ಇತ್ತೀಚಿನ ಸುದ್ದಿ
ಹಾಡುತ್ತಾ ಕುಸಿದು ಬಿದ್ದು ಅಸುನೀಗಿದ ಖ್ಯಾತ ಗಾಯಕ ಕೆಕೆ !
01/06/2022, 06:58
ಕೊಲ್ಕತ್ತಾ(Reporterkarnataka.com):ಖ್ಯಾತ ಬಾಲಿವುಡ್ ಗಾಯಕ ಕೃಷ್ಣಕುಮಾರ್ ಕುನ್ನತ್(ಕೆಕೆ) ವೇದಿಕೆಯಲ್ಲೇ ಕುಸಿದು ಬಿದ್ದ ನಿಧನರಾಗಿದ್ದಾರೆ. ಕೋಲ್ಕತಾದಲ್ಲಿ ನಜ್ರುಲ್ ಮಂಜ್‌ನಲ್ಲಿ ಆಯೋಜಿಸಿದ್ದ ಕಾನ್ಸರ್ಟ್‌ನಲ್ಲಿ ಪಾಲ್ಗೊಂಡ ಕೆಕೆ ಹಾಡುತ್ತಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆ ದಾಖಲಿಸಿದರು ಪ್ರಯೋಜನವಾಗಿಲ್ಲ.
ಕೋಲ್ಕತಾದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮಕ್ಕಾಗಿ ಕೆಕೆ ತಂಡ ಮೇ.30ಕ್ಕೆ ನಗರದಲ್ಲಿ ಬೀಡುಬಿಟ್ಟಿತ್ತು. ಸಂಗೀತ ಕಾರ್ಯಕ್ರಮದ ಕುರಿತು ಕೆಕೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸಂತಸ ಹಂಚಿಕೊಂಡಿದ್ದರು. ಕೆಕೆ ಸಂಗೀತ ಕಾರ್ಯಕ್ರಮಕ್ಕೆ ಕಿಕ್ಕಿರಿದು ಜನ ತುಂಬಿದ್ದರು. ಆದರೆ ಹಾಡುತ್ತಲೇ ಕುಸಿದ ಬಿದ್ದ ಕೆಕೆ ಬದುಕಿ ಬರಲೇ ಇಲ್ಲ.
ವೇದಿಕೆಯಲ್ಲಿ ಕುಸಿದ ಕೆಕೆಗೆ ತಕ್ಷಣ ವೈದ್ಯಕೀಯ ನೆರವು ನೀಡಲಾಯಿತು. ಅಷ್ಟೇ ವೇಗದಲ್ಲಿ ನಗರದ CMRI ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲೇ ಕೆಕೆ ಪ್ರಾಣ ಪಕ್ಷಿ ಹಾರಿಹೋಗಿತ್ತು.