ಇತ್ತೀಚಿನ ಸುದ್ದಿ
ದೊಡ್ಡಬಸವೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ನಟ ದರ್ಶನ್ ಭಾವಚಿತ್ರಗಳ ಇಟ್ಟು ಪೂಜೆ: ಅರ್ಚಕ ಅಮಾನತು
07/08/2024, 00:28
ಗಣೇಶ ಇನಾಂದಾರ ಬಳ್ಳಾರಿ
info.reporterkarnataka@gmail.com
ಜಿಲ್ಲೆಯ ಕುರಗೋಡು ದೊಡ್ಡಬಸವೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ನಟ ದರ್ಶನ್ ತೂಗುದೀಪ ಅವರ ಭಾವಚಿತ್ರಗಳನ್ನು ಇರಿಸಿ, ಪೂಜಿಸಿದ ಆರೋಪದ ಮೇಲೆ ಅರ್ಚಕ ಜೀರ್ ಮಲ್ಲಿಕಾರ್ಜುನ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ದೇವಸ್ಥಾನ ಮಂಡಳಿ ಆದೇಶ ಹೊರಡಿಸಿದೆ.
ಗರ್ಭಗುಡಿಯ ಮೂಲ ವಿಗ್ರಹದ ಮುಂಭಾಗದಲ್ಲಿ ನಟ ದರ್ಶನ್ ಅವರ ವಿವಿಧ ಭಂಗಿಯ ಆರು ಚಿತ್ರಗಳನ್ನು ಇರಿಸಿ ವಿಶೇಷ ಪೂಜೆ ನೆರವೇರಿಸಿದ ವಿಡಿಯೊ ಸೋಮವಾರ ಜಾಲತಾಣದಲ್ಲಿ ಹರಿದಾಡಿತ್ತು. ಇದಕ್ಕೆ ಭಕ್ತರಿಂದ ಟೀಕೆ ವ್ಯಕ್ತವಾಗಿತ್ತು.
‘ದೇವಸ್ಥಾನದ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ’ ಎಂದು ದೇವಸ್ಥಾನದ ಆಡಳಿತಾಧಿಕಾರಿ ಹನುಮಂತಪ್ಪ ತಿಳಿಸಿದ್ದಾರೆ.