ಇತ್ತೀಚಿನ ಸುದ್ದಿ
ಸರ್ವರ್ ಸಮಸ್ಯೆ: ಫೇಸ್ಬುಕ್, ವಾಟ್ಸಾಪ್, ಇನ್ಟ್ಟಾಗ್ರಾಂ ಜಾಲತಾಣಗಳಿಂದ ಜಾಗತಿಕ ಆರ್ಥಿಕ ನಷ್ಟ ಎಷ್ಟು ಗೊತ್ತೇ ?
05/10/2021, 10:24
ವಾಷಿಂಗ್ಟನ್(reporterkarnataka.com) : ಫೇಸ್ಬುಕ್, ಇನ್ಸ್ತಗ್ರಮ್, ವಾಟ್ಸಾಪ್ ಗಳಿಗೆ ಸಂಬಂಧಿಸಿದಂತೆ ಸರ್ವರ್ ಕೆಲವು ತಾಸು ಡೌನ್ ಆಗಿದ್ದು, ಪರ್ಸನಲ್ ಮೆಸೇಜಿಂಗ್ ಹಾಗೂ ಸೋಷಿಯಲ್ ಕಮ್ಯುನಿಕೇಷನ್ ಎರಡೂ ಸಾಧ್ಯವಾಗುತ್ತಿರಲಿಲ್ಲ. ಸದ್ಯ ಇವುಗಳಿಗೆ ಪರ್ಯಾಯವಾಗಿ ಡಿಜಿಟಲ್ ಬಳಕೆದಾರರು ಟ್ವಿಟರ್ , ಟೆಲಿಗ್ರಾಂ ಹಾಗೂ ಸಿಗ್ನಲ್ ಗೆ ಮೊರೆ ಹೋಗಿದ್ದಾರೆ. ಸದ್ಯ ಎಲ್ಲ ಮತ್ತೆ ಸುಸ್ಥಿತೆ ಬಂದಿದೆ. ಇದರಿಂದ ಉಂಟಾದ ಆರ್ಥಿಕ ನಷ್ಟ ಎಷ್ಟು ಗೊತ್ತೇ?
ಈ ಸರ್ವರ್ ಸಮಸ್ಯೆಯಿಂದ ಜಾಗತಿಕ ಆರ್ಥಿಕತೆಯಲ್ಲೂ ಭಾರಿ ನಷ್ಟ ಉಂಟಾಗಿದ್ದು, ಸುಮಾರು 160 ಮಿಲಿಯನ್ ಡಾಲರ್ ನಷ್ಟಉಂಟಾಗಿದೆ ಎನ್ನಲಾಗಿದೆ. ಈ ತಾಂತ್ರಿಕ ವೈಫಲ್ಯ ಜಾಗತಿಕವಾಗಿ ಸಂಭವಿಸಿರುವುದರಿಂದ ಫೇಸ್ ಬುಕ್ ನ ಷೇರು ಕೂಡ ಶೇ. 6ರಷ್ಟು ಕುಸಿದಿದೆ. ಈ ಕುಸಿತ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಸರ್ವರ್ ಡೌನ್ ಆಗಿರುವುದನ್ನು ಟ್ವಿಟರ್ ಮೂಲಕ ಹೇಳಿಕೊಂಡಿರುವ ಫೇಸ್ ಬುಕ್ , ಅದಕ್ಕಾಗಿ ಬಳಕೆದಾರರ ಕ್ಷಮೆಯನ್ನೂ ಕೋರಿದೆ.