2:51 PM Friday5 - December 2025
ಬ್ರೇಕಿಂಗ್ ನ್ಯೂಸ್
New Delhi | ಬೆಳ್ಳಿ ವಸ್ತು, ಆಭರಣಗಳಿಗಿನ್ನು BIS ಹಾಲ್‌ಮಾರ್ಕ್‌, HUID ಕಡ್ಡಾಯ ರಾಜ್ಯ ಸರಕಾರ ಅನ್ನದಾತ ರೈತನ ಬಗ್ಗೆ ಕಾಳಜಿ ವಹಿಸುತ್ತಿಲ್ಲ: ಮಾಜಿ ಗೃಹ ಸಚಿವ… ವಿಶೇಷ ಚೇತನರು ಇನ್ನು ವಿಮಾನವೇರುವುದು ಸುಲಭ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಮೊಬಿಲಿಟಿ… ಕೊಡಗಿನಲ್ಲಿ ಮುಂದುವರಿದ ಆನೆ- ಮಾನವ ಸಂಘರ್ಷ: ಕುಶಾಲನಗರ ಬಳಿ ರೈಲ್ವೆ ಬ್ಯಾರಿಕೇಡ್ ಮುರಿದ… ಸಿಎಂ ಸಿದ್ದರಾಮಯ್ಯ – ವೇಣುಗೋಪಾಲ್‌ ಭೇಟಿ ಬೆನ್ನಲ್ಲೇ ದೆಹಲಿಗೆ ಹಾರಿದ ಡಿಸಿಎಂ ಡಿ.ಕೆ.… ಅಧಿಕಾರ ಹಸ್ತಾಂತರ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ -‌ ಕೆ.ಸಿ. ವೇಣುಗೋಪಾಲ್ ಭೇಟಿ; ಮಾತುಕತೆ ಮಂಗಳೂರಿಗೆ ಆಗಮಿಸಿದ ಕೆ.ಸಿ. ವೇಣುಗೋಪಾಲ್: ಡಿಕೆ ಪರ ಘೋಷಣೆ ಕೂಗಿದ ಕೈ ಕಾರ್ಯಕರ್ತರು Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ

ಇತ್ತೀಚಿನ ಸುದ್ದಿ

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಂದ ಅರಣ್ಯ ಒತ್ತುವರಿ: ರೈತ ಸಂಘದಿಂದ ಆರೋಪ; ಅರೆಬೆತ್ತಲೆ ಪ್ರತಿಭಟನೆ

01/12/2024, 21:28

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಹೊಸಹುಡ್ಯ ಜಿಗಲಕುಂಟೆಯಲ್ಲಿ ಮಾಡಿರುವ ಅರಣ್ಯ ಒತ್ತುವರಿಯನ್ನು ಕಂದಾಯ ಮತ್ತು ಅರಣ್ಯ ಅಧಿಕಾರಿಗಳು ಜಂಟಿ ಸರ್ವೇ ಮಾಡಿ ತೆರೆವುಗೊಳಿಸಬೇಕೆಂದು ಆಗ್ರಹಿಸಿ ರೈತ ಸಂಘದಿಂದ ತಾಲೂಕು ಕಚೇರಿಯ ಮುಂದೆ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಯಿತು.
ಒಂದು ವಾರದೊಳಗೆ ಕಂದಾಯ ಅರಣ್ಯಾಧಿಕಾರಿಗಳು ಜಂಟಿ ಸರ್ವೇ ನಡೆಸಿ ಪ್ರಭಾವಿ ಮಾಜಿ ಸ್ಪೀಕರ್ ರಮೇಶ್‌ ಕುಮಾರ್‌ ಅವರು ಜಿಗಲಕುಂಟೆ ಅರಣ್ಯ ಪ್ರದೇಶದ 61 ಎಕರೆ ಭೂ ಒತ್ತುವರಿ ತೆರೆವುಗೊಳಿಸದೆ ಇದ್ದರೆ ರೈತರೇ ಕಾನೂನನ್ನು ಕೈಗೆತ್ತಿಕೊಂಡು ಕಳೆದುಕೊಂಡಿರುವ ಭೂಮಿಯನ್ನು ವಶಕ್ಕೆ ಪಡೆಯುವ ಪ್ರೊ.ನಂಜುಂಡಸ್ವಾಮಿರವರ 80ರ ದಶಕದ ಹೋರಾಟದ ರೈತ ಕ್ರಾಂತಿ ಶ್ರೀನಿವಾಸಪುರ ತಾಲ್ಲೂಕಿನಿಂದಲೇ ಪ್ರಾರಂಭವಾಗುತ್ತದೆ. ಇದು ದೇಶಕ್ಕೆ ಅನ್ನ ಹಾಕುವ ಅನ್ನದಾತನ ಹೊಸ ಕಾನೂನು ಎಂಬುದನ್ನು ಅರಿತುಕೊಂಡು ಸಮಸ್ಯೆ ಬಗೆಹರಿಸಿ ಪ್ರಜಾಪ್ರಭುತ್ವದಲ್ಲಿ ಕಾನೂನು ಎಲ್ಲರಿಗೂ ಒಂದೇ ಎಂದು ತೋರಿಸಿಕೊಡಿ ಎಂದು ಕಂದಾಯ ಅಧಿಕಾರಿಗಳಿಗೆ ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಎಚ್ಚರಿಕೆ ನೀಡಿದರು.
ಪ್ರಭಾವಿ ರಾಜಕಾರಣಿ, ಮಾಜಿ ಸ್ಪೀಕರ್ ರಮೇಶ್‌ ಕುಮಾರ್‌ರವರು ಒತ್ತುವರಿ ಮಾಡಿಕೊಂಡಿರುವ ಜಿಗಲಕುಂಟೆ ಅರಣ್ಯ ಸರ್ವೇ ನಂ.1 ಮತ್ತು 2 ರಲ್ಲಿನ 61 ಎಕರೆ ಒತ್ತುವರಿ ತೆರೆವುಗೊಳಿಸಲು ಕಂದಾಯ ಅಧಿಕಾರಿಗಳೇ ಸರ್ವೇ ಮಾಡದಂತೆ ನಿಮ್ಮ ಮೇಲೆ ಯಾರ ಒತ್ತಡವಿದೆ? ಸಾರ್ವಜನಿಕವಾಗಿ ಬಹಿರಂಗ ಪಡಿಸಿ. ಇಲ್ಲವಾದರೆ ಸರ್ಕಾರಿ ಸಂಬಳ ಬಿಟ್ಟು ರಮೇಶ್ ಕುಮಾರ್‌ರವರ ಬೆಂಗಾವಲಾಗಿ ನಿಯತ್ತಾಗಿ ಕೆಲಸ ನಿರ್ವಹಿಸಬಹುದಲ್ಲವೇ ಎಂದು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು.

ಸರ್ಕಾರಿ ಕೆಲಸ ಪಡೆಯುವಾಗ ಸಂವಿಧಾನದ ಅಡಿಯಲ್ಲಿ ಕಟ್ಟಕಡೆಯ ಪ್ರಜೆಗೂ ನ್ಯಾಯ ದೊರಕಿಸಿಕೊಡುತ್ತೇವೆಂಬ ಆಣೆ ಪ್ರಮಾಣಿ ಮಾಡಿ ಕೆಲಸಕ್ಕೆ ಸೇರುವ ಅಧಿಕಾರಿಗಳೇ ಬಡವರ ಸೇವಕರಾಗದೆ ಶ್ರೀಮಂತರ ಗುಲಾಮರಾಗಿ ಕೆಲಸ ಮಾಡುವುದು ಪ್ರಜಾಪ್ರಭುತ್ವದ ಪ್ರಜಾ ವಿರೋಧಿ ದೋರಣೆ ಅಲ್ಲವೇ ಎಂಬುದು ನಿಮ್ಮ ಮನಸಾಕ್ಷಿಗೆ ಅನಿಸುತ್ತಿಲ್ಲವೇ ಎಂದು ಕಿಡಿ ಕಾರಿದರು.
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಬಡವರ ಸರ್ಕಾರಿ ಒತ್ತುವರಿ ಜಮೀನು ತೆರೆವುಗೊಳಿಸುವ ಕಾರ್ಯಾಚರಣೆಗೆ ಸರ್ವೇ ತಾಂತ್ರಿಕ ಆಡಚಣೆ ಬರುವುದಿಲ್ಲ. ಆದರೆ ಬಲಾಢ್ಯ ರ ನೂರಾರು ಎಕರೆ ಒತ್ತುವರಿ ತೆರೆವುಗೊಳಿಸಲು ಮುಂದಾದಾಗ ಮಾತ್ರ ತಾಂತ್ರಿಕ ಆಡಚಣೆ, ದಾಖಲೆಗಳ ಕೊರತೆ ನೂರೊಂದು ಸಮಸ್ಯೆ ಕಣ್ಣಮುಂದೆ ಬಂದು ನಿಲ್ಲುತ್ತವೆ ಅಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನಾದ್ಯಂತ ಸಾವಿರಾರು ಗೋಮಾಳ ಜಮೀನನ್ನು ಅರಣ್ಯಾಧಿಕಾರಿಗಳು ಮೈಸೂರು ಮಹಾರಾಜರ ಕಾಲದ ದಾಖಲಾತಿಗಳನ್ನು ಮುಂದಿಟ್ಟುಕೊಂಡು ಅರಣ್ಯ ಇಲಾಖೆಗೆ ಸೇರಿದೆ ಎಂದು ನೂರಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಚಿಕ್ಕಪುಟ್ಟ ರೈತರ ಕೃಷಿ ಜಮೀನನ್ನು ಯಾವುದೇ ಕಾನೂನಿನ ಅಡೆತಡೆ ಇಡದೆ ವಶಕ್ಕೆ ಪಡೆಯುತ್ತಿರುವಾಗ ಕಂದಾಯ ಇಲಾಖೆಯಲ್ಲಿನ ದಾಖಲೆಗಳು ಎಲ್ಲಿ ಹೋದವು. ಜಿಲ್ಲೆಯ ಗೋಮಾಳ ಜಮೀನಿನ ದಾಖಲೆಗಳು ಮೈಸೂರಿಗೆ ರಾತ್ರೋ ರಾತ್ರಿ ನಡೆದುಕೊಂಡು ಸೇರಿಕೊಂಡಿವೆಯೇ ಕಂದಾಯ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
ಜಂಟಿ ಸರ್ವೇ ಮಾಡಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿರುವ ರಮೇಶ್‌ ಕುಮಾರ್‌ರವರಿಂದ ಭೂಮಿ ಉಳಿಸಿ ಇಲ್ಲವೇ ರಾಜಿನಾಮೆ ಕೊಟ್ಟು ಮನೆಗೆ ಹೋಗಿ ರೈತರೇ ಕಾನೂನು ಕೈಗೆತ್ತಿಕೊಂಡು ಸರ್ಕಾರಿ ಅರಣ್ಯ ಭೂಮಿಯನ್ನು ಉಳಿಸುವ ಹೋರಾಟಕ್ಕೆ ಚಾಲನೆ ನೀಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಕಂದಾಯ ಅಧಿಕಾರಿಗಳು ತಾಂತ್ರಿಕ ಅಡಚಣೆಯಿಂದ ಸರ್ವೇ ಮಾಡಲು ವಿಳಂಬವಾಗಿದೆ. ಶೀಘ್ರದಲ್ಲಿಯೇ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ತಾಲ್ಲೂಕಾಧ್ಯಕ್ಷ ರಹಳ್ಳಿ ಆಂಜಿನಪ್ಪ, ರಾಜೇಂದ್ರಗೌಡ , ಶೇಕ್‌ಶಪಿವುಲ್ಲಾ, ಆಲವಾಟಿ ಶಿವ, ಈಕಂಬಳ್ಳಿ ಮಂಜುನಾಥ್, ಶಿವಾ ರೆಡ್ಡಿ, ಆನಂದ್‌ ರೆಡ್ಡಿ, ಗೀರೀಶ್, ಮಂಗಸಂದ್ರ ತಿಮ್ಮಣ್ಣ ಮುಂತಾದವರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು