8:04 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಹ್ಯಾಪಿ ಬರ್ತ್‌ಡೇ ಕಿಚ್ಚ: ಬಿಗ್ ಬಾಸ್ ಒಟಿಟಿ ಕನ್ನಡದಲ್ಲಿ ನಟನ ಬಿಂದಾಸ್  ಲುಕ್…

02/09/2022, 21:10

ಬೆಂಗಳೂರು(reporterkarnataka.com):ಜನಪ್ರಿಯ ನಟ ಸುದೀಪ್, ಚೊಚ್ಚಲ ಆವೃತ್ತಿಯ ಬಿಗ್‌ಬಾಸ್ ಒಟಿಟಿ ಕನ್ನಡದಲ್ಲಿ ಇಂದು 49ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸೂಪರ್ ಸ್ಟಾರ್ ಸುದೀಪ್ ವಿಕ್ರಾಂತ್ ರೋಣ, ದ ವಿಲನ್, ಪೈಲ್ವಾನ್, ಈ ಶತಮಾನದ ವೀರಮದಕರಿ, ಮಾಣಿಕ್ಯ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 

ವಿಭಿನ್ನವಾಗಿ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡುತ್ತಿದ್ದಾರೆ. ಮೊದಲ ಆವೃತ್ತಿಯ ಒಟಿಟಿ ಕನ್ನಡ ಬಿಗ್‌ಬಾಸ್‌ದ ಕಾರ್ಯಕ್ರಮವನ್ನು ಅದ್ಭುತವಾಗಿ ನಿರೂಪಿಸಿಕೊಂಡು ಬರುತ್ತಿದ್ದಾರೆ. ಕಪ್ಪುಬಣ್ಣದ ಡ್ರೆಸ್ ತೊಟ್ಟಿದ್ದ ಕಿಚ್ಚ, ಸೆಮಿ-ಫಾರ್ಮಲ್ ಜಾಕೆಟ್, ಶರ್ಟ್ ತೊಟ್ಟಿದ್ದರು. ಬೂಟ್ ಕಪ್ ಪ್ಯಾಂಟ್ ಧರಿಸಿದ್ದರು. ಕ್ಲೀನ್ ಶೇವ್ ಮಾಡಿರುವ ಕಿಚ್ಚ, ಸಣ್ಣಪ್ರಮಾಣದಲ್ಲಿ ಮೀಸೆ ಬಿಟ್ಟಿದ್ದಾರೆ. ಈ ಸನ್ನಿವೇಶವನ್ನು ಬಿಗ್‌ಬಾಸ್ ಒಟಿಟಿ ಸೂಪರ್ ಸಂಡೇ ಸಂಡೇಯಲ್ಲಿ ವೀಕ್ಷಿಸಬಹುದು. 

ಕಿಚ್ಚ ಸುದೀಪ್ ಅವರು ಹೀರೋ ಲುಕ್‌ನಲ್ಲಿ ಕಾಣಿಸಿಕೊಂಡು ಗಮನಸೆಳೆದರು. ಸ್ಪೈಕ್ಡ ಹೇರ್, ಸಂಪೂರ್ಣ ಕಪ್ಪು ಫಿಟ್‌ನಲ್ಲಿ, ಕಪ್ಪು ಬಣ್ಣದ ಕವಚದ ಸ್ವೆಟ್‌ಶರ್ಟ್‌ನ ಮೇಲೆ ಸ್ಯೂಡ್ ಬೈಕರ್ ಜಾಕೆಟ್ ಅನ್ನು ಧರಿಸಿ, ಚೆನ್ನಾಗಿ ಫಿಟ್ ಆಗಿರುವ ಮತ್ತು ಕಪ್ಪು ಡೆನಿಮ್‌ಗಳೊಂದಿಗೆ ‘ಹೀರೋ’ ಲುಕ್‌ನಲ್ಲಿ ಕಾಣಿಸಿಕೊಂಡರು. ಮತ್ತೊಂದು ಸೂಪರ್  ಸಂಡೇ ಸಂಚಿಕೆಗಾಗಿ ದಪ್ಪನಾದ ಬೂಟುಗಳು ಅವರ ನೋಟಕ್ಕೆ ಮೆರಗು ನೀಡಿದವು. 

ಬಿಗ್ ಬಾಸ್ ಒಟಿಟಿ ಕನ್ನಡದ ಶೋ ಅನ್ನುಕಿಚ್ಚ ಸುದೀಪ್ ಅದ್ಭುತವಾಗಿ ನಿರೂಪಣೆ ಮಾಡುತ್ತಿದ್ದಾರೆ. ಸಂಪೂರ್ಣ ಕಪ್ಪು, ಕ್ಯಾಶುಯಲ್ ಉಡುಪಿನಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಕೂಲ್ ವೈಟ್ ಸ್ನೀಕರ್ಸ್‌, ಸೈಡ್ ಝಿಪ್ಪರ್ ಬೈಕರ್ ಸ್ಟೈಲ್ ಜಾಕೆಟ್ ಮತ್ತು ಆ ಸೂಪರ್-ಹಾಟ್, ಟ್ರೆಂಡಿ ಲುಕ್ ಗಮನಸೆಳೆಯಿತು. 


ಬಿಗ್ ಬಾಸ್ ಒಟಿಟಿ ಕನ್ನಡದ ಪ್ರೋಮೋದಲ್ಲಿ, ಕಿಚ್ಚ ಸುದೀಪ್ ಬೂದು ಬಣ್ಣದ ಕಾಲರ್ ಕಪ್ಪು ಟುಕ್ಸೆಡೊದಲ್ಲಿ ಕಾಣುತ್ತಿದ್ದರು. ಆ ಬಿಳಿ-ರಿಮ್ಡ್ ಕ್ಲಿಯರ್ ಟಿಂಟೆಡ್ ಶೇಡ್‌ಗಳೊಂದಿಗೆ ಡೀಪ್ ಕಟ್ ಟ್ರಿಪಲ್ ಬ್ರೆಸ್ಟ್ ವೇಸ್ಟ್ ಕೋಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಒಟಿಟಿ ಕನ್ನಡದ ಉದ್ಘಾಟನಾ ಸೀಸನ್‌ನ ಮೊದಲ ನೋಟಕ್ಕಾಗಿ ಸಂಪೂರ್ಣ ಬಾಸ್ ನೋಟ.

ಇತ್ತೀಚಿನ ಸುದ್ದಿ

ಜಾಹೀರಾತು