ಇತ್ತೀಚಿನ ಸುದ್ದಿ
ಗೋವಾದಲ್ಲಿ ಹೊಸ ರಾಜಕೀಯ ಶಕ್ತಿ ಉದಯ: ಶೇ. 9.54 ಮತಗಳಿಸಿದ ಆರ್ ಜಿಪಿಗೆ 3ನೇ ಸ್ಥಾನ
12/03/2022, 20:29
ಪಣಜಿ(reporterkarnataka.com):
ಪುಟ್ಟ ರಾಜ್ಯ ಗೋವಾದಲ್ಲಿ ರೆವಲ್ಯೂಷನರಿ ಗೋವಾನ್ ಪಾರ್ಟಿ (ಆರ್ ಜಿಪಿ) ಇದೀಗ ಹೊಸ ರಾಜಕೀಯ ಶಕ್ತಿಯಾಗಿ ರೂಪುಗೊಂಡಿದೆ. ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮೂರನೇ ಶಕ್ತಿಯಾಗಿ ಹೊರಹೊಮ್ಮಿದೆ.
ಕ್ರಾಂತಿಕಾರಿ ಗೋವಾನ್ಸ್ ಶೇ. 9.54 ಮತಗಳೊಂದಿಗೆ
ಮೂರನೇ ಸ್ಥಾನವನ್ನು ಪಡೆದಿದೆ. ಎಂಜಿಪಿ, ಎಎಪಿ, ಎಐಟಿಎಂಸಿಗಿಂತ ಹೆಚ್ಚು ಮತ ಹಂಚಿಕೆ ಪಡೆದಿದೆ.
ಗೋವಾದ ಒಟ್ಟು 1164224 ಮತದಾರರಲ್ಲಿ 965997 ಮತದಾನ ಮಾಡಿದ್ದು, ಬಿಜೆಪಿ 33.31%, ಕಾಂಗ್ರೆಸ್ 23.46%, ಆರ್ ಜಿಪಿ 9.54%, ಎಂಜಿಪಿ. 7.60%,
ಎಎಪಿ. 6.77%, ಎಐಟಿಎಂಸಿ 5.21%, .GFP. 1.84% ಎನ್ಸಿಪಿ 1.10%, ಎಸ್ಎಸ್ 0.18% ಪಡೆದಿದೆ. ಗೋವಾದ ಯಾವುದೇ ಹೊಸ ರಾಜಕೀಯ ಪಕ್ಷಕ್ಕೂ ಇಷ್ಟೊಂದು ಸಾಧಿಸಲು ಸಾಧ್ಯವಾಗಿಲ್ಲ.
ಕ್ರಾಂತಿಕಾರಿ ಗೋವಾನ್ಸ್ ಪಕ್ಷ 38 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.ಎಲ್ಲ ಹೊಸ ಮುಖಗಗಳು. ಅಲ್ಡೋನಾ ಮತ್ತು ಪೊರ್ವೊರಿಮ್‌ನಲ್ಲಿ ಮಾತ್ರ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಸಿಲ್ಲ.