ಇತ್ತೀಚಿನ ಸುದ್ದಿ
ಫೇಕ್ ಲಿಂಕ್ ಒತ್ತಿ ಕ್ಯಾಷ್ ಕಳೆದುಕೊಂಡು ಸುಂಟಿಕೊಪ್ಪ ಯುವಕನ: 43 ಸಾವಿರ ಮಂಗಮಾಯ!
11/04/2022, 08:23
ಮಡಿಕೇರಿ(reporterkarnataka.com):
ಆನ್ ಲೈನ್ ವಂಚನಾ ಜಾಲದ ಲಿಂಕ್ ಅನ್ನು ಒತ್ತಿ ಯುವಕನೋರ್ವ 43 ಸಾವಿರ ರೂ. ಕಳೆದುಕೊಂಡಿರುವ ಪ್ರಕರಣ ವರದಿಯಾಗಿದೆ. ಆನ್ ಲೈನ್ ವಂಚಕರು ಕಳುಹಿಸಿದ ಲಿಂಕ್ ಮೇಲೆ ಒತ್ತಿ ಕ್ಯಾಷ್ ಕಳೆದುಕೊಂಡ ಯುವಕ ಇದೀಗ ತಲೆ ಮೇಲೆ ಕೈ ಇಟ್ಟುಕೊಂಡಿದ್ದಾರೆ. ಸುಂಟಿಕೊಪ್ಪ 2ನೇ ವಿಭಾಗದ ಸಮೀರ್ ( ಕಿಣ್ಣುಸ್) ಎಂಬುವವರು ಝೆಡ್ ಮನಿ ಎಂಬ app ನಿಂದ 38 ಸಾವಿರ ಮೌಲ್ಯದ ಮೊಬೈಲ್ ಅನ್ನು EMI ಮೂಲಕ ಸಾಲವಾಗಿ ಖರೀದಿಸಿದ್ದರು. ತಿಂಗಳ EMI ಅನ್ನು ನಿಯಮಿತವಾಗಿ ಪಾವತಿಸಿಕೊಂಡು ಬಂದಿದ್ದಾರೆ. ಅದೇ ರೀತಿ ತಾ. 4 ರಂದು ಈ ತಿಂಗಳ EMI ಹಣ ಇವರ ಖಾತೆಯಿಂದ ಪಾವತಿಯಾಗಿದೆ. ಆದರೆ ತಾ. 7 ರಂದು ಪುನಃ ಖಾತೆಯಿಂದ EMI ಹಣ ಜಮೆಯಾಗಿದೆ. ಇದರಿಂದ ವಿಚಾಲಿತರಾದ ಸಮೀರ್ ವಿಚಾರಿಸಲೆಂದು ಝೆಡ್ ಮನಿ ಕಂಪನಿಯ ಕಸ್ಟಮರ್ ಕೇರ್ ಗೆ ಹಲವು ಸಲ ಕರೆ ಮಾಡಿದ್ದಾರೆ. ಆದರೆ ಆ ನಂಬರ್ ದೀರ್ಘ ಕಾಲ buzy ಆಗಿಯೇ ಇದ್ದುದರಿಂದ ಕಾಲ್ ರಿಸೀವ್ ಆಗಲಿಲ್ಲ. ಹೀಗಾಗಿ ಸಮೀರ್ ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ಝೆಡ್ ಲೋನ್ ಕಂಪನಿಯ ವೆಬ್ (ಫೇಕ್) ಸೈಟ್ ಕಣ್ಣಿಗೆ ಬಿದ್ದಿದೆ. ಅದರಲ್ಲಿದ್ದ ಮೊಬೈಲ್ ನಂಬರಿಗೆ ಕರೆ ಮಾಡಿದಾಗ ಅತ್ತಲಿನವರು ಕರೆ ಸ್ವೀಕರಿಸಿರಲಿಲ್ಲ. ಇದಾದ ಸ್ವಲ್ಪ ಹೊತ್ತಿನ ನಂತರ ಬೇರೊಂದು ನಂಬರ್ ನಿಂದ (8178802675) ಸಮೀರ್ ಗೆ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ಹಿಂದಿ ಭಾಷೆಯಲ್ಲಿ ತಾನು ಝೆಡ್ ಲೋನ್ ಕಂಪನಿಯ ಕಸ್ಟಮರ್ ಕೇರ್ ನವನೆಂದು ಹೇಳಿಕೊಂಡಿದ್ದಾನೆ.ಅವನ ಮಾತನ್ನು ನಂಬಿದ ಸಮೀರ್ ರವರು ಲೋನ್ ಕಂಪನಿ ತಿಂಗಳಲ್ಲಿ ಎರಡು ಸಲ EMI ಪಾವತಿಸಿಕೊಂಡಿರುವುದನ್ನು ವಿವರಿಸಿದ್ದಾರೆ. ಅತ್ತಲಿಂದ ಕರೆ ಮಾಡಿದಾತ “ನಿಮಗೆ ಇನ್ನೊಂದು ನಂಬರ್ ನಿಂದ ಕಾಲ್ ಬರುತ್ತೆ. ಅವರು ನಿಮ್ಮ ಪ್ರಾಬ್ಲಮ್ ಸಾಲ್ವ್ ಮಾಡ್ತಾರೆ” ಎಂದು ಹೇಳಿ ಕಾಲ್ ಕಟ್ ಮಾಡಿದ್ದಾನೆ. ನಂತರ ಮತ್ತೊಂದು ನಂಬರ್ (9330964042) ನಿಂದ ಕರೆ ಬಂದಿದೆ.ಕರೆ ಮಾಡಿದಾತ ಮೊಬೈಲ್ ನಲ್ಲಿ Any Desk app install ಮಾಡಲು ಸಮೀರ್ ಗೆ ತಿಳಿಸಿದ್ದಾನೆ. ಆದರೆ ಈ app install ಆಗುತ್ತಿಲ್ಲ ಎಂದು ಸಮೀರ್ ಹೇಳಿದ್ದಾರೆ. ಹೀಗಾಗಿ ಕರೆ ಮಾಡಿದಾತ ಲಿಂಕ್ ವೊಂದನ್ನು ಕಳುಹಿಸ್ತೇನೆ. ಅದನ್ನು ಒತ್ತುವಂತೆಯೂ ಮತ್ತು ಲಿಂಕ್ ಓಪನ್ ಆದ ನಂತರ ಅದರಲ್ಲಿ loan app ಹಾಗೂ ಪ್ರೊಫೈಲ್ ಓಪನ್ ಮಾಡಲು ಹೇಳಿದ್ದಾನೆ. ನಂತರ ಆತ ಕಳುಹಿಸಿದ ಲಿಂಕ್ ಅನ್ನು ಸಮೀರ್ ಒತ್ತಿದ್ದಾರೆ. ಖದೀಮ ಹೇಳಿದಂತೆ ಆ ಲಿಂಕ್ ನಲ್ಲಿ ಲೋನ್ app ಮತ್ತು ಪ್ರೊಫೈಲ್ ಓಪನ್ ಮಾಡಿದ್ದಾರೆ. ಈ ಸಂದರ್ಭ ಸಮೀರ್ ರವರ ಮೊಬೈಲ್ ಅನ್ನು ಕಂಪ್ಲೀಟ್ ಆಗಿ ಅತ್ತ ಕಡೆಯಿಂದ ಕಾಲ್ ಮಾಡಿದ್ದ ಖದೀಮ ಹ್ಯಾಕ್ ಮಾಡಿದ್ದಾನೆ. ನೋಡ ನೋಡುತ್ತಿದ್ದಂತೆಯೇ ಸಮೀರ್ ರವರ ಖಾತೆಯಿಂದ ಮೊದಲಿಗೆ 13 ಸಾವಿರ ಮಾಯವಾಗಿದೆ. ನಂತರ ಒಮ್ಮೆಲೇ 30 ಸಾವಿರ ನಾಪತ್ತೆ ಯಾಗಿದೆ. ಖಾತೆಯಲ್ಲಿದ್ದ ಹಣವೆಲ್ಲಾ ಹ್ಯಾಕರ್ ನ ಪಾಲಾಗುತ್ತಿದ್ದಂತೆಯೇ ಅತ್ತ ಕಡೆಯಿಂದ ಬಂದಿದ್ದ ಕಾಲ್ ಕೂಡ ಕಟ್ ಆಗಿದೆ.ಇದರಿಂದ ತಾನು ಮೋಸ ಹೋಗಿರುವುದನ್ನು ಅರಿತ ಸಮೀರ್ ರವರು ಬ್ಯಾಂಕ್ ಗೆ ತೆರಳಿ ವಿಷಯ ತಿಳಿಸಿ ಸೈಬರ್ ಕ್ರೈಂ ಪೊಲೀಸ್ ಗೆ ದೂರು ನೀಡಿದ್ದಾರೆ.