1:30 AM Sunday12 - October 2025
ಬ್ರೇಕಿಂಗ್ ನ್ಯೂಸ್
ಹಾಸನಾಂಬ ದರ್ಶನಕ್ಕೆ ಜನರಿಗೆ ತಮ್ಮ ಗುರುತಿನ ಚೀಟಿ ನೀಡಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;…

ಇತ್ತೀಚಿನ ಸುದ್ದಿ

Good News: ವೋಲ್ವೋ ಬಸ್ ಪ್ರಯಾಣ ದರ, ಪಾಸ್ ದರ ಇಳಿಕೆ; ಬೆಂಗಳೂರಿನಲ್ಲಿ ಒಟ್ಟು 173 ಎಸಿ ಬಸ್ ಆರಂಭ

16/12/2021, 08:35

ಬೆಂಗಳೂರು(reporterkarnataka.com):

ಬೆಂಗಳೂರು ನಗರದಲ್ಲಿನ ಹವಾನಿಯಂತ್ರಿತ (ವಜ್ರ) ಬಸ್ ಸೇವೆಗಳ ಮಧ್ಯಮ ಮತ್ತು ದೂರದ ಪ್ರಯಾಣ ದರಗಳು ಮತ್ತು ಬಸ್ ಪಾಸ್ ದರಗಳನ್ನು ಬಿಎಂಟಿಸಿ ಕಡಿಮೆ ಮಾಡಿ ಆದೇಶವನ್ನು ಹೊರಡಿಸಿದೆ.

ವಜ್ರ ಸೇವೆಗಳ ಮೊದಲ ಮೂರು ಹಂತಗಳು, ಅಂದ್ರೆ 6 ಕಿ.ಮೀ ವರೆಗೆ ಒಂದೇ ಆಗಿರುತ್ತದೆ. ಹಂತ 4 (8 ಕಿಮೀ) ಮತ್ತು ಆಚೆಗೆ ಪ್ರಯಾಣಿಸುವ ಪ್ರಯಾಣಿಕರು ಪ್ರಯಾಣಿಸುವ ದೂರವನ್ನು ಅವಲಂಬಿಸಿ ರೂ 5 ರಿಂದ ರೂ 40 ರವರೆ ಬೆಲೆ ಇಳಿಕೆಯಾಗಲಿದೆ ತಿಳಿಸಿದೆ.

ವಜ್ರ ದಿನದ ಪಾಸ್‌ನ ಬೆಲೆಯನ್ನು 120 ರೂ.ನಿಂದ 100 ರೂ.ಗೆ ಇಳಿಸಲಾಗಿದ್ದು, ಮಾಸಿಕ ಪಾಸ್ ಬೆಲೆಯು 2000 ರೂ.ನಿಂದ 1500 ರೂ.ಗೆ ಕಡಿತಗೊಂಡಿದೆ. ಆದರೆ ಈ ರಿಯಾಯಿತಿಯು ವಿಮಾನ ನಿಲ್ದಾಣದ ಬಸ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.

ಇನ್ನೂ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸಾಮಾನ್ಯ ಮತ್ತು ವಾಯುವಜ್ರ ಸೇವೆಗಳ ಪ್ರಯಾಣದಲ್ಲಿ ಯಾವುದೇ ಬದಲಾವಣೆಗಳು ಇರೋದಿಲ್ಲ ಎಂದು ತಿಳಿಸಿದೆ. ಶುಕ್ರವಾರದಿಂದ 12 ಮಾರ್ಗಗಳಲ್ಲಿ 90 ಹೆಚ್ಚುವರಿ ಎಸಿ ಬಸ್ ಸೇವೆಗಳನ್ನು ಆರಂಭಿಸಲಾಗುವುದು ಅಂತ ತಿಳಿಸಿದ್ದು, ಇದರೊಂದಿಗೆ ನಗರದಲ್ಲಿ ಒಟ್ಟು 173 ಎಸಿ ಬಸ್‌ಗಳು ಸಂಚಾರ ಮಾಡಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು