ಇತ್ತೀಚಿನ ಸುದ್ದಿ
ಹುಬ್ಬಳ್ಳಿ ಹಿಂಸಾಚಾರ: 90ಕ್ಕೂ ಹೆಚ್ಚು ಮಂದಿ ಅರೆಸ್ಟ್; 50ಕ್ಕೂ ಅಧಿಕ ಬೈಕ್ ಗಳು ಪೊಲೀಸ್ ವಶಕ್ಕೆ
19/04/2022, 00:01
ಹುಬ್ಬಳ್ಳಿ(reporterkarnataka.com): ಬೆಂಗಳೂರಿನ ಡಿಜೆಹಳ್ಳಿ ಹಿಂಸಾಚಾರದಂತೆ ಹುಬ್ಬಳ್ಳಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 90ಕ್ಕೂ ಅಧಿಕ ಜನ ಬಂಧಿಸಲಾಗಿದೆ.
ಪುಂಡರ ವಿರುದ್ಧ ಐಪಿಸಿ 143, 147, 148, 341, 353, 307, 427, 504, 506 ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ 1984ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರ ಸಂಖ್ಯೆ ನೂರು ಮೀರಲಿದ್ದು 50ಕ್ಕೂ ಹೆಚ್ಚಿನ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿರುವ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.