3:28 AM Saturday19 - April 2025
ಬ್ರೇಕಿಂಗ್ ನ್ಯೂಸ್
Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್…

ಇತ್ತೀಚಿನ ಸುದ್ದಿ

ಗೋಣಮಾಕನಹಳ್ಳ: ಹೆಣ್ಣಿನ ವಿಷಯದಲ್ಲಿ ನಡೆದ ಕೊಲೆ ಪ್ರಕರಣ; 3 ಮಂದಿ ಆರೋಪಿಗಳ ಬಂಧನ

19/12/2021, 09:48

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಕೆಜಿಎಫ್ ಪೊಲೀಸ್‌ ಜಿಲ್ಲೆಯ ಆಂಡಸನ್‌ಪೇಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಡಿ .17ರಂದು ಮಧ್ಯಾಹ್ನ ಹೆಣ್ಣಿನ ವಿಷಯದಲ್ಲಿ ಆದ ಗಲಾಟೆಯ ಹಿನ್ನೆಲೆಯಲ್ಲಿ ಕೊಲೆ ನಡೆದಿತ್ತು.

ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳಲ್ಲಿ ಬಂಧಿಸುವಲ್ಲಿ ಸ್ಥಳೀಯ ವಿಶೇಷ ಅಪರಾಧ ಪತ್ತೆ ದಳದ ಪೊಲೀಸರು ಯಶಸ್ವಿಯಾಗಿದ್ದಾರೆಂದು ಜಿಲ್ಲಾ ರಕ್ಷಣಾಧಿಕಾರಿ ಡೆಕ್ಕಾ ಕಿಶೋರ್‌ ಬಾಬು ಅವರು ತಿಳಿಸಿದ್ದಾರೆ. 

ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆಂಡಸನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗೋಣಮಾಕನಹಳ್ಳಿಯ ನಿವಾಸಿ ಗಜೇಂದ್ರನಾಯ್ಡು ಅವರು ತನ್ನ ಮನೆಯ ಬಳಿ ಡಿ .17 ರಂದು ಮದ್ಯಾಹ್ನ 2.30 ರ ಸುಮಾರಿನಲ್ಲಿ ಬರುತ್ತಿರುವಾಗ , ಅದೇ ಗ್ರಾಮ ಗೋಣಮಾಕನಹಳ್ಳಿಯ ನಿವಾಸಿಗಳಾದ ರಾಘವೇಂದ್ರ ( 22  ) , ಹರೀಶ್ ( 23 )  ಹಾಗೂ ಜಿ.ಮಂಜುನಾಥ ( 21 )  ಅವರುಗಳು ಒಂದು ಹೆಣ್ಣಿನ ವಿಷಯದಲ್ಲಿ ಗಜೇಂದ್ರನಾಯ್ಡು ಸ್ವಾಮಿ ಅವರನ್ನು ಅಡ್ಡಗಟ್ಟಿ ದಾಳಿ ಮಾಡಿ ಗ್ರಾಮದ ಜಯರಾಮ್  ಅವರ ನೀಲಗಿರಿ ತೋಪಿಗೆ ಕರೆದುಕೊಂಡೋಗಿ ಚಾಕುಗಳಿಂದ ಕುತ್ತಿಗೆ ಕೋಯ್ದು , ಚೆನ್ನಾಗಿ ಹೊಡೆದು ಕೊಲೆ ಮಾಡಿ ಸಾಯಿಸಿದ್ದರು ಎಂದು ಆರೋಪಿಸಲಾಗಿದೆ.


ಜಿಲ್ಲಾ ರಕ್ಷಣಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಮಾರ್ಗದರ್ಶನದಲ್ಲಿ , ಡಿವೈಎಸ್ಪಿ ಪಿ.ಮುರಳೀಧರ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ಅಪರಾಧ ಪತ್ತೆ ತಂಡದ ರಾಬರ್ಟ್‌ಸನ್‌ಪೇಟೆ ಸಿಪಿಐ ಕೆ.ನಾಗರಾಜ್ , ಸಿಬ್ಬಂದಿಗಳಾದ ಮ್ಯಾಥ್ಯ ಅಲೆಕ್ಸಾಂಡರ್ , ನಾರಾಯಣಸ್ವಾಮಿ , ಟಿ.ಶಿವಯ್ಯ ಗಜೇಂದ್ರ , ಗೋಪಾಲಕೃಷ್ಣ , ಮಧುಸೂಧನ್ , ರಾಜೇಶ್‌ಬಾಬು , ಸುನಿಲ್ , ಮಹೇಂದ್ರ , ರಘು , ಮುರಳಿ , ಎಸ್.ಗಜೇಂದ್ರ , ಚಂದ್ರಕುಮಾರ್ , ಪ್ರಭಾಕರ್ , ಸತ್ಯಪ್ರಕಾಶ್ ಅವರುಗಳು ತೀವ್ರ ಕಾರ್ಯಾಚರಣೆ ನಡೆಸಿ , ಕೊಲೆ ಪ್ರಕರಣದ ಆರೋಪಿಗಳು ರಾಘವೇಂದ್ರ , ಹರೀಶ್ , ಮಂಜುನಾಥ ರವರುಗಳನ್ನು ಆಂದಪದೇಶದ ಶಾಂತಿಪುರಂನಲ್ಲಿ ಡಿ .18 ರಂದು ಪೊಲೀಸರು ಬಂಧಿಸಿ , ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡೆಕ್ನಾ ಕಿಶೋರ್ ಬಾಬು ಅವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು