7:09 AM Friday30 - January 2026
ಬ್ರೇಕಿಂಗ್ ನ್ಯೂಸ್
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಎಂದರೆ ಹಲವು ಆಯಾಮಗಳ ಸಾಧ್ಯತೆ: ಪುರುಷೋತ್ತಮ ಬಿಳಿಮಲೆ 600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:… ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ… ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಬೋಸರಾಜ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಾಲದಲ್ಲಿ ಗಣರಾಜ್ಯೋತ್ಸವ: 130ಕ್ಕೂ ಅಧಿಕ ವಾಹನ ಚಾಲಕಿಯರಿಗೆ…

ಇತ್ತೀಚಿನ ಸುದ್ದಿ

ಡಿ. 25ರಿಂದ 30ರ ವರೆಗೆ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ: ಕೇಂದ್ರ ಸಚಿವ ಜೋಶಿ, ಸೋಮಣ್ಣ ಭಾಗಿ

14/12/2025, 18:42

ಹಾವೇರಿ(reporterkarnataka.com): ಹುಕ್ಕೇರಿ ಮಠದ ಶ್ರೀಗಳು ಸಮಾಜ ಶುದ್ದೀಕರಣ ಕ್ರಾಂತಿ ಮಾಡುತ್ತಿದ್ದಾರೆ. ಡಿ. 25 ರಿಂದ 30ರ ವರೆಗೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ವಿ. ಸೋಮಣ್ಣ, ಮೈಸೂರಿನ ಒಡೆಯರಾದ ಸಂಸದ ಯದುವೀರ್ ಒಡರಯರ್ ಭಾಗವಹಿಸುತ್ತಿದ್ದಾರೆ. ಇದು ಐತಿಹಾಸಿಕ ಕಾರ್ಯಕ್ರಮ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿಯ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಹುಕ್ಕೇರಿ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಾಕೇಂದ್ರ, ಶಾಲೆಗಳ ಸುವರ್ಣ ಮಹೋತ್ಸವ. ನಾಡಿನ ಈ ಭಾಗದಲ್ಲಿ ಐವತ್ತು ವರ್ಷ ಸುದೀರ್ಘವಾಗಿ ಜಾತಿ ಭೇದ ಇಲ್ಲದೇ ಎಲ್ಲ ಸಮುದಾಯದ ಮಕ್ಕಳಿಗೆ ಶಿಕ್ಷಣ ಕೊಟ್ಟು ಸುಸಂಸ್ಕೃತ ವಾದ ವಿದ್ಯಾವಂತ ಸಮುದಾಯವನ್ನು ನಿರ್ಮಿಸಲು ಮಾಡಿರುವ ಸುದೀರ್ಘ ತಪಸ್ಸಿನ ಯಶಸ್ಸಿನ ಆಚರಣೆಯೇ ಸುವರ್ಣ ಮಹೋತ್ಸವ. ವಿದ್ಯಾರ್ಥಿ ನಿಲಯ ಉದ್ಘಾಟನೆ, ಭಕ್ತಿಯ ಗುರುವಂದನೆ, ಪರಮ ಪೂಜ್ಯರ ತುಲಾಭಾರ, ಇವೆಲ್ಲವನ್ನು ಭಕ್ತರು ಭಕ್ತಿ ಭಾವದ ಭಾವನೆ ಸಮರ್ಪಣೆಗೆ ಈ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ‌ ಎಂದು ಹೇಳಿದರು.

