4:37 PM Sunday25 - January 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ಕೋಲಾರದಲ್ಲಿ ಸರಕಾರದಿಂದಲೇ ವೈದ್ಯಕೀಯ ಕಾಲೇಜು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ ಶಿಕ್ಷಣ ಮತ್ತು ಕೈಗಾರಿಕೆ ಒಗ್ಗೂಡಿದರೆ ಮಾತ್ರ ನಾವೀನ್ಯತೆ ಹೆಚ್ಚಿನ ಅವಕಾಶ ಸಿಗಲಿದೆ: ಇಸ್ರೋ… ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ…

ಇತ್ತೀಚಿನ ಸುದ್ದಿ

Foreign News | ಮಲೇಷ್ಯಾದಲ್ಲಿ ಗ್ಯಾಸ್ ಪೈಪ್‌ಲೈನ್ ಸ್ಫೋಟ: ನೂರಾರು ಮಂದಿಗೆ ಸುಟ್ಟ ಗಾಯ; ಉಸಿರಾಟ ತೊಂದರೆ

02/04/2025, 22:42

ಕೌಲಾಲಂಪುರ(reporterkarnataka.com): ಮಲೇಷ್ಯಾದ ಕೌಲಾಲಂಪುರ ನಗರದ ಹೊರವಲಯದಲ್ಲಿ ಪುಚಾಂಗ್ ಎಂಬಲ್ಲಿ ಗ್ಯಾಸ್ ಪೈಪ್‌ಲೈನ್‌ನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 100ಕ್ಕೂ ಹೆಚ್ಚು ಮಂದಿ ಸುಟ್ಟಗಾಯಗೊಂಡಿದ್ದಾರೆ.
ಗ್ಯಾಸ್ ಪೈಪ್ವಲೈನ್ ಸ್ಫೋಟದಿಂದ ನಾಗರಿಕರಿಗೆ
ಉಸಿರಾಟದ ತೊಂದರೆಗೀಡಾಗಿದ್ದಾರೆ. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಾಗಿದೆ. ಸಾವಿನ ಪ್ರಮಾಣ ಇನ್ನೂ ವರದಿ ಆಗಿಲ್ಲ.
ಈ ಅವಘಡದಲ್ಲಿ ಬೆಂಕಿಯ ಕೆನ್ನಾಲಗೆ 20 ಮಹಡಿಗಳ ಮನೆಯಷ್ಟು ಎತ್ತರಕ್ಕೆ ಹರಡಿದ್ದು, ಐದಾರು ಮೈಲಿ ದೂರದಿಂದಲೂ ಕಾಣಿಸುತ್ತಿದೆ ಅಂತೆ. ಇದು ಎಲ್ಲೋ ದೂರದ ಕಥೆ. ನಮ್ಮ ಕರಾವಳಿಯಲ್ಲೂ ನಾವು ಇಂತಹದೇ ಅಗ್ನಿಕುಂಡದ ಮೇಲೆ ಬದುಕುತ್ತಿದ್ದೇವೆ ಎಂಬುದನ್ನು ಮರೆಯುವಂತಿಲ್ಲ. ಮಂಗಳೂರು-ಕೊಚ್ಚಿ ಗ್ಯಾಸ್ ಪೈಪ್‌ಲೈನ್, ಮಂಗಳೂರು – ಹಾಸನ – ಬೆಂಗಳೂರು ಪೈಪ್ ಲೈನ್, ಪೆರ್ಮುದೆಯಿಂದ ಪಾದೂರಿಗೆ ISPRL ಪೈಪ್‌ಲೈನ್.. ಹೀಗೆ.
ರಾಜಕಾರಣಿಗಳ ಗದ್ದಲ, ಬೇಜವಾಬ್ದಾರಿಗಳೆಲ್ಲ ಏನೇ ಇರಲಿ…. ಇಂತಹ ಅಪಾಯಕಾರಿ ಪೈಪ್‌ಲೈನ್‌ಗಳು, ಪೆಟ್ರೋಲಿಯಂ ರಿಸರ್ವ್ ಎಲ್ಲವೂ ಸುವ್ಯವಸ್ಥಿತ ಮತ್ತು ಸುರಕ್ಷಿತವಾಗಿ ಇರುವಂತೆ ಜವಾಬ್ದಾರಿ ಹೊಂದುವ ಬುದ್ಧಿಯನ್ನು ನಮ್ಮ ದೈವದೇವರುಗಳು ನಮ್ಮ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಕರುಣಿಸಲಿ. ಈ ಎಲ್ಲ ಪೈಪ್‌ಲೈನ್‌ಗಳು ದಟ್ಟ ಜನಸಂದಣಿಗಳ-ಫಲವತ್ತಾದ ಭೂಮಿಗಳ ನಡುವೆಯೇ ಇರುವಂತಹವು. ಹಾಗಾಗಿ ಕರಾವಳಿಯನ್ನು ಇಂತಹ ಅಗ್ನಿ ಅವಘಡಗಳಿಂದ ರಕ್ಷಿಸುವ ಜವಾಬ್ದಾರಿಯನ್ನು ನಾವು ನಂಬಿದ ದೈವಗಳಿಗೇ ಬಿಡೋಣ.
ಮಲೇಷ್ಯಾದಲ್ಲಿ ಸಂಭವಿಸಿದಂತಹ ಈ ಅವಘಡಗಳ ಸುದ್ದಿ ಕೇಳಿದಾಗಲೆಲ್ಲ, ಮನಸ್ಸು ತಳಮಳಿಸುತ್ತದೆ. ಯಾರದ್ದೋ “ವಿಕಾಸಕ್ಕೆ” ನಮ್ಮ ಜೀವಗಳನ್ನೆಲ್ಲ ನಾವು ಅಡಾವು ಇಟ್ಟು ಕುಳಿತುಕೊಳ್ಳುವ ಸ್ಥಿತಿ ಬಂದಿದೆಯಲ್ಲಾ ಎಂದು.

(ಚಿತ್ರ ಸೌಜನ್ಯ: ರಾಯಿಟರ್)

ಇತ್ತೀಚಿನ ಸುದ್ದಿ

ಜಾಹೀರಾತು