ಇತ್ತೀಚಿನ ಸುದ್ದಿ
ಗಣೇಶ ಚತುರ್ಥಿ, ಈದ್ ಮಿಲಾದ್ ಹಬ್ಬ: ನಾರಾಯಣಾಪುರ ಠಾಣೆಯಲ್ಲಿ ಹಿಂದೂ- ಮುಸ್ಲಿಂ ಸಭೆ
02/09/2024, 20:52
ಶಿವು ರಾಠೋಡ್ ಯಾದಗಿರಿ
info.reporterkarnataka@gmail.com
ಯಾದಗೇರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಾಪುರ ಪೋಲಿಸ್ ಠಾಣೆ ಆವರಣದಲ್ಲಿ ಗಣೇಶ ಚತುರ್ಥಿ ಹಾಗೂ ಇದ್ ಮಿಲಾದ್ ಹಬ್ಬದ ಪ್ರಯುಕ್ತ ಕೋಮು ಗಲಭೆ , ಕಾನೂನುಬಾಹಿರ ಚಟುವಟಿಕೆ ನಡೆಯದಂತೆ ಪೂರ್ವಭಾವಿ ಸಭೆ ನಡೆಸಲಾಯಿತು.
ನಾರಾಯಣಪುರ ಪೋಲಿಸ್ ಠಾಣೆ ವ್ಯಾಪ್ತಿಯ ಊರಿನ ಹಿರಿಯರನ್ನು ಕರೆಸಿ , ಬರುವ ಹಬ್ಬದಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆ, ಗಲಾಟೆ ಆಗದಂತೆ ಹಿಂದು ಮತ್ತು ಮುಸ್ಲಿಂ ಹಿರಿಯರನ್ನು ಕರೆಸಿ ಪೂರ್ವಭಾವಿ ಸಭೆ ಪಿಎಸ್ಐ ರಾಜಶೇಖರ್ ರಾಠೋಡ ಮಾಡಿದರು. ಹಾಗೆ ಎಲ್ಲಿ ಅಂತಹ ಚಟುವಟಿಗೆ ತಮಗೆ ಕಂಡಲ್ಲಿ ತಕ್ಷಣ ತಮಗೆ, ಸಂಬಂಧಪಡುವ ಪೋಲಿಸ್ ಸಿಬ್ಬಂದಿಗಳ ಗಮನಕ್ಕೆ ತರುವಂತೆ ತಿಳಿಸಿದರು.
ಸಭೆಯಲ್ಲಿ ಹಿಂದು , ಮುಸ್ಲಿಂ ಬಾಂಧವರು, ಪೋಲಿಸ್ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.