*ಒಂದು ತಿಂಗಳಿಂದ ಕಾರ್ಯಕ್ರಮ;*
ಹುಕ್ಕೇರಿ ಮಠದ ಶ್ರಿಗಳದ್ದು ಗಾಂಭಿರ್ಯದ ಸಾಧನೆಯ ವ್ಯಕ್ತಿತ್ವ ಅದಕ್ಕಾಗಿ ಧರ್ಮ ಜಾಗೃತಿಯ ಜೊತೆಗೆ ಯುವಕರಲ್ಲಿ ಶ್ರದ್ದಾ ಭಾವನೆ ಮೂಡಿಸಿ ಅವರಲ್ಲಿರುವ ದುಶ್ಚಟ, ಕೆಟ್ಟ ವಿಚಾರ ಹೋಗಲಾಡಿಸಿ ಅವರ ಬದುಕು ಶುದ್ದವಾಗಬೇಕು ಬರುವಂತ ದಿನಗಳಲ್ಲಿ ಈ ಭಾಗದ ಜನರು ನೆಮ್ದದಿಯಿಂದ ಬದುಕುವಂತೆ ಮಾಡಲು ಒಂದು ತಿಂಗಳಿಂದ ಕಾರ್ಯಕ್ರಮ ಮಾಡುತ್ತಿದ್ದಾರೆ. ಸಮಾಜ ಶುದ್ದೀಕರಣ ಕ್ರಾಂತಿಯನ್ನು ಹುಕ್ಕೇರಿ ಮಠದ ಶ್ರೀಗಳು ತೆಗೆದುಕೊಂಡಿದ್ದಾರೆ. ಆಧುನಿಕತೆಯ ಪ್ರಭಾವದಲ್ಲಿ ನಮ್ಮತನ, ನಮ್ಮ ಸಂಸ್ಕಾರ, ನಮ್ಮ ಅಸ್ತಿತ್ವವನ್ನೆ ಮುಳುಗಿಸುವ ಪ್ರಭಾವದಿಂದ ಪ್ರಕೃತಿಯೇ ಕೆಟ್ಟು ಹೋಗುವ ಪರಿಸ್ಥಿತಿ ಇದೆ‌. ಶೇಗುಣಸಿ, ಅಕ್ಕಿ ಆಲೂರು ಸೇರಿ ಎಲ್ಲ ಗುರುಗಳನ್ನು ಕರೆಸಿದ್ದಾರೆ. ಈ ಪ್ರವಚನ ನಿರಂತರ ನಡೆಯುತ್ಗಿದೆ ಪ್ರತಿ ದಿನ ಎಂಟರಿಂದ ಹತ್ತು ಸಾವಿರ ಜನ ಸೇರುತ್ತಿದ್ದಾರೆ‌ ಜನರಲ್ಲಿ ಬಕ್ತಿ ಭಾವ ಸಮೂಹವಾಗಿ ವ್ಯಕ್ತ ಆಗುತ್ತಿದೆ. ನಮ್ಮ ದಿನನಿತ್ಯದ ಚಟುವಟಿಕೆತಳಲ್ಲಿ ಅಳವಡಿಸಿಕೊಂಡಾಗ ನಮ್ ಸಂಸ್ಕೃತಿ ಆಗುತ್ತದೆ. ನಾಗರಿಕತೆ ಮತ್ತು ಸಂಸ್ಕೃತಿ ನಡುವಿನ ವ್ಯತ್ಯಾಸ ಜನರು ಮರೆತಿದ್ದಾರೆ. ನಮ್ಮ ಬಳಿ ಏನಿದೆಯೊ ಅದು ನಾಗರಿಕತೆ, ನಾವೇನಾಗಿದ್ದೇವೊ ಅದು ಸಂಸ್ಕೃತಿ ಎಂದರು.

*ಐತಿಹಾಸಿಕ ಕಾರ್ಯಕ್ರಮ,;*
ಇದು ಐತಿಹಾಸಿಕ ಕಾರ್ಯಕ್ರಮ ಆಗಲಿದೆ. ಹುಕ್ಕೇರಿ ಮಠದ ಶ್ರೀಗಳು ಬೆಳ್ಳಿ ತುಲಾಭಾರವನ್ನು ವಿದ್ಯಾರ್ಥಿಗಳ ಪ್ರಸಾದ ಕ್ಕೆ ನೀಡುತ್ತಿದ್ದಾರೆ‌. ಅವರು ಯಾವುದನ್ನೂ ಇಟ್ಡುಕೊಂಡಿಲ್ಲ.
ಮಠ ಮಾನ್ಯಗಳು ರಾಜ್ಯದಲ್ಲಿ ದೊಡ್ಡ ಪಾತ್ರ ವಹಿಸುತ್ತಿವೆ‌ ಸಂಕಷ್ಟದ ಪರಿಸ್ಥಿತಿಯಲ್ಲಿ ಮಠಗಳು ಮಾರ್ಗದರ್ಶನ ಮಾಡುತ್ತಿವೆ‌ ಹುಕ್ಕೇರಿ ಮಠ ಇಡಿ ಉತ್ತರ ಕರ್ನಾಟಕ ಕ್ಜೆ ಮಾರ್ಗರ್ಶಕ ಮಠ ಆಗುತ್ತದೆ ಎನ್ನುವ ವಿಶ್ವಾದ ಇದೆ ಎಂದು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು