ಇತ್ತೀಚಿನ ಸುದ್ದಿ
ಗುರುಪುರ ಮಾಣಿಬೆಟ್ಟು ಕೋರ್ದಬ್ಬು ಪರಿವಾರ ದೈವಸ್ಥಾನದ ಮೂಲ ಸಾನಿಧ್ಯದಲ್ಲಿ ಉತ್ಖನನ:300 ವರ್ಷ ಪುರಾತನ ದೈವದ ವಿಗ್ರಹ ಪತ್ತೆ
17/06/2021, 16:11
ಮಂಗಳೂರು(reporterkarnataka news): ಗುರುಪುರ ಮಾಣಿಬೆಟ್ಟು ಕೋರ್ದಬ್ಬು ಪರಿವಾರ ದೈವಸ್ಥಾನದ ಮೂಲ ಸಾನಿಧ್ಯದಲ್ಲಿ ಉತ್ಖನನ ನಡೆಸುವಾಗ ಸುಮಾರು 300 ವರ್ಷಗಳಷ್ಟು ಹಳೆಯ ದೈವದ ವಿಗ್ರಹಗಳು ಹಾಗೂ ಇತರ ಪರಿಕರಗಳು ಪತ್ತೆಯಾಗಿವೆ.
ಪಂಜುರ್ಲಿ ದೈವದ ಮೂರ್ತಿ, ಖಡ್ಸಲೆ, ದೈವದ ಕಲ್ಲು, ಘಂಟೆಮಣಿ, ಸುತ್ತಿಗೆ, ತಂದೇಲ್ ದೀಪ ಮುಂತಾದ ಪರಿಕರಗಳು ಪತ್ತೆಯಾಗಿವೆ. ಇವೆಲ್ಲವೂ ಕಂಚು, ಹಿತ್ತಾಳೆ ಹಾಗೂ ಪಂಚಲೋಹದಿಂದ ಮಾಡಿದ್ದಾಗಿದೆ.
ತಾಂಬೂಲ ಪ್ರಶ್ನೆಯ ವೇಳೆ ದೈವದ ವಿಗ್ರಹ ಮತ್ತು ಇತರ ಪರಿಕರಗಳು ಇರುವ ಬಗ್ಗೆ ಸೂಚನೆ ದೊರಕಿತ್ತು. ಆ ಹಿನ್ನೆಲೆಯಲ್ಲಿ ಉತ್ಖನನ ಕೆಲಸ ಆರಂಭಿಸಲಾಗಿತ್ತು.