ಇತ್ತೀಚಿನ ಸುದ್ದಿ
ಗೃಹ ಸಚಿವ ಡಾ. ಪರಮೇಶ್ವರ್ ನಾಳೆ ಮಂಗಳೂರಿಗೆ: ಪಶ್ವಿಮ ವಲಯ ಪೊಲೀಸ್ ಅಧಿಕಾರಿಗಳ ಜತೆ ಸಭೆ
05/06/2023, 20:08
ಮಂಗಳೂರು(reporterkarnataka.com): ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಜೂನ್ 6 ಹಾಗೂ 7ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದಾರೆ.
ಜೂ.6ರಂದು ಬೆಳಿಗ್ಗೆ 8.35ಕ್ಕೆ ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ, 8.45ಕ್ಕೆ ನಗರದ ಸಕ್ರ್ಯೂಟ್ ಹೌಸ್‍ಗೆ ತೆರಳುವರು. ಬೆಳಿಗ್ಗೆ 10 ಗಂಟೆಗೆ ಪೊಲೀಸ್ ಪಶ್ಚಿಮ ವಲಯ ಕಚೇರಿ ಭೇಟಿ ಮತ್ತು ವಲಯ ಪರಿಶೀಲನಾ ಸಭೆ ನಡೆಸುವರು. ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವರು. 12.30ಕ್ಕೆ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ಮತ್ತು ಪರಿಶೀಲನಾ ಸಭೆ ನಡೆಸುವರು. ನಂತರ ಮಧ್ಯಾಹ್ನ 1.30ಕ್ಕೆ ನಗರದ ಸಕ್ರ್ಯೂಟ್ ಹೌಸ್‍ಗೆ ತೆರಳುವರು ಅಲ್ಲಿಂದ ಮಧ್ಯಾಹ್ನ 2 ಗಂಟೆಗೆ ಉಡುಪಿಗೆ ಪ್ರಯಾಣಿಸುವರು.
ಜೂ.7ರಂದು ಸಂಜೆ 4.25ಕ್ಕೆ ಮಂಗಳೂರಿನಿಂದ ವಿಮಾನದ ಮೂಲಕ ಹೊರಟು 5.25ಕ್ಕೆ ಬೆಂಗಳೂರಿನ ಕೇಂದ್ರಸ್ಥಾನ ತಲುಪುವರು ಎಂದು ಸಚಿವರ ವಿಶೇಷಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.