5:07 PM Tuesday18 - March 2025
ಬ್ರೇಕಿಂಗ್ ನ್ಯೂಸ್
Water Dispute | ಪೆನ್ನಾರ್ ನದಿ ನೀರು ವಿವಾದ ಕುರಿತು ಚರ್ಚೆಗೆ ದೆಹಲಿ… ಯುವನಿಧಿ ಯೋಜನೆ; ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಚಾರಕ್ಕೆ ಕ್ರಮ: ಸಚಿವ ಡಾ. ಶರಣಪ್ರಕಾಶ್… Education | ದೈಹಿಕ ಶಿಕ್ಷಕರ ಸಹ ಶಿಕ್ಷಕರೆಂದು ಪರಿಗಣಿಸುವ ಕುರಿತು ಪರಿಶೀಲನೆ: ಶಿಕ್ಷಣ… Solar power & Wind power | ಸೌರ ಶಕ್ತಿ ಮತ್ತು ಪವನ… Legislative Council | ನಕಲಿ ಔಷಧಿ ನಿಯಂತ್ರಣಕ್ಕೆ ಅಗತ್ಯ ಕ್ರಮ: ಆರೋಗ್ಯ ಸಚಿವ… KSRTC | ಬಿಜೆಪಿ ಸರಕಾರ ಶೇ 47ರಷ್ಟು ಬಸ್ ದರ ಏರಿಕೆ ಮಾಡಿತ್ತು,… Education Department | ಕನ್ನಡ ಬೋಧಿಸದ ಕೇಂದ್ರ ಪಠ್ಯಕ್ರಮ ವಿರುದ್ಧ ಕ್ರಮಕ್ಕೆ ಮುಂದಾಗಿ:… ಬಿಜೆಪಿ ತರಹ ಕೇವಲ 10% ಜನರ ಕೈಹಿಡಿದು ಶೇ. 90% ಜನರನ್ನು ಕೈಬಿಟ್ಟಿಲ್ಲ:… ಕೇಂದ್ರ ಸರಕಾರ ಕೊಟ್ಟಿರುವುದು ಸಾಲ, ನಮ್ಮ ಪಾಲಿನ ಅನುದಾನವಲ್ಲ: ಸದನದಲ್ಲಿ ಸಿಎಂ ಸಿದ್ದರಾಮಯ್ಯ… ಲೋಕಸಭೆ ಚುನಾವಣೆ ನಂತ್ರ ಗ್ಯಾರಂಟಿ ಯೋಜನೆ ನಿಂತೋಗುತ್ತೆ ಎಂದು ಅಪಪ್ರಚಾರ ಮಾಡಿದ್ರಲ್ಲಾ, ನಿಂತೋಯ್ತೇನ್ರೀ:…

ಇತ್ತೀಚಿನ ಸುದ್ದಿ

Horanadu | ಸಂಸದ ತೇಜಸ್ವಿ ಸೂರ್ಯ- ಶಿವಶ್ರೀ ದಂಪತಿ ಬಸ್ ಯಾತ್ರೆ: ಹೊರನಾಡಿಗೆ ಆಗಮಿಸಿದ ನವಜೋಡಿಯಿಂದ ದೇವಿಗೆ ವಿಶೇಷ ಪೂಜೆ

16/03/2025, 15:23

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಸಂಸದ ತೇಜಸ್ವಿ ಸೂರ್ಯ ನವದಂಪತಿ ಕಾರು ಬಿಟ್ಟು ಸಾರ್ವಜನಿಕ ಸಾರಿಗೆ ಬಸ್ ನಲ್ಲಿ ಪ್ರಯಾಣ ಬೆಳೆಸಿ ಹೊಸ ಅನುಭವ ಪಡೆದರು. ಸೂರ್ಯ ದಂಪತಿ ಚಿಕ್ಕಮಗಳೂರು ಜಿಲ್ಲೆಯ ಕಳಸ, ಹೊರನಾಡು ಭಾಗದಲ್ಲಿ ಬಸ್ ಪ್ರಯಾಣ ನಡೆಸಿ ಸಾರ್ವಜನಿಕರ ಗಮನ ಸೆಳೆದರು.


ತೇಜಸ್ವಿ ಸೂರ್ಯ ದಂಪತಿ ತಮ್ಮ ಕಾರು ಬಿಟ್ಟು, ಕಳಸ-ಹೊರನಾಡಿನ ಹಾವು-ಬಳುಕಿನ ರಸ್ತೆಗಳಲ್ಲಿ ಖಾಸಗಿ ಬಸ್ಸಿನಲ್ಲಿ ಸಂಚಾರ ಮಾಡಿ ಪ್ರಕೃತಿಯ ಧಾರಾಳತನವನ್ನು ಆಸ್ವಾದಿಸಿದರು. ತೇಜಸ್ವಿ-ಶಿವಶ್ರೀ ದಂಪತಿ ಮಲೆನಾಡಿನ ಹಸಿರು ಪರ್ವತಗಳು ಮತ್ತು ಮನಮೋಹಕ ವಾತಾವರಣವನ್ನು ಆನಂದಿಸಿದರು. ತೇಜಸ್ವಿ ದಂಪತಿ ಶನಿವಾರ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯ ದರ್ಶನದ ನಂತರ, ಅವರು ಕಳಸ ತಾಲೂಕಿನ ಪ್ರಮುಖ ಪ್ರವಾಸಿ ತಾಣಗಳಿಗೆ ಬಸ್ ಮೂಲಕ ಭೇಟಿ ನೀಡಿದರು. ತೇಜಸ್ವಿ ದಂಪತಿ ತಮ್ಮ ಪ್ರವಾಸದ ಸಮಯದಲ್ಲಿ ಜನ ಸಾಮಾನ್ಯರೊಂದಿಗೆ ಸಂವಾದ ನಡೆಸಿದ್ದು, ಅಪರೂಪಕ್ಕೆ ರಾಜಕೀಯ ನಾಯಕರಿಂದ ಬಸ್ಸಿನಲ್ಲಿ ಪ್ರಯಾಣ ನಡೆಸುವ ಅನುಭವ ಸ್ಥಳೀಯರಲ್ಲಿಯೂ ಕುತೂಹಲ ಮೂಡಿಸಿದೆ. ಮಲೆನಾಡಿನ ಶೀತಳ ವಾತಾವರಣದಲ್ಲಿ ಈ ಪ್ರವಾಸ ದಂಪತಿಗೆ ಹೊಸ ಅನುಭವ ನೀಡಿದಂತಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು