ಇತ್ತೀಚಿನ ಸುದ್ದಿ
ಫ್ಯಾಟ್ ಸರ್ಜರಿ ವೇಳೆ ಎಡವಟ್ಟು: ಕಿರುತೆರೆ ನಟಿ ಚೇತನಾ ರಾಜ್ ಸಾವು
17/05/2022, 10:42
ಬೆಂಗಳೂರು(reporterkarnataka.com): ಕಿರುತೆರೆ ನಟಿ ಚೇತನಾ ರಾಜ್ ಸಾವನ್ನಪ್ಪಿದ್ದಾರೆ. ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಫ್ಯಾಟ್ ಸರ್ಜರಿ ವೇಳೆಯಲ್ಲಿ ಅವರು ಮೃತಪಟ್ಟಿದ್ದಾರೆ. ಶ್ವಾಸಕೋಶದಲ್ಲಿ ನೀರಿನ ಅಂಶ ಸೇರಿಕೊಂಡು ಅವರು ಸಾವನ್ನಪ್ಪಿದ್ದಾರೆ.ಹಲವಾರು ಧಾರಾವಾಹಿ, ಸಿನಿಮಾಗಳಲ್ಲಿ ಚೇತನ ರಾಜ್ ಅಭಿನಯಿಸಿದ್ದಾರೆ. ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ‘ಗೀತಾ’, ‘ದೊರೆಸಾನಿ’ ಧಾರಾವಾಹಿ ಹಾಗೂ ಹಲವು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.