ಇತ್ತೀಚಿನ ಸುದ್ದಿ
ಇದು ರಾಜ್ಯದಲ್ಲೇ ಫಸ್ಟ್ ಟೈಮ್ : ಮಂಗಳೂರಿನಲ್ಲಿ ಅಂಚೆ ಮೂಲಕ ಜನನ-ಮರಣ ಪ್ರಮಾಣ ಪತ್ರ ಮನೆ ಬಾಗಿಲಿಗೆ ರವಾನೆ!
22/03/2022, 23:20
ಮಂಗಳೂರು(reporterkarnataka.com): ಮನೆ ಬಾಗಿಲಿಗೆ ಜನನ-ಮರಣ ಪ್ರಮಾಣಪತ್ರ ತಲುಪಿಸುವ ಯೋಜನೆಗೆ ಸಂಬಂಧಿಸಿದ ಒಡಂಬಡಿಕೆಗೆ ಮಂಗಳೂರು ಮಹಾನಗರ ಪಾಲಿಕೆ ಮತ್ತು ಅಂಚೆ ಒಡಂಬಡಿಕೆಗೆ ಸಹಿ ಹಾಕಿದ್ದು,
ರಾಜ್ಯದಲ್ಲೇ ಮೊದಲ ಬಾರಿಗೆ ಮನೆ ಬಾಗಿಲಿಗೆ ಜನನ-ಮರಣ ಪ್ರಮಾಣ ಪತ್ರ ತಲುಪಿಸುವ ಯೋಜನೆಯನ್ನು ಪಾಲಿಕೆ ಆರಂಭಿಸಿದೆ.
ಪಾಲಿಕೆ ಕಚೇರಿಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ ಉಪಸ್ಥಿತಿಯಲ್ಲಿ ಮನೆ ಬಾಗಿಲಿಗೆ ಜನನ-ಪ್ರಮಾಣಪತ್ರ ತಲುಪಿಸುವ ಯೋಜನೆಗೆ ಚಾಲನೆ ನೀಡಲಾಯಿತು.
ಜನನ, ಮರಣ ಪ್ರಮಾಣ ಪತ್ರ ಬೇಕಿದ್ದವರು ಪಾಲಿಕೆಗೆ ತೆರಳಿ ಅರ್ಜಿ ನೀಡಬೇಕು. ಪಾಲಿಕೆಯು ಅದನ್ನು ಪರಿಶೀಲಿಸಿ ಅಂಚೆ ಮೂಲಕ ಮನೆಗೆ ಕಳುಹಿಸುತ್ತದೆ. ಮನೆಗೆ ಪ್ರಮಾಣಪತ್ರ ಬಂದ ಬಳಿಕ 100 ರೂ. ಶುಲ್ಕ ಪಾವತಿಸಬೇಕು. ಮುಂದಿನ ದಿನಗಳಲ್ಲಿ ಆನ್ ಲೈನ್ ನಲ್ಲೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುದೆ.