಕನ್ನಡದ ಹಿಂದಿನ ಆವೃತ್ತಿಗಳು ಸಾಕಷ್ಟು ಪ್ರಸಿದ್ಧಿ ಪಡೆದಿದ್ದವು. ಆಸಕ್ತಿದಾಯಕ ಸ್ಪರ್ಧಿಗಳು ಸ್ಪರ್ಧಿಸಿದ್ದಾರೆ. ಟಿವಿ ರಿಯಾಲಿಟಿ ಸೆಗ್ಮೆಂಟ್‌ನಲ್ಲೇ ಇದು ತುಂಬಾ ಪ್ರಸಿದ್ಧಿ ಪಡೆದ ಕಾರ್ಯಕ್ರಮವಾಗಿದೆ. ಈ ಬಾರಿ ಒಟಿಟಿಯಲ್ಲೂ ಅದೇ ರೀತಿಯ  ಮನರಂಜನೆ ಮುಂದುವರಿಯಲಿದೆ ಎಂದು ಮಾತು ಕೊಡುತ್ತೇವೆ. ಶೀಘ್ರವೇ ಒಟಿಟಿ ಆವೃತ್ತಿ ನಿಮ್ಮ ಮುಂದೆ ಬರಲಿದೆ. ವೀಕ್ಷಕರು ಇದರ ಕಡೆ ಹೆಚ್ಚಿನ ಗಮನಹರಿಸುವ ವಿಶ್ವಾಸವಿದೆ. ಭಾರತದ ಜನಪ್ರಿಯ ರಿಯಾಲಿಟಿ ಶೋಗೆ ಬೆಂಬಲವನ್ನು ಮುಂದುವರಿಸಿ. 

ಆಗಸ್ಟ್ 6 ರಿಂದ ಚೊಚ್ಚಲ ಆವೃತ್ತಿಯ ಒಟಿಟಿ ಬಿಗ್ ಬಾಸ್, ಸಂಜೆ 8 ಗಂಟೆಯಿಂದ, 24/7 ವೂಟ್‌ನಲ್ಲಿ ನೇರಪ್ರಸಾರ.

ಇತ್ತೀಚಿನ ಸುದ್ದಿ

ಜಾಹೀರಾತು