ಇತ್ತೀಚಿನ ಸುದ್ದಿ
ಗಾಜಾದ ಮೇಲೆ ಇಸ್ರೇಲ್ ಮತ್ತೆ ಏರ್ ಸ್ಟ್ರೈಕ್ : ಕದನ ವಿರಾಮದ ಬಳಿಕ ಮೊದಲ ವಾಯು ದಾಳಿ
16/06/2021, 15:48
ಜೆರುಸಲೇಂ: ಕದನ ವಿರಾಮದಿಂದ ಕೆಲವು ದಿನಗಳ ಕಾಲ ಶಾಂತವಾಗಿದ್ದ ಇಸ್ರೇಲ್- ಪ್ಯಾಲೆಸ್ತೀನ್ ನಡುವೆ ಮತ್ತೆ ಸಂಘರ್ಷ ಏರ್ಪಟ್ಟಿದೆ. ಇಸ್ರೇಲ್ ನ ವಾಯುಪಡೆ ದಕ್ಷಿಣ ಗಾಜಾ ನಗರವಾದ ಖಾನ್ ಯೂನೆಸ್ ನ ಮೇಲೆ ದಾಳಿ ನಡೆಸಿದೆ.
ಇದು ಕದನ ವಿರಾಮ ಒಪ್ಪಂದ ಬಳಿಕ ನಡೆದ ಮೊದಲ ದೊಡ್ಡ ದಾಳಿಯಾಗಿದೆ. ಸಾವು- ನೋವಿನ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ.
ಮೇ ತಿಂಗಳಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೀನಿಯರ ನಡುವೆ 11 ದಿನಗಳ ಕಾಳಗ ನಡೆದಿತ್ತು. ಇದರಲ್ಲಿ 260 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದರೆ, 13 ಮಂದಿ ಇಸ್ರೇಲ್ ಜನರು ಸಾವನ್ನಪ್ಪಿದ್ದರು. ಮೇ 21ರಂದು ಕದನ ವಿರಾಮ ನಡೆದಿತ್ತು.