ಇತ್ತೀಚಿನ ಸುದ್ದಿ
ಚಾಲಕನ ಅಜಾಗರೂಕತೆ: ವಿದ್ಯಾರ್ಥಿಗಳಿಂದ ತುಂಬಿದ್ದ ಕೇರಳ ಮೂಲದ ಪ್ರವಾಸಿ ಬಸ್ ಪಲ್ಟಿ
19/11/2025, 16:22
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಚಾಲಕನ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ತುಂಬಿದ್ದ ಕೇರಳ ಮೂಲದ ಪ್ರವಾಸಿ ಬಸ್ ವೊಂದು ಪಲ್ಟಿಯಾದ ಘಟನೆ ಹಾಸನ-ಕೊಡಗು ಗಡಿಯ ರಾಮನಾಥಾಪುರ ಬಳಿ ನಡೆದಿದೆ.

ಅತಿಯಾಗಿ ಡಿಜೆ ಸದ್ದಿನೊಂದಿಗೆ ತೆರಳುತ್ತಿದ್ದ ಬಸ್ ಚಿಕ್ಕಮಗಳೂರು ಪ್ರವಾಸ ಮುಗಿಸಿ ಹಾಸನ ಮೂಲಕ ಕೊಡಗು ಜಿಲ್ಲೆಗೆ ಆಗಮಿಸುತ್ತಿದ್ದ ವೇಳೆ ಅರಕಲಗೂಡು ರಸ್ತೆಯಲ್ಲಿ ಹಂಪ್ ವೊಂದನ್ನು ಹಾರಿಸಿದ್ದು ತಕ್ಷಣ ಬಸ್ ಪಲ್ಟಿಯಾಗಿದೆ. ಬಸ್ ನಲ್ಲಿದ್ದ ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಸ್ಥಳೀಯರ ಸಹಾಯದಿಂದ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಾಲಕನ ವಿರುದ್ದ ಪ್ರಕರಣ ದಾಖಲಾಗಿದೆ.












