ಇತ್ತೀಚಿನ ಸುದ್ದಿ
ಗಣರಾಜ್ಯೋತ್ಸವ: ಜ.25 ಹಾಗೂ 26ರಂದು ಮುಳಿಯ ರಾಷ್ಟ್ರ ಸಿಂಚನ ಆನ್ ಲೈನ್ ನೃತ್ಯ ಸ್ಪರ್ಧೆ
22/01/2025, 21:37
ಪುತ್ತೂರು(reporterkarnataka.com): ನಾವೀನ್ಯ ಹಾಗೂ ಪರಿಶುದ್ಧ ಆಭರಣಗಳ ಮನೆಮಾತಾಗಿರುವ ಮುಳಿಯ ಜ್ಯುವೆಲ್ಸ್ ಗಣರಾಜ್ಯೋತ್ಸವದ ಪ್ರಯುಕ್ತ ಜ.೨೫ ಹಾಗೂ ೨೬ರಂದು ಮುಳಿಯ ರಾಷ್ಟ್ರ ಸಿಂಚನ ಆನ್ ಲೈನ್ ನೃತ್ಯ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.
ಸೋಲೋ ವಿಭಾಗದಲ್ಲಿ ಮೊದಲ ೧೦೦ ಮಂದಿಗೆ ಅವಕಾಶವನ್ನು ಕಲ್ಪಿಸಲಾಗಿದ್ದು, ೧೨ರಿಂದ ೨೦ ವರ್ಷ ವಯೋಮಿತಿಯ ಹಾಗೂ ಸಾರ್ವಜನಿಕ ವಿಭಾಗ ೨೧ ವರ್ಷ ಮೇಲ್ಪಟ್ಟು ಎರಡು ವಿಭಾಗದಲ್ಲಿ ನಡೆಯಲಿದೆ. ಗ್ರೂಪ್ ವಿಭಾಗದಲ್ಲಿ ಮೊದಲ ೩೫ ಗುಂಪುಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ.
ಹೆಸರು ನೊಂದಾಯಿಸಲು ಜ.೨೩ ಕೊನೆಯ ದಿನವಾಗಿದ್ದು, ಹೆಚ್ಚಿನ ವಿವರಗಳಿಗೆ ೯೩೫೩೦೩೦೯೧೬ ಸಂಪರ್ಕಿಸಬಹುದು. ಸ್ಪರ್ಧೆಯ ಮೊದಲು ಕರೆಯ ಮೂಲಕ ಮಾಹಿತಿಯನ್ನು ನೀಡಬೇಕಾಗಿದ್ದು, ಸ್ಪರ್ಧೆಯು ಝೂಮ್ ಮುಖಾಂತರ ನಡೆಯಲಿದೆ. ದೇಶಭಕ್ತಿ ಗೀತೆಗೆ ಅಥವಾ ಚಲನಚಿತ್ರದ ದೇಶಭಕ್ತಿ ಗೀತೆಗೆ ನೃತ್ಯ ಮಾಡಬಹುದು. ವೈಯಕ್ತಿ ವಿಭಾಗದ ಸ್ಪರ್ಧಿಗೆ ೨ರಿಂದ ೩ ನಿಮಿಷ ಹಾಗೂ ಗುಂಪಿಗೆ ೪-೫ ನಿಮಿಷ ಸಮಯವಕಾಶವನ್ನು ನೀಡಲಾಗಿದೆ. ತೀರ್ಪುಗಾರರ ತೀರ್ಮಾನ ಅಂತಿಮವಾಗಿರುತ್ತದೆ.