ಇತ್ತೀಚಿನ ಸುದ್ದಿ
ಗುಜರಾತಿನ ದ್ವಾರಕಾ ಬಳಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 5.3 ದಾಖಲು
25/03/2022, 20:04
ಅಹಮದಾಬಾದ್(reporterkarnataka.com): ಗುಜರಾತ್ ನ ದ್ವಾರಕಾ ಬಳಿ ಶುಕ್ರವಾರ ಮಧ್ಯಾಹ್ನ 12.37ರ ವೇಳಗೆ ಭೂಕಂಪ ಸಂಭವಿಸಿದೆ. ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.3 ಎಂದು ದಾಖಲಾಗಿದೆ.
ದ್ವಾರಕದಿಂದ ಪಶ್ಚಿಮಕ್ಕೆ 556 ಕಿಮೀ ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಕೇಂದ್ರೀಕೃತವಾಗಿತ್ತು. 10 ಕಿಮೀ ಆಳದಲ್ಲಿತ್ತು ಎಂದು ಭೂಕಂಪನ ಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.