1:27 PM Sunday30 - November 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ… ಶಾಲೆಯಂಗಳದಲ್ಲಿ ತಾರಾಲಯ: ಗ್ರಾಮೀಣ ಮಕ್ಕಳಲ್ಲಿ ಖಗೋಳ ವಿಜ್ಞಾನ ಕೌತುಕ ಬಿತ್ತುವ ಗುರಿ; ಮುಖ್ಯಮಂತ್ರಿ…

ಇತ್ತೀಚಿನ ಸುದ್ದಿ

ಹಾವೇರಿ: ಎತ್ತಿನ ಗಾಡಿಗೆ ಲಾರಿ ಡಿಕ್ಕಿ; ಓರ್ವ ಸ್ಥಳದಲ್ಲೇ ಸಾವು: 2 ಎತ್ತುಗಳು ಬಲಿ, ಇಬ್ಬರಿಗೆ ಗಾಯ

10/01/2022, 13:47

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಎತ್ತಿನ ಗಾಡಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎತ್ತಿನ ಗಾಡಿ ಪೂರ್ಣ ಜಖಂಗೊಂಡ ಪರಿಣಾಮ ಸ್ಥಳದಲ್ಲಿ ಓರ್ವ ಮೃತಪಟ್ಟಿದ್ದು, 2 ಎತ್ತುಗಳು ಕೂಡ ಅಸುನೀಗಿವೆ. ದುರಂತದಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಹಾವೇರಿ ನಗರದಲ್ಲಿ ಭಾನುವಾರ ರಾತ್ರಿ 11 ಗಂಟೆ ಈ ದುರ್ಘಟನೆ ನಡೆದಿದೆ. ಮೂಲತಃ ವಿಜಯ ನಗರ ಜಿಲ್ಲೆ ಕೊಟ್ಟೂರು ತಾಲೂಕಿನ ದೂಪದಹಳ್ಳಿ ತಾಂಡದ ಮೂರ್ತಿ ನಾಯ್ಕ ಸ್ಥಳದಲ್ಲಿಯೇ ಮೂರ್ತಿ ನಾಯ್ಕ್ (38)ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇವರು ಹಾವೇರಿ ಜಿಲ್ಲೆ ಸಾಂಗೂರ್ ಶುಗರ್ ಫ್ಯಾಕ್ಟರಿಗೆ ಕಟಾವು ಮಾಡಿದ್ದ ಕಬ್ಬನ್ನು, ಎತ್ತಿನಗಾಡಿಯಲ್ಲಿ ತೆಗೆದು ಕೊಂಡುಹೋಗಿದ್ದಾರೆ. ರಾತ್ರಿ 11ಗಂಟೆಗೆ ಹೊತ್ತಲ್ಲಿ ಲಾರಿ ಬಂಡಿ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ. ಪರಿಣಾಮ ಎತ್ತಿನ ಗಾಡಿ ಸಂಪೂರ್ಣ ಜಖಂಗೊಂಡಿದ್ದು  ಸ್ಥಳದಲ್ಲೇ ಮೂರ್ತಿ ನಾಯ್ಕ್ ಮೃತಪಟ್ಟಿದ್ದಾರೆ. 2 ಎತ್ತುಗಳು ಕೂಡ ಮೃತ ಸ್ಥಳದಲ್ಲಿಯೇ ಸಾವನ್ನಪ್ಪಿವೆ.ಎತ್ತಿನ ಗಾಡಿಯಲ್ಲಿದ್ದ ಮೃತನ ಚಿಕ್ಕಪ್ಪ ಅರ್ಜುನ ನಾಯ್ಕ್ (55)ರವರಿಗೆ ಕಾಲು ಮುರಿದಿದೆ, ಅವರ ಚಿಕ್ಕಪ್ಪ ನ ಮಗ ಸೀನಾನಾಯ್ಕ(18)ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ಜರುಗಿದ ತಕ್ಷಣ ಅಪಘಾತ ಪಡಿಸಿದ ಲಾರಿ ಡ್ರೈವರ್ ಲಾರಿ ಸ್ಥಳದಲ್ಲಿಯೇ ಬಿಟ್ಟು ಪರಾರಿ ಯಾಗಿದ್ದಾನೆಂದು ಹೇಳಲಾಗಿದೆ, ಗಾಯಗೊಂಡವರನ್ನು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ  ದಾಖಲಿಸಲಾಗಿದೆ ಎಂದು ಮೃತರ ಸಂಬಂಧಿಗಳು ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿ

ಜಾಹೀರಾತು