8:55 AM Sunday17 - August 2025
ಬ್ರೇಕಿಂಗ್ ನ್ಯೂಸ್
Bangalore | ಬಿಜೆಪಿಯವರಿಗೆ ರಾಜಕಾರಣಕ್ಕಾಗಿ ಧರ್ಮಸ್ಥಳ ಬೇಕಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ ವಿರಾಜಪೇಟೆ: ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿ; ನಾಡಿನಲ್ಲಿ ಬೀಡು ಬಿಟ್ಟಿದ್ದ 10ಕ್ಕೂ ಅಧಿಕ… ‘ಧರ್ಮಸ್ಥಳ ವಿರುದ್ಧ ಷಡ್ಯಂತರʼ ರಾಜ್ಯ ಸರ್ಕಾರದ್ದೇ?: ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಕೇಂದ್ರ ಸಚಿವ… ಸಾಲದ ಬಾಧೆ: ಆಟೋ ಚಾಲಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ; ಅರಣ್ಯ… ಬಸವಣ್ಣನವರ ಕಲ್ಯಾಣ ರಾಜ್ಯದ ಕನಸಿನ ಈಡೇರಿಕೆಯೇ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ ಕೇಂದ್ರದಿಂದ ಸ್ವಾತಂತ್ರ್ಯೋತ್ಸವದ ವಿಶಿಷ್ಠ ಕೊಡುಗೆ; ಉತ್ತರ ಕರ್ನಾಟಕಕ್ಕೆ ವಿಶೇಷ ಆರ್ಥಿಕ ವಲಯ ಘೋಷಣೆ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ; ಎಸ್ಐಟಿ ತನಿಖೆ ನಡೆಯುತ್ತಿರುವಾಗ ಸದನದಲ್ಲಿ ಪ್ರಸ್ತಾಪ ಸರಿಯಲ್ಲ:… ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್: ನಟ ದರ್ಶನ್​​, ಪವಿತ್ರಾ ಗೌಡ ಸಹಿತ 4… ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆ ರಾಜ್ಯದ ಸಮಸ್ಯೆಗೆ ಕಾರಣ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ Kodagu | ಮಡಿಕೇರಿ: ಅಸ್ಸಾಂ ಕಾರ್ಮಿಕರಿಂದ ಆಧಾರ್ ಕಾರ್ಡಿನ ದುರ್ಬಳಕೆ ಆರೋಪ

ಇತ್ತೀಚಿನ ಸುದ್ದಿ

ಮಂಗಳೂರು ಬಿಷಪ್ ಅ। ವಂ। ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರಿಂದ ಈಸ್ಟರ್ ಹಬ್ಬದ ಶುಭ ಸಂದೇಶ

19/04/2025, 19:17

ಈಸ್ಟರ್ ಹಬ್ಬದ ಈ ಪವಿತ್ರ ಸಂದರ್ಭದಲ್ಲಿ, ಯೇಸು ಕ್ರಿಸ್ತರು ಮರಣವನ್ನು ಜಯಿಸಿ ಪುನರುತ್ಥಾನರಾದ ಸಂತೋಷವನ್ನು ನಾವು ಆಚರಿಸುತ್ತೇವೆ. ಶಿಲುಬೆಯ ಮೇಲೆ ಅವರ ತ್ಯಾಗ ಮತ್ತು ಪುನರುತ್ಥಾನವು ನಮಗೆ ಆಶಾಕಿರಣವನ್ನು, ಕ್ಷಮೆಯನ್ನು ಮತ್ತು ದೇವರ ಶಾಶ್ವತ ಪ್ರೀತಿಯನ್ನು ತೋರಿಸುತ್ತದೆ. ಕ್ರಿಸ್ತರು ಮ್ರತ್ಯುಂಜಯರಾದ ಆಚರಣೆಯ ಈ ಪವಿತ್ರ ಈಸ್ಟರ್ ಹಬ್ಬದ ನಿಮಿತ್ತ ನಿಮ್ಮೆಲ್ಲರಿಗೂ ಹಾರ್ದಿಕ ಶುಭಾಶಯಗಳು.
ಈಸ್ಟರ್ ಎಂದರೆ ವಿಜಯದ ಹಬ್ಬ – ಕೇಡಿನ ಮೇಲೆ ಸದ್ಗುಣಗಳ ಜಯ, ಅಸತ್ಯದ ಮೇಲೆ ಸತ್ಯದ ಜಯ, ಅಂಧಕಾರದ ಮೇಲೆ ಬೆಳಕಿನ ಜಯ, ಮರಣದ ಮೇಲೆ ಜೀವದ ಜಯ. ಯೇಸು ಕ್ರಿಸ್ತರು ತಮ್ಮ ಮರಣ ಮತ್ತು ಪುನರುತ್ಥಾನದ ಮೂಲಕ ನಮಗೆ ನವಜೀವನದ ದಾರಿ ತೋರಿಸಿದ್ದಾರೆ. ಅವರ ವಿಜಯದಲ್ಲಿ ನಾವು ಪಾಲುಗಾರರಾಗುವ ಮೂಲಕ, ನಮ್ಮ ಜೀವನದಲ್ಲಿ ಸತ್ಯ ಹಾಗು ಬೆಳಕಿನಲ್ಲಿ ನಡೆದು ಹೊಸ ಜೀವ ಪಡೆಯಬಹುದು.

ಈ ಈಸ್ಟರ್ ಸಮಯದಲ್ಲಿ ನಾವು ಸಹಾನುಭೂತಿ, ಕ್ಷಮೆ ಮತ್ತು ಪ್ರೀತಿಯ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಭರವಸೆ ಉಂಟುಮಾಡುವ ಸಂಕಲ್ಪವನ್ನು ಮಾಡೋಣ. ಕ್ರಿಸ್ತರು ತೋರಿಸಿದ ಮಾರ್ಗ ನಮ್ಮನ್ನು ನಡೆಸಲಿ. ನಾವು ಎಲ್ಲರಿಗೂ ದೇವರ ಪ್ರೀತಿಯ ಪ್ರತಿಬಿಂಬಗಳಾಗಿರೋಣ. ಒಗ್ಗಟ್ಟಿನಿಂದ, ದೇವರ ಕೃಪೆಯಲ್ಲಿ ನಾವು ಬೆಳೆಯುವ ಹಾಗು ನಮ್ಮ ಸುತ್ತಲಿನವರಿಗೆ ಶಾಂತಿ ಮತ್ತು ಸದ್ಭಾವನೆಯ ಸಂದೇಶವನ್ನು ಹಂಚಿಕೊಳ್ಳುವ.

ಇಂದು ಮತ್ತು ಸದಾ, ಕ್ರಿಸ್ತರ ಪುನರುತ್ಥಾನದ ಸಂತೋಷ ನಿಮ್ಮ ಕುಟುಂಬಗಳಿಗೆ ಆಶೀರ್ವಾದ ತರಲಿ ಎಂದು ಪ್ರಾರ್ಥಿಸುತ್ತೇನೆ.

ಅ। ವಂ। ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ, ಧರ್ಮಾಧ್ಯಕ್ಷರು, ಮಂಗಳೂರು

ಇತ್ತೀಚಿನ ಸುದ್ದಿ

ಜಾಹೀರಾತು