ಇತ್ತೀಚಿನ ಸುದ್ದಿ
ಹೇಳಿಕೆ ವಿವಾದ: ಬಂಧಿತ ಕೇಂದ್ರ ಸಚಿವ ನಾರಾಯಣ ರಾಣೆಗೆ ಜಾಮೀನು ಮಂಜೂರು
25/08/2021, 15:03
ಮುಂಬೈ(reporterkarnataka.com):
ಕೇಂದ್ರ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ನಾರಾಯಣ್ ರಾಣೆ ಅವರಿಗೆ ಮಂಗಳವಾರ ರಾತ್ರಿ ಮಹಾಡ್ ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಕಪಾಳಕ್ಕೆ ಬಾರಿಸುವೆ ಎಂಬ ಹೇಳಿಕೆ ನೀಡಿರುವುದಕ್ಕೆ ಮಹಾರಾಷ್ಟ್ರದ ವಿವಿಧೆಡೆ ಶಿವಸೇನೆ ನಾಯಕರಿಂದ ದೂರು ದಾಖಲಾದ ಕಾರಣ ಮಂಗಳವಾರ ಮಧ್ಯಾಹ್ನ ಪೊಲೀಸರು ರಾಣೆ ಅವರನ್ನು ರತ್ನಗಿರಿಯಲ್ಲಿ ಬಂಧಿಸಿದ್ದರು.
ನಾರಾಯಣ ರಾಣೆ ಅವರು ಈ ಹಿಂದೆ ಶಿವಸೇನೆ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು. ನಂತರ ಅವರು ಕಾಂಗ್ರೆಸ್ ಸೇರಿದ್ದರು. ಬಳಿಕ ಬಿಜೆಪಿ ಸೇರ್ಪಡೆಗೊಂಡಿದ್ದರು. ಜುಲೈನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಪುಟದಲ್ಲಿ ಸೇರ್ಪಡೆಯಾಗಿ ಸಚಿವರಾದರು.