7:59 PM Sunday7 - September 2025
ಬ್ರೇಕಿಂಗ್ ನ್ಯೂಸ್
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆದರಿಕೆ: ಆರೋಪಿ ಬಂಧನ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ: ಒಂದು ವಾರದೊಳಗೆ ಭೂ ಪರಿಹಾರಕ್ಕೆ ದರ… Kodagu | ಚೋರರಿದ್ದಾರೆ ಎಚ್ಚರಿಕೆ: ಕುಶಾಲನಗರ; ಹೆಚ್ಚುತ್ತಿರುವ ಶ್ರೀಗಂಧ ಮರಗಳ ಕಳ್ಳತನ ಹೃದಯಘಾತ: ಕಾರಿನಲ್ಲೇ ಉಸಿರು ನಿಲ್ಲಿಸಿದ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಪ್ರಭಾರ ಯೋಜನಾಧಿಕಾರಿ Kodagu | ಸರಣಿ ಅಪಘಾತ: ರಸ್ತೆ ಮಧ್ಯೆ ಅಡ್ಡ ನಿಂತಿದ್ದ ಟ್ರ್ಯಾಕ್ಟರ್ ಗೆ… ವಿರಾಜಪೇಟೆ ಕೊಡಗು ಗೌಡ ಸಮಾಜಕ್ಕೆ ಸುಳ್ಯದ ಕುರುಂಜಿ ವೆಂಕರಮಣ ಗೌಡ ಕುಟುಂಬದಿಂದ 3.5… ಕೋಲಾರ ತಾಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ Mysore | ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆ: ಸಾಹಿತಿ ಬಾನು ಮಸ್ತಾಕ್… ಜಿಎಸ್ ಟಿ ಸರಳೀಕರಣ ಗ್ರಾಹಕ ಸ್ನೇಹಿ ತೀರ್ಮಾನ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮುಳ್ಳಯ್ಯನಗಿರಿ, ದತ್ತಪೀಠ ಮಾರ್ಗದಲ್ಲಿ ರಸ್ತೆ ಕುಸಿತದ ಭೀತಿ: ಸೆ. 14ವರೆಗೆ ಪ್ರವಾಸ ಮುಂದೂಡುವಂತೆ…

ಇತ್ತೀಚಿನ ಸುದ್ದಿ

ತೀರ್ಥಹಳ್ಳಿಯ ಗಾಂಧಿ ಚೌಕದಲ್ಲಿ ಗಣಪದ್ವಯರ ಸಮಾಗಮ!: ಜನಸಾಗರಕ್ಕೆ ಪಟ್ಟಣ ಸಂಪೂರ್ಣ ಸ್ತಬ್ದ..!

07/09/2025, 13:51

ರಶ್ಮಿ ಶ್ರೀಕಾಂತ್ ನಾಯಕ್

info.reporterkarnataka@gmail.com

ಗಣೇಶೋತ್ಸವದ ಹನ್ನೊಂದನೆ ದಿನವಾದ ಶನಿವಾರ ತೀರ್ಥಹಳ್ಳಿಯ ಎರಡು ಅತೀ ದೊಡ್ಡ ಗಣಪತಿಗಳ ವಿಸರ್ಜನಾ ಮೆರವಣಿಗೆ ಅತ್ಯಂತ ವೈಭವದಿಂದ, ವಿಜೃಂಭಣೆಯಿಂದ ನೆರವೇರಿತು. ಎರಡು ಗಣಪತಿಗಳ ಸಮಾಗಮದಲ್ಲಿ ಸೇರಿದ್ದ ಸಾವಿರಾರು ಜನರನ್ನು ನೋಡಿ ಒಂದು ಸಾರಿ ಇಡೀ ತೀರ್ಥಹಳ್ಳಿ ಪಟ್ಟಣ ಸ್ತಬ್ದವಾಯಿತು.


*ಸಾಂಸ್ಕೃತಿಕ ವೈಭವದ ಜೊತೆಗೆ ಸೂಪರ್ ಡಾನ್ಸ್..!:*
ತೀರ್ಥಹಳ್ಳಿ ಪಟ್ಟಣದ ಛತ್ರಕೇರಿಯ ಶ್ರೀ ಸಿದ್ದಿವಿನಾಯಕ ಯುವಕ ಸಂಘದ ಹಾಗೂ ಮೇಲಿನಕುರುವಳ್ಳಿಯ ಶ್ರೀ ವಿದ್ಯಾಗಣಪತಿ ಯುವಕ ಸಂಘದ ಎರಡು ಗಣಪತಿಗಳ ವಿಸರ್ಜನಾ ಮೆರವಣಿಗೆ ಶನಿವಾರ ಮಧ್ಯಾಹ್ನ ಮೂರು ಗಂಟೆಗೆ ಆರಂಭವಾಯಿತು. ಪ್ರತಿ ಬಾರಿಯಂತೆ ಅತ್ಯಂತ ಸರಳ ರಾಜಬೀದಿ ಉತ್ಸವಕ್ಕೆ ಪ್ರಖ್ಯಾತಿ ಪಡೆದ ಛತ್ರಕೇರಿ ಸಂಘದ ಉತ್ಸವ ಸಾಂಸ್ಕೃತಿಕ ವೈಭವದ ಜೊತೆಗೆ ಶೋಭಯಾತ್ರೆ ನಡೆದರೆ ರಾಜಬೀದಿ ಉತ್ಸವದಲ್ಲಿ ಡಾನ್ಸ್ ಮೂಲಕವೇ ಪ್ರಖ್ಯಾತಿ ಪಡೆದ ಮೇಲಿನಕುರುವಳ್ಳಿ ಗಣಪತಿಯ ಮೆರವಣಿಗೆ ಸಹ ಅದ್ದೂರಿಯಾಗಿ ನಡೆಯಿತು.

*ಜನಸಾಗರಕ್ಕೆ ತೀರ್ಥಹಳ್ಳಿ ಪಟ್ಟಣ ಸಂಪೂರ್ಣ ಸ್ತಬ್ದ..!:*
ಎರಡು ಗಣಪತಿಗಳ ಸಮಾಗಮ ಪಟ್ಟಣದ ಗಾಂಧಿಚೌಕದಲ್ಲಿ ಆಗಿದ್ದು 10 ಸಾವಿರಕ್ಕೂ ಜನರು ಒಂದೆಡೆ ಸೇರಿದ್ದು ಇಡೀ ತೀರ್ಥಹಳ್ಳಿ ಪಟ್ಟಣ ಒಂದು ಕ್ಷಣ ಸ್ತಬ್ದವಾದಂತೆ ಕಂಡು ಬಂತು. ಎಷ್ಟೇ ದೂರ ಕಣ್ಣು ಹಾಯಿಸಿ ನೋಡಿದರು ಕೇಸರಿ ಶಾಲು, ಡಾನ್ಸ್, ಯುವಕ – ಯುವತಿಯರ ಸಂಭ್ರಮ, ಗಣಪತಿಗಳ ಸಮಾಗಮ ಸೇರಿದ್ದ ಜನರಿಗೆ ಕಣ್ತುಂಬಿಕೊಳ್ಳುವ ಸುಂದರ ಅವಕಾಶ ಸಿಕ್ಕಿದಂತೆ ಆಗಿತ್ತು. ಮೇಲಿನಕುರುವಳ್ಳಿ ಯುವಕರ ಜಬರ್ದಸ್ತ್ ಡ್ಯಾನ್ಸ್ ಎಲ್ಲರ ಕಣ್ಮನ ಸೆಳೆದರೆ ಛತ್ರಕೇರಿಯ ಸಾಂಸ್ಕೃತಿಕ ವೈಭವ ಮತ್ತಷ್ಟು ರಂಗು ಮೂಡಿಸಿತು.

*ಸಂಘ ಎರಡು ಆದರೇನು ನಾವೆಲ್ಲ ಒಂದೇ..!:*
ಹೌದು ಹಿಂದೂ ಮಹಾಸಭಾ ಗಣಪತಿ ಎಂಬ ಹೆಸರು ಇಟ್ಟು ಒಂದೆಡೆ ಜನ ಸೇರುವುದು ನೋಡಿದ್ದೇವೆ. ಆದರೆ ಇಲ್ಲಿನ ವಿಸರ್ಜನಾ ಮೆರವಣಿಗೆಯಲ್ಲಿ ಎರಡು ಸಂಘಗಳ ಗಣಪತಿಗಳು ಎದುರು ಬಂದಾಗ ಸಂಘಗಳು ಎರಡು, ಗಣಪತಿಗಳು ಎರಡು ಇರಬಹುದು ಆದರೆ ಹಿಂದೂಗಳ ಹಬ್ಬದ ಆಚರಣೆ ವಿಚಾರದಲ್ಲಿ ನಾವೆಲ್ಲರೂ ಒಂದೇ ಎಂಬ ಸ್ಪಷ್ಟ ಸಂದೇಶ ಕೂಡ ನೀಡಿದಂತೆ ಇತ್ತು. ಗಾಂಧಿ ಚೌಕದಲ್ಲಿ ಸೇರಿದ್ದ ಹತ್ತು ಸಾವಿರಕ್ಕೂ ಹೆಚ್ಚು ಜನರನ್ನು ನೋಡಿ ಹಬ್ಬ ಮಾಡಿದ್ರೆ ಹೀಗೆ ಮಾಡಬೇಕು ಎನ್ನುವಂತೆ ಮಾಡಿದ್ದು ಛತ್ರಕೇರಿ ಹಾಗೂ ಮೇಲಿನಕುರುವಳ್ಳಿ ಗಣಪತಿಗಳ ಸಮಾಗಮ.

*ಪೋಲೀಸರ ಕೆಲಸಕ್ಕೆ ದೊಡ್ಡ ಸಲಾಂ..!:*

ಹೌದು ತೀರ್ಥಹಳ್ಳಿ ಸೌಹಾರ್ದತೆಗೆ ಹೆಸರಾದ ಊರು. ಇಲ್ಲಿ ಯಾವುದೇ ಅಹಿತಕರ ಘಟನೆ ಸಹ ನಡೆಯುವುದಿಲ್ಲ. ಆದರೆ
ಸಾವಿರಕ್ಕೂ ಜನರು ಸೇರಿದಾಗ ಏನಾಗುವುದೋ ಎಂಬ ಭಯ ಪೊಲೀಸರಲ್ಲಿ ಇರುತ್ತದೆ. ಆದರೆ ನಿನ್ನೆ ಪೊಲೀಸರು ಸಹ ಎರಡು ಗಣಪತಿಗಳ ಸಮಾಗಮವನ್ನು ಅತ್ಯಂತ ಸಂತೋಷದಿಂದ ವೀಕ್ಷಣೆ ಮಾಡಿದ್ದಲ್ಲದೆ ಇತರೆ ವಾಹನ ಓಡಾಟಕ್ಕೂ ಅನುವು ಮಾಡಿ ಕೊಟ್ಟಿದ್ದರು. 10 ಸಾವಿರಕ್ಕೂ ಹೆಚ್ಚು ಜನರನ್ನು ನಿಭಾಯಿಸಿಕೊಂಡು ಈ ಬಾರಿಯ ಎಲ್ಲಾ ಗಣೇಶೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ಕೀರ್ತಿ ತೀರ್ಥಹಳ್ಳಿ ಪೊಲೀಸರದ್ದು. ಎಲ್ಲಾ ಪೊಲೀಸರಿಗೆ ನಮ್ಮ ಕಡೆಯಿಂದ ಹ್ಯಾಟ್ಸಾಫ್..

ಇತ್ತೀಚಿನ ಸುದ್ದಿ

ಜಾಹೀರಾತು