9:53 AM Tuesday17 - June 2025
ಬ್ರೇಕಿಂಗ್ ನ್ಯೂಸ್
Davanagere | ದಾವಣಗೆರೆ: 1350 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, ಉದ್ಘಾಟನೆ Bangalore | ಮೋದಿ ಎದುರು ನಿಲ್ಲಬಲ್ಲ ಇನ್ನೊಬ್ಬ ನಾಯಕ ಇಲ್ಲ: ಮಾಜಿ ಪ್ರಧಾನಿ… ಬಸವಸಾಗರ ಜಲಾಶಯ ಭರ್ತಿ: 8 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಿಡುಗಡೆ Kalburgi | ಮೀಸಲಾತಿ, ಜಾತಿ ಗಣತಿ ಕಾಂಗ್ರೆಸ್ಸಿನ ರಾಜಕೀಯ ಡ್ರಾಮಾ: ಕೇಂದ್ರ ಸಚಿವ… ಆರೋಗ್ಯ ಆವಿಷ್ಕಾರ’ದಂತಹ ಕಾರ್ಯಕ್ರಮ ಬಿಜೆಪಿ ಕಲ್ಪನೆಗೂ ಬರಲಿಕ್ಕೆ ಸಾಧ್ಯವಿಲ್ಲ: ಆರೋಗ್ಯ ಸಚಿವ ದಿನೇಶ್… Mangaluru | ಕೋಮು ಹಿಂಸಾಚಾರ ಹತ್ತಿಕ್ಕಲು ವಿಶೇಷ ಕಾರ್ಯಪಡೆ ರೆಡಿ: 4 ತುಕಡಿಗಳ… ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮರು ಸಮೀಕ್ಷೆಗೆ ಸಚಿವ ಸಂಪುಟ ತೀರ್ಮಾನ: ಮುಖ್ಯಮಂತ್ರಿ… ಲಕ್ಕೀ ಲೇಡಿ: ಟ್ರಾಫಿಕ್ ನಲ್ಲಿ 10 ನಿಮಿಷ ಸಿಲುಕಿದ ಮಹಿಳೆಗೆ ಫ್ಲೈಟ್ ಮಿಸ್;… ಅಹಮದಾಬಾದ್: ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಏರ್ ಇಂಡಿಯಾ ಬೋಯಿಂಗ್ ಪತನ; ಬೆಂಕಿಯುಂಡೆಯಾದ… New Delhi | ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ…

ಇತ್ತೀಚಿನ ಸುದ್ದಿ

ಗ್ರೇಟರ್ ಬೆಂಗಳೂರು ವಿರುದ್ದ ಹೋರಾಟ, ಬೆಂಗಳೂರು ಬಂದ್ ಮಾಡಲಾಗುವುದು: ವಾಟಾಳ್ ನಾಗರಾಜ್ ಎಚ್ಚರಿಕೆ

17/05/2025, 18:31

ಬೆಂಗಳೂರು(reporterkarnataka.com): ಸರಕಾರ ಮಾಡಲು ಉದ್ದೇಶಿಸಿರುವ ಗ್ರೇಟರ್ ಬೆಂಗಳೂರು ವಿರುದ್ಧ ಹೋರಾಟ ನಡೆಸಲಾಗುವುದು. ಅಗತ್ಯ ಬಿದ್ದರೆ ಬೆಂಗಳೂರು ಬಂದ್ ಮಾಡಲಾಗುವುದು. ಜೈಲಿಗೂ ಹೋಗಲು ಸಿದ್ದ ಎಂದು ಕನ್ನಡ ಚಳುವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್ ಹೇಳಿದರು.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಗ್ರೇಟರ್ ಬೆಂಗಳೂರು ವಿರೋಧಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಗ್ರೇಟರ್ ಬೆಂಗಳೂರು ಕರ್ನಾಟಕ ಸರ್ಕಾರ ಹೊಸದಾಗಿ ನಿರ್ಮಾಣ ಮಾಡಲು ಹೊರಟಿದ್ದಾರೆ. ಅದಕ್ಕೂ ಮುಂಚೆ ಬಿಬಿಎಂಪಿ ಮತ್ತು ನಗರ ಸಭೆ ಇತ್ತು.1964 ಮತ್ತು 1973ರಲ್ಲಿ ನಗರಸಭೆಯಲ್ಲಿ ನಾನು ಸದಸ್ಯನಾಗಿದ್ದೇ. ಗ್ರೇಟರ್ ಬೆಂಗಳೂರು ಬೇಕಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಗಂಭೀರವಾಗಿ ಚಿಂತನೆ ಮಾಡಬೇಕು ಎಂದರು.
ಬೆಂಗಳೂರು ನಗರದ ನಾಗರಿಕರಿಗೆ ಅಪಶುಕುನ, ಕೆಟ್ಟಸಂಸ್ಕೃತಿ ನಾಂದಿಯಾಗಿದೆ. ಚುನಾವಣೆ ಮುಂದೂಡಿಕೆ ಮಾಡುವ ತಂತ್ರವಾಗಿದೆ.
ಗ್ರೇಟರ್ ಬೆಂಗಳೂರುನಿಂದ ಆನಾಹುತವಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಉಪಮುಖ್ಯಮಂತ್ರಿಯಾಗಿರುತ್ತಾರೆ. ಬಿಜೆಪಿ, ಕಾಂಗ್ರೆಸ್ ಯಾವ ಪಕ್ಷ ಅಧಿಕಾರ ಚುಕ್ಕಾಣೆ ಹಿಡಿದರು ನಮಗೆ ಸಂಬಂಧವಿಲ್ಲ. ಸ್ಥಳೀಯ ಜನಪ್ರತಿನಿಧಿ ಇದ್ದರೆ ಅವರೆ ಸಮಸ್ಯೆಗಳನ್ನು ನೋಡುತ್ತಾರೆ. ಅದರೆ ಇವಾಗ ಸಮಸ್ಯೆ ಕೇಳುವವರಿಲ್ಲ.
ಗುಂಡಿ ಬೆಂಗಳೂರು ಆಗಿದೆ, ಮೊದಲು ಗುಂಡಿ ಮುಚ್ಚುವ ಕೆಲಸವಾಗಬೇಕು. ಕನಕಪುರ, ರಾಮನಗರ ಹಲವಾರು ಪ್ರದೇಶಗಳನ್ನು ಸೇರಿಸುವುದರಿಂದ ಪರಿಹಾರ ಸಾಧ್ಯವಿಲ್ಲ ಎಂದು ಅವರು ನುಡಿದರು.

ಮಹಾಪೌರರು ಒಬ್ಬರೇ ಸಾಕು. ಮೂರು ಮೇಯರ್ ಇದ್ದರೆ ಎತ್ತು ಎರಿಗೆ ಏಳಿಯಿತು, ಕೋಣ ನೀರಿಗೆ ಇಳಿಯಿತು ಎಂಬತಾಗುತ್ತದೆ. ಗ್ರೇಟರ್ ಬೆಂಗಳೂರು ವಿರುದ್ದ ಬೃಹತ್ ಸಾರ್ವಜನಿಕರಿಂದ ಚಳುವಳಿ ಮಾಡಲಾಗುವುದು.
ನಾಡಪ್ರಭು ಕೆಂಪೇಗೌಡರ ಇತಿಹಾಸಕ್ಕೆ ಗ್ರೇಟರ್ ಬೆಂಗಳೂರು ಕೆಟ್ಟ ಸಂಪ್ರದಾಯ ಹಾದಿಕೊಟ್ಟಂತೆ ಆಗುತ್ತದೆ, ಬಿಬಿಎಂಪಿ ಚುನಾವಣೆ ಮಾಡಿ. ಸರ್ಕಾರ ತೀರ್ಮಾನ ತೆಗೆದುಕೊಂಡಿಲ್ಲ ಎಂದರೆ ಬೆಂಗಳೂರು ಬಂದ್ ಕರೆ ನೀಡಲಾಗುವುದು ಎಂದು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು