ಇತ್ತೀಚಿನ ಸುದ್ದಿ
ಹಾಸ್ಟೆಲ್ ಊಟದಿಂದ ಅಸ್ವಸ್ಥಗೊಂಡ ನರ್ಸಿಂಗ್ ವಿದ್ಯಾರ್ಥಿಗಳು: ಆಸ್ಪತ್ರೆಗೆ ಶಾಸಕ ವೇದವ್ಯಾಸ ಕಾಮತ್ ಭೇಟಿ
06/02/2023, 23:48

ಮಂಗಳೂರು(reporterkarnataka.com): ಹಾಸ್ಟೆಲ್ ನಲ್ಲಿ ರಾತ್ರಿ ಊಟದ ಬಳಿಕ ಅಸ್ವಸ್ಥಗೊಂಡು ಎ.ಜೆ. ಆಸ್ಪತ್ರೆಗೆ ದಾಖಲಾಗಿರುವ ಸಿಟಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಎ.ಜೆ. ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ವಿಚಾರಿಸಲು ಶಾಸಕ ವೇದವ್ಯಾಸ್ ಕಾಮತ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಜತೆ ಚರ್ಚಿಸಿದರು.
52 ಮಂದಿ ಅಸ್ವಸ್ಥ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಅಧಿಕಾರಿಗಳಿಂದ ಮಾಹಿತಿ ಪಡೆದು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಶಾಸಕ ಕಾಮತ್ ಅವರು ಸೂಚನೆ ನೀಡಿದರು.
ಡಿಸಿಪಿ ದಿನೇಶ್ ಕುಮಾರ್. ಪ್ರಭಾರ ಡಿಎಚ್ ಒ ಡಾ. ರಾಜೇಶ್, ಉರ್ವ ಠಾಣೆಯ ಇನ್ಸ್ಪೆಕ್ಟರ್ ಭಾರತಿ ಸೇರಿದಂತೆ ಹಲವರು ಇದ್ದರು.