ಇತ್ತೀಚಿನ ಸುದ್ದಿ
ಹಲ್ಯಾಳ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮ; ಸ್ನೇಹಿತರ ಸಮ್ಮಿಲನ
13/02/2024, 13:55
ಶಿವರಾಯ ಲಕ್ಷ್ಮಣ ಕರ್ಕರಮುಂಡಿ
info.reporterkarnataka@gmail.com
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಪ್ರಥಮ ಬಾರಿಗೆ ಸುಮಾರು 30 ವರ್ಷಗಳ ನಂತರ 2011-2012ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮ ಹಾಗೂ ಸ್ನೇಹಿತರ ಸಮ್ಮಿಲನ ಸಮಾರಂಭ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಎಲ್ಲ ಈ ಸ್ಕೂಲಿನ ಗುರುಗಳು ಮುಖ್ಯೋಪಾಧ್ಯಾಯರಾದ ಮಂಜುನಾಥ್ ಹತ್ತಿ, ಎಸ್‌ಡಿಎಂಸಿ ಅಧ್ಯಕ್ಷ ದೀಪಕ್ ಮುರಗುಂಡಿ, ಉಗಾರ್ ಹಾಗೂ 2011-12ನೇ ಸಾಲಿನ ವಿದ್ಯಾರ್ಥಿಗಳಿಗೆ ಕಲಿಸಿದ ಗುರುಗಳಾದಂತ ಐ ಯಾಮ್ ಅತ್ತಾರ್, ಮಲ್ಲಪ್ಪ ಎಸ್, ಸುಲಾರೇ, ಸುರೇಶ ಜೀ ಸಾಂಗುಲಿ, ದಯಾನಂದ್ ಎಂ. ಕಾಂಬಳೆ, ಬಬಿತಾ ಡಿ. ಜಮಾದಾರ್, ಶಾಂತಾಬಾಯಿ ಎಂ ವಾಲಿಕಾರ್, ಅನಿತಾ ಬಾಬುಗೊಂಡ, ಅನಂತ ಪಡನಾಡ್, ಅಪ್ಪಣ್ಣ ಕಾಂಬಳೆ ಸೇರಿ ಎಲ್ಲ ಶಿಕ್ಷಕರಿಗೆ 2012ನೇ ಸಾಲಿನ ವಿದ್ಯಾರ್ಥಿಗಳಿಂದ ಸತ್ಕಾರ ಸಮಾರಂಭ ನಡೆಯಿತು.