ಇತ್ತೀಚಿನ ಸುದ್ದಿ
ಇ ಖಾತಾ ತಂತ್ರಾಂಶ ಲೋಪ ದೋಷ ಸರಿಪಡಿಸಲು ಮೇಯರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ
18/09/2022, 10:49
ಮಂಗಳೂರು(reporterkarnataka.com):ಹೊಸದಾಗಿ ಇ ಖಾತಾ ತಂತ್ರಾಂಶವನ್ನು ಅನುಷ್ಠಾನ ಮಾಡುವ ಸಂದರ್ಭದಲ್ಲಿ ಕೆಲವೊಂದು ಲೋಪ ದೋಷಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸರಿಪಡಿಸುವ ದೃಷ್ಟಿಯಿಂದ ಮೇಯರ್
ಜಯಾನಂದ್ ಅಂಚನ್ ಅವರ ನೇತೃತ್ವದಲ್ಲಿ ಸಂಬಂಧಪಟ್ಟ ತಂತ್ರಾಂಶ ಅಭಿವೃದ್ಧಿ ಕಂಪನಿಯ ಪ್ರಮುಖರು, ಅಧಿಕಾರಿಗಳ ಸಭೆ ನಡೆಯಿತು.
ಇ ಖಾತಾ ಸಂಬಂಧಿತ ಎಲ್ಲ ಲೋಪದೋಷಗಳನ್ನು ಒಂದೆರಡು ದಿನಗಳಲ್ಲಿ ಸರಿಪಡಿಸಿ ಹೊಸದಾಗಿ ಅನುಷ್ಠಾನ ಮಾಡಿರುವ ತಂತ್ರಾಂಶದಲ್ಲಿ ಇ ಖಾತಾವನ್ನು ನೀಡಲು ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆಯಿತು.ಇ ಖಾತಾ ಸುಲಲಿತವಾಗಿ ನಡೆಯುವ ವರೆಗೆ ಲೋಪದೋಷಗಳನ್ನು ಸರಿಪಡಿಸಿ ಸಾರ್ವಜನಿಕ ಸೇವೆ ಒದಗಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್,ಡಾ. ವೈ. ಭರತ್ ಶೆಟ್ಟಿ, ಪಾಲಿಕೆ ಆಯುಕ್ತರಾದ ಅಕ್ಷಯ್ ಶ್ರೀಧರ್, ಉಪಮೇಯರ್ ಪೂರ್ಣಿಮಾ, ನಿಕಟಪೂರ್ವ ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.














