8:35 PM Sunday24 - August 2025
ಬ್ರೇಕಿಂಗ್ ನ್ಯೂಸ್
Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ ಡಿಸ್ಕಸ್ ಥ್ರೋ ವೇಳೆ ಅವಘಡ: ವಿದ್ಯಾರ್ಥಿ ಗಂಭೀರ: ಮಂಗಳೂರು ಆಸ್ಪತ್ರೆಗೆ ದಾಖಲು ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಟ್ಟು ಗುಳ್ಳ ನಂಟು ಉಡುಪಿ ಮಠಕ್ಕೂ ಉಂಟು: ವಾದಿರಾಜ ತೀರ್ಥರು ಬದನೆಗೆ ಹೆಸರಿಟ್ಟರಂತೆ!

ಇತ್ತೀಚಿನ ಸುದ್ದಿ

ಹನಿಟ್ರ್ಯಾಪ್ : ಪುರೋಹಿತ ಜ್ಯೋತಿಷಿಯನ್ನೇ ಖೆಡ್ಡಾಕ್ಕೆ ಕೆಡಹಿದ ಯುವ ಜೋಡಿ; ಬರೋಬ್ಬರಿ 49 ಲಕ್ಷ ರೂ. ಲೂಟಿ

21/01/2022, 20:05

ಮಂಗಳೂರು(reporterkarnataka.com): ಸಾರ್ವಜನಿಕರಿಗೆ ಪರಿಹಾರ ಹೇಳುವ ಜ್ಯೋತಿಷಿಯೊಬ್ಬ ಹನಿಟ್ರ್ಯಾಪ್ ಗೆ ಒಳಗಾಗಿ ಬರೋಬ್ಬರಿ 49 ಲಕ್ಷ ರೂ. ಕಳೆದುಕೊಂಡು, ಇನ್ನೇನು ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನುವಷ್ಟರಲ್ಲಿ ಪೊಲೀಸರ ಮೊರೆ ಹೋದ ಘಟನೆ ಕಡಲನಗರಿ ಮಂಗಳೂರಿನಲ್ಲಿ ನಡೆದಿದೆ.

ಟಾರ್ಗೆಟ್ ಗ್ಯಾಂಗ್ ಹನಿಟ್ರ್ಯಾಪ್ ನಡೆಸಿದ ನೈಜ ಕಥೆಯನ್ನು ನೀವು ಕೇಳಿದ್ದೀರಿ. ವೈದ್ಯಕೀಯ ವಿದ್ಯಾರ್ಥಿಗಳನ್ನೂ ಅವರು ತಮ್ಮ ಜಾಲಕ್ಕೆ ಬೀಳಿಸಿದ ಕಥೆಯೂ ನಿಮಗೆ ಗೊತ್ತಿದೆ. ಆದರೆ ಇಲ್ಲಿ ನಡೆದದ್ದು ಟಾರ್ಗೆಟ್ ಗ್ಯಾಂಗ್ ನ ಕೈಚಳಕವಲ್ಲ. ಬದಲಿಗೆ ಯುವ ಜೋಡಿಯ ಹಣದ ದಾಹ. ಹಾಗೆ ಇಲ್ಲಿ ಸಿಕ್ಕಿಹಾಕಿಕೊಂಡದ್ದು ಸಾಮಾನ್ಯ ವ್ಯಕ್ತಿಯಲ್ಲ. ದೇವರೊಂದಿಗೆ ನಿಕಟ ಸಂಬಂಧ ಹೊಂದಿದವರು ಎಂದು ಹೇಳುವ ಪುರೋಹಿತ ವರ್ಗದ ವ್ಯಕ್ತಿ. ಅಷ್ಟೇ ಮಾತ್ರವಲ್ಲ ಜ್ಯೋತಿಷಿ ಬೇರೆ. ಬೇರೆಯವರ ಜೀವನದಲ್ಲಿ ಏನೆಲ್ಲ ಘಟನೆ ನಡೆಯುತ್ತದೆ ಎಂದು ಮುಂಗಡವಾಗಿ ಹೇಳುವ ಜ್ಯೋಷಿತಿಗೆ ಮಾತ್ರ ತನ್ನ ಜಾತಕ ಓದಲು ಸಾಧ್ಯವಾಗಲಿಲ್ಲ.

ಚಿಕ್ಕಮಗಳೂರಿನ ಈ ಪ್ರಖ್ಯಾತ ಪುರೋಹಿತ ಜ್ಯೋತಿಷಿ ಜೋಡಿಯೊಂದು ಹಣೆದ ಬಲೆಗೆ ಬಿದ್ದು ವಿಲವಿಲನೆ ಒದ್ದಾಡಿ ಕೊನೆಗೆ ಪೊಲೀಸರಿಗೆ ಮೊರೆ ಹೋಗಿದ್ದಾನೆ.

ಮಂಗಳೂರಿನ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪುರೋಹಿತರು ದೂರು ನೀಡಿದ್ದು, ತನಿಖೆಯನ್ನು ಕೈಗೆತ್ತಿಕೊಂಡ ಮಂಗಳೂರು ಸಿಸಿಬಿ ಪೊಲೀಸರು ಜೋಡಿಯನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಈ ಕುರಿತು ಸುದ್ದಿಗೋಷ್ಠಿ ನಡೆಸಿ, ಪ್ರಕರಣದ ವಿವರ ನೀಡಿದ್ದಾರೆ.

ಸಂತ್ರಸ್ತ ಪುರೋಹಿತ ಚಿಕ್ಕಮಗಳೂರಿನಲ್ಲಿ ಪೌರೋಹಿತ್ಯದ ಜೊತೆಗೆ ಜ್ಯೋತಿಷ್ಯ ಕೂಡ ಹೇಳುತ್ತಿದ್ದನು. ಆರೋಪಿಗಳಾದ ಭವ್ಯ ಮತ್ತು ಕುಮಾರ್ ಇದೀಗ ಬಂಧನಕ್ಕೊಳಗಾಗಿದ್ದಾರೆ.

ಆರೋಪಿಗಳಾದ ಭವ್ಯ (30) ಕೊಡಗು ಜಿಲ್ಲೆಯ ಸೋಮವಾರಪೇಟೆಯ ಶನಿವಾರ ಸಂತೆ ನಿವಾಸಿ. ಕುಮಾರ್ ಹಾಸನ ಜಿಲ್ಲೆಯ ಅರಕಲಗೂಡಿನವ.

ಭವ್ಯಳಿಗೆ ಈ ಹಿಂದೆಯೇ ಮದುವೆಯಾಗಿದ್ದು, ಗಂಡನನ್ನು ಬಿಟ್ಟು ಕಳೆದ ಎರಡು ವರ್ಷಗಳಿಂದ ಕುಮಾರ್ ಜೊತೆ ವಾಸವಾಗಿದ್ದಾಳೆ.

ಆರೋಪಿ ಕುಮಾರ್ ಮತ್ತು ಸಂತ್ರಸ್ತ ಪುರೋಹಿತನಿಗೆ ಕಳೆದ ಕೆಲ ವರ್ಷಗಳಿಂದ ಪರಿಚಯವಾಗಿತ್ತು. ಈ ನಡುವೆ ಆರೋಪಿ ಕುಮಾರ್ ಭವ್ಯಳ ಜೊತೆ ಚಿಕ್ಕಮಗಳೂರಿನ ಪುರೋಹಿತನ ಬಳಿ ಹೋಗಿ, ಈಕೆ ನನ್ನ ಹೆಂಡತಿ, ಕೌಟುಂಬಿಕ ಸಮಸ್ಯೆ ಇದೆ. ಮನಸ್ತಾಪವೂ ಇದೆ, ಜ್ಯೋತಿಷ್ಯದ ಮೂಲಕ ಪರಿಹಾರ ಕಂಡುಹುಡುಕಿ ಎಂಬುವುದಾಗಿ ಪುರೋಹಿತನಿಗೆ ಭವ್ಯಳನ್ನು ಪರಿಚಯ ಮಾಡಿಕೊಟ್ಟಿದ್ದಾನೆ.

ಆ‌ ಬಳಿಕ ಭವ್ಯ, ಪುರೋಹಿತನನ್ನು ಹಂತ ಹಂತವಾಗಿ ಖೆಡ್ಡಾಗಿ ಬೀಳಿಸಿ ಸಲುಗೆಯಿಂದ ಇದ್ದ ಫೋಟೋ, ವಿಡಿಯೋವನ್ನು ಪಡೆದುಕೊಂಡಿದ್ದಾಳೆ. ಕಳೆದ ಆಗಸ್ಟ್‌ನಿಂದ ಪುರೋಹಿತನನ್ನು ಕುಮಾರ್ ಮತ್ತು‌ ಭವ್ಯ ಜೋಡಿ ಹನಿಟ್ರ್ಯಾಪ್ ಮಾಡಿದೆ. ಹಂತ ಹಂತವಾಗಿ ಹಣ ಪೀಕಿಸಿದ್ದಾರೆ.

ಸುಮಾರು 15 ಲಕ್ಷ ರೂಪಾಯಿಯನ್ನು ನಗದು ರೂಪದಲ್ಲಿ ಪಡೆದುಕೊಂಡರೆ, ಇನ್ನುಳಿದ 34 ಲಕ್ಷ ರೂಪಾಯಿ ಹಣವನ್ನು ಬೇರೆ-ಬೇರೆ ಬ್ಯಾಂಕ್ ಅಕೌಂಟ್‌ಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಹಣ ಕೊಡಲು ತಡ ಮಾಡಿದ ಸಂದರ್ಭದಲ್ಲಿ ಫೋಟೋ, ವಿಡಿಯೋ, ವಾಯ್ಸ್ ಮೆಸೇಜ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಿ ಮಾನಹರಾಜು ಮಾಡೋದಾಗಿ ಬೆದರಿಕೆ ಹಾಕಿದ್ದಾರೆ.

ನಂತರ ಪತ್ರಕರ್ತರ ಹೆಸರಿನಲ್ಲಿ, ಮಹಿಳಾ ಸಂಘಟನೆಗಳ ಮುಖಂಡರ ಹೆಸರಿನಲ್ಲಿ, ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಸಂತ್ರಸ್ತ ಪುರೋಹಿತನಿಗೆ ಕರೆ ಮಾಡಿ ಹಣಕ್ಕಾಗಿ ಬೆದರಿಕೆ ಹಾಕಲಾಗಿದೆ. ಕೊನೆಗೆ ಪುರೋಹಿತ ಆತ್ಮಹತ್ಯೆ ಮಾಡಲು ನಿರ್ಧಾರ ಮಾಡಿದ್ದು, ಇದಕ್ಕೂ ಮುನ್ನ ಪೊಲೀಸರ ಮೊರೆ ಹೋಗಲು ನಿರ್ಧರಿಸಿ ಪೊಲೀಸ್ ದೂರು ನೀಡಿದ್ದಾನೆ.

ಸಂತ್ರಸ್ತ ಪುರೋಹಿತ ಸ್ನೇಹಿತರಿಂದ, ಸಂಬಂಧಿಕರಿಂದ ಹಣ ಸಾಲ ಪಡೆದು ಆರೋಪಿಗಳಿಗೆ ನೀಡಿರೋದಾಗಿ ತಿಳಿದು ಬಂದಿದೆ. ಈ ಹಣದಲ್ಲಿ ಆರೋಪಿಗಳು ಮಂಗಳೂರಿನಲ್ಲಿ 10 ಲಕ್ಷ ರೂಪಾಯಿಯನ್ನು ನೀಡಿ ಲೀಸ್‌ಗೆ ಫ್ಲ್ಯಾಟ್ ಅನ್ನು ಖರೀದಿಸಿದ್ದಾರೆ. ಸುಮಾರು 7 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆಗೆ ಬೇಕಾದ ಪೀಠೋಪಕರಣವನ್ನು ಖರೀದಿಸಿದ್ದಾರೆ. ಇತ್ತೀ

ಚೆಗೆ ಹೊಸ ದ್ವಿಚಕ್ರ ವಾಹನವನ್ನು ಈ ಜೋಡಿ ಖರೀದಿಸಿರೋದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. 

ಆರೋಪಿಗಳನ್ನು 5 ದಿನ ಪೊಲೀಸ್ ಕಸ್ಟಡಿಗೆ ಕೊಡಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